https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಕುಡಿಯುವ ನೀರಿನ ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮನೆ ಮಾಲೀಕ ಸೇರಿದಂತೆ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.
ಇಮ್ಮಡಿಹಳ್ಳಿ ದೇವಸ್ಥಾನದ ವೃತ್ತದ ಬಳಿ ವಾಸವಿರುವ ಮುನಿಶಾಮಪ್ಪ ಮನೆಯ ಸಂಪ್ ಕ್ಲೀನ್ ಮಾಡಲು ಒಳಗೆ ಇಳಿದಿದ್ದಾರೆ. ಈ ವೇಳೆ ರಾಸಾಯನಿಕ ಬಳಕೆಯಿಂದ ಉಸಿರಾಟದ ತೊಂದರೆಯಾಗಿ ಮೂರ್ಛೆ ಹೋಗಿದ್ದಾರೆ. ಮನೆ ಮಾಲೀಕ ಮುನಿಶಾಮಪ್ಪನನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್ (40) ಸಾವನ್ನಪ್ಪಿದ್ದಾರೆ.
ರಾಸಾಯನಿಕ ಬಳಕೆಯಿಂದ ಉಸಿರಾಟದ ತೊಂದರೆ ಉಂಟಾಗಿ ಬಳಲುತ್ತಿದ್ದ ಮುನಿಶಾಮಪ್ಪ ಹಾಗೂ ರುದ್ರಕುಮಾರ್ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗಿತ್ತು. ವಿಶ್ವನಾಥ್ ಆಚಾರನನ್ನು ವೈದೇಹಿ ಆಸ್ಪತ್ರೆಗೆ ಕರೆತರಲಾಗುತ್ತಿತ್ತು, ಆದ್ರೆ ದುರದೃಷ್ಟವಶಾತ್ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಮೂವರು ಉಸಿರು ಚೆಲ್ಲಿದ್ದಾರೆ. ಸದ್ಯ ಈ ದುರಂತ ಘಟನೆ ಸಂಬಂಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.