https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ದೆಹಲಿ ಅಬಕಾರಿ ನೀತಿ ಕೇಸಿನಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ವಿನಾಯಿತಿ ನೀಡಿದೆ.
ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ತೀವ್ರ ಭಾವುಕರಾದ ಕೇಜ್ರಿವಾಲ್, “ಸತ್ಯ ಗೆದ್ದಿದೆ” ಅಂತ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.
ಯಾವಾಗ ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತೋ, ಆ ಕ್ಷಣದಲ್ಲಿ ಕೇಜ್ರಿವಾಲ್ ಕಣ್ಣೀರು ಹಾಕಿದ್ದಾರೆ. “ನನ್ನನ್ನು ಮನೆಯಿಂದಲೇ ಎತ್ತಾಕಿಕೊಂಡು ಹೋಗಿ ಜೈಲಿಗೆ ಹಾಕಿದ್ರು. ಆದ್ರೆ ಅದು ನನ್ನನ್ನ ಕುಗ್ಗಿಸಲಿಲ್ಲ. ಇವತ್ತು ಕೋರ್ಟ್ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದಾಗ ಭಾವುಕನಾದೆ” ಅಂತ ತಮ್ಮ ಕಷ್ಟದ ದಿನಗಳನ್ನ ನೆನಪಿಸಿಕೊಂಡಿದ್ದಾರೆ
ಈ ಆದೇಶವನ್ನು ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಹೊರಡಿಸಿದ್ದು, ಆರೋಪಿಗಳ ವಿರುದ್ಧ ಅಭಿಯೋಜನಾ ಸಂಸ್ಥೆಯ ಸಾಕ್ಷ್ಯಗಳಿಗೆ ಬೆಂಬಲವಾಗುವ ಯಾವುದೇ ವಸ್ತುನಿಷ್ಠ ಸಾಕ್ಷ್ಯ ದೊರಕಿಲ್ಲವೆಂದು ಹೇಳಿದರು.
ದೆಹಲಿಯ ಅಬಕಾರಿ ನೀತಿ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತು.
ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆ ವೇಳೆ ಫೆಡರಲ್ ಸಂಸ್ಥೆಯ ಸಮನ್ಸ್‌ಗಳನ್ನು ತಪ್ಪಿಸಿಕೊಂಡಿದ್ದಾರೆ ಎಂಬ ಆರೋಪದ ಎರಡು ಪ್ರಕರಣಗಳಲ್ಲಿ, ಜಾರಿ ನಿರ್ದೇಶನಾಲಯದ (ED) ಅರ್ಜಿಗಳನ್ನು ದೆಹಲಿ ನ್ಯಾಯಾಲಯವು ಜನವರಿಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಸನ್ನು ವಜಾಗೊಳಿಸಿತ್ತು.
ಅಬಕಾರಿ ನೀತಿ ಪ್ರಕರಣದಲ್ಲಿ ವಿನಾಯಿತಿ ನೀಡಿದ ಕೆಲವೇ ಕ್ಷಣಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಮಾಧ್ಯಮಗಳ ಮುಂದೆ ಭಾವುಕರಾಗಿ ಕಣ್ಣೀರು ಹಾಕಿದರು.