https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ನಟ ದರ್ಶನ್ ಅವರ ಅತ್ಯಾಪ್ತ ಎಂದೇ ಗುರುತಿಸಿಕೊಂಡಿರುವ ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾಕ್ಕೆ ಬಿಡುಗಡೆಯ ಮೊದಲ ದಿನವೇ ವಿಘ್ನ ಎದುರಾಗಿದೆ.
ಹಯಗ್ರೀವ ಸಿನಿಮಾದ ಬೆಳಿಗ್ಗಿನ ಹಾಗೂ ಮಧ್ಯಾಹ್ನದ ಶೋಗಳು ರಾಜ್ಯದಾದ್ಯಂತ ರದ್ದಾಗಿವೆ ಎಂದು ತಿಳಿದುಬಂದಿದೆ. ಇಸ್ದು ಚಿತ್ರ ತಂಡದ ಜೊತೆಗೆ ಅಭಿಮಾನಿಗಳಲ್ಲೂ ನಿರಾಸೆಯನ್ನುಂಟು ಮಾಡಿದೆ.
ಹಯಗ್ರೀವ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಬೇಕಿತ್ತು, ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿಮಾದ ಮೊದಲ ಎರಡು ಶೋಗಳು ಅಂದರೆ ಬೆಳಿಗ್ಗೆ 10:30 ಮತ್ತು ಮಧ್ಯಾಹ್ನ 1:30ಗೆ ಪ್ರದರ್ಶನ ಆಗಬೇಕಿದ್ದ ಶೋಗಳು ರದ್ದಾಗಿವೆ. ಈ ಬಗ್ಗೆ ಚಿತ್ರ ತಂಡ ಪ್ರಕಟಣೆ ಹೊರಡಿಸಿದೆ.
ನಟ ಧನ್ವೀರ್ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅನಿವಾರ್ಯ ಕಾರಣಗಳಿಂದ ನಮ್ಮ ಸಿನಿಮಾದ ದಿನದ ಮೊದಲ ಎರಡೂ ಶೋಗಳು ರದ್ದಾಗಿದ್ದು, ಸಂಜೆ 4:30ರ ಶೋನಿಂದ ರಾಜ್ಯದಾದ್ಯಂತ ಅದ್ಧೂರಿಯಾಗಿ ಪ್ರಾರಂಭ ಆಗುತ್ತವೆ, ನೋಡಿ ಹರಸಿ ಎಂದಿದ್ದಾರೆ.