https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ದಕ್ಷಿಣ ಭಾರತದ ಖ್ಯಾತ ನಟಿ ಮೋಹಿನಿ, ತಾವು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಮದುವೆಯಾಗಲು ಬಯಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ರೆಹಮಾನ್ ಅವರ ಮತಾಂತರದಿಂದ ತಮಗೆ ನೋವಾಗಿತ್ತು ಎಂದು ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೋಹಿನಿ, “ನಾನು ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಅವರನ್ನು ಮದುವೆಯಾಗುವ ಆಲೋಚನೆಯೂ ಇತ್ತು” ಎಂದು ಹೇಳುವ ಮೂಲಕ ತಮ್ಮ ಜೀವನದ ಬಹುಕಾಲದ ಸತ್ಯವನ್ನು ಹೊರಹಾಕಿದ್ದಾರೆ.
ನಾನು ಎ.ಆರ್. ರೆಹಮಾನ್ ಅವರ ಅಪ್ಪಟ ಅಭಿಮಾನಿ. ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಕೇಳಿ ಅಂದು ನಾನು ತೀವ್ರವಾಗಿ ನೊಂದಿದ್ದೆ. ಆಗ ನಾನು ಹಿಂದೂ ಧರ್ಮದಲ್ಲಿದ್ದೆ. ಅವರು ಮತಾಂತರಗೊಳ್ಳದೆ ‘ದಿಲೀಪ್’ ಆಗಿಯೇ ಉಳಿಯಬೇಕೆಂದು ನಾನು ಬಯಸಿದ್ದೆ. ಅವರ ಮೇಲೆ ನನಗಿದ್ದ ಇಷ್ಟದ ಬಗ್ಗೆ ಮನೆಯವರಲ್ಲಿ ಹೇಳಿಕೊಳ್ಳೋಣ ಎಂದು ಕೂಡ ಯೋಚಿಸಿದ್ದೆ. ನಮ್ಮಿಬ್ಬರ ನಡುವೆ ಹೆಚ್ಚಿನ ವಯಸ್ಸಿನ ವ್ಯತ್ಯಾಸವಿಲ್ಲದ ಕಾರಣ ಮನೆಯವರು ವಿರೋಧಿಸುತ್ತಿರಲಿಲ್ಲ,” ಎಂದು ಮೋಹಿನಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆದರೆ, ಅಂದು ಎಆರ್ ರೆಹಮಾನ್ ಮತಾಂತರ ಆಗಿದ್ದರಿಂದ ಬೇಸರಗೊಂಡಿದ್ದ ಮೋಹಿನಿ, 2006ರಲ್ಲಿ ತಾವೂ ಕೂಡ ಮತಾಂತರವಾಗಿ ಕ್ರಿಶ್ಚಿಯನ್ ಧರ್ಮ ಸೇರಿದ್ದರು.
ರೆಹಮಾನ್ ಅವರನ್ನು ಮೋಹಿನಿ ಕೇವಲ ಒಮ್ಮೆ ಮಾತ್ರ ಭೇಟಿಯಾಗಿದ್ದರಂತೆ. ಮಲೇಷ್ಯಾದಲ್ಲಿ ನಡೆದ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವೊಂದಕ್ಕೆ ಮೋಹಿನಿ ನಿರೂಪಕಿಯಾಗಿದ್ದರು. “ಕಾರ್ಯಕ್ರಮ ಮುಗಿಸಿ ವಿಮಾನದಲ್ಲಿ ಹಿಂತಿರುಗುವಾಗ, ಅಲ್ಲಿದ್ದ ಹಲವು ಕಲಾವಿದರ ನಡುವೆ ರೆಹಮಾನ್ ಅವರು ಸ್ವತಃ ಬಂದು ನನಗೆ ‘ಹಲೋ’ ಎಂದು ವಿಶ್ ಮಾಡಿದ್ದರು. ಅವತ್ತು ಅವರ ವರ್ತನೆ ನೋಡಿ ವಿಮಾನದಲ್ಲಿದ್ದ ಇತರ ಕಲಾವಿದರೆಲ್ಲರೂ ನನ್ನ ಬಗ್ಗೆ ಅಸೂಯೆ ಪಟ್ಟಿದ್ದರು,” ಎಂದು ಅವರು ವಿವರಿಸಿದ್ದಾರೆ.