https://youtube.com/shorts/N5x7_cDJ-pw?si=NiCZz1Vb_Is4d402
Subscribe ನ್ಯೂಸಿಕ್ಸ್ ಕನ್ನಡ
newsics.com
ಭುವನೇಶ್ವರ: ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮಿ ಬಳಿ 30 ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಓಡಿಶಾಸ ಕಟಕ್‌ನ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ ಎಂಬ ಅಧಿಕಾರಿಯನ್ನ ಬಂಧಿಸಲಾಗಿತ್ತು.
ಇದೀಗ ಮೊಹಂತಿ ವಾಸವಿದ್ದ ಒಡಿಶಾ ವಿಜಿಲೆನ್ಸ್ ಫ್ಲಾಟ್, ಭದ್ರಕ್‌ನ ಮಠಸಾಹಿಯಲ್ಲಿರುವ ಪೋಷಕರ ಮನೆ ಮತ್ತು ಕಟಕ್‌ನಲ್ಲಿರುವ ಆಫಿಸ್‌ನ ಕೋಣೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಿಆರ್‌ಎಸ್ ಫ್ಲ್ಯಾಟ್‌ನೊಳಗೆ ಟ್ರೋಲಿ ಬ್ಯಾಗ್‌ನಲ್ಲಿದ್ದ ನಗದು ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಭುವನೇಶ್ವರ ನಗರದಲ್ಲಿ ದೇಬಬ್ರತ ಮೊಹಂತಿ ಅರಮನೆಯಂತಹ ಎರಡು ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಹಣದ ಜೊತೆಯಲ್ಲಿ 130 ಗ್ರಾಂಗೂ ಅಧಿಕ ಚಿನ್ನ ಸಿಕ್ಕಿದೆ.
ಕಲ್ಲಿದ್ದಲು ಡಿಪೋ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ಮತ್ತು ಸಾರಿಗೆ ಅನುಮತಿ ನೀಡಲು ಉದ್ಯಮಿಗೆ ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಮೊಹಂತಿಯ ಲಂಚ ಕೇಳಿದ ವಿಷಯವನ್ನು ವಿಜಿಲೆನ್ಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಮಂಗಳವಾರ ರಾತ್ರಿ ಲಂಚ ಪಡೆಯುತ್ತಿರುವಾಗಲೇ ಮೊಹಂತಿಯನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಮೊಹಂತಿಗೆ ಸಂಬಂಧಿಸಿದ ಆಸ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ.