newsics.com
ಶುಭೋದಯ
ನಿತ್ಯ ಪಂಚಾಂಗ
10 ಆಗಸ್ಟ್ 2024, ಶನಿವಾರ
ದಿನ ವಿಶೇಷ:
* ಸೂಪೋದನ ವರ್ಣಷಷ್ಠಿ
* ಅಶ್ವತ್ಥ ಮಾರುತಿ ಪೂಜೆ
* ಶ್ರಿಯಾಳ ಷಷ್ಠಿ
* ಕಲ್ಕಿ ಜಯಂತಿ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 10/08/2024
ತಿಂಗಳು – ಆಗಸ್ಟ್
ಬಣ್ಣ – ನೀಲಿ
ವಾರ – ಶನಿವಾರ
ತಿಥಿ – ಷಷ್ಠಿ 29:44:29*
ಪಕ್ಷ – ಶುಕ್ಲ
ನಕ್ಷತ್ರ – ಚಿತ್ತಾ 29:47:40*
ಯೋಗ – ಸಾಧ್ಯ 14:50:25
ಕರಣ – ಕೌಲವ 16:30:42
ಕರಣ – ತೈತುಲ 29:44:29**
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಕನ್ಯಾ till 16:17:08
ಚಂದ್ರ ರಾಶಿ ತುಲಾ from 16:17:08
ಸೂರ್ಯ ರಾಶಿ ಕರ್ಕಾಟಕ
ಋತು – ವರ್ಷ
ಸೂರ್ಯೋದಯ 06:07:55
ಸೂರ್ಯಾಸ್ತ 18:41:45
ಹಗಲಿನ ಅವಧಿ 12:33:50
ರಾತ್ರಿಯ ಅವಧಿ 11:26:18
ಚಂದ್ರೋದಯ 10:28:46
ಚಂದ್ರಾಸ್ತ 22:28:15
ರಾಹು ಕಾಲ 09:16 – 10:51 ಅಶುಭ
ಯಮಗಂಡ ಕಾಲ 13:59 – 15:33 ಅಶುಭ
ಗುಳಿಕ ಕಾಲ 06:08 – 07:42
ಅಭಿಜಿತ್ 11:59 – 12:50 ಶುಭ
ದುರ್ಮುಹೂರ್ತ 07:48 – 08:39 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಚೆನ್ನಾಗಿ ಕಾದ ಕಬ್ಬಿಣದ ಮೇಲೆ ಬಿದ್ದ ನೀರಿನ ಹನಿಯು ಕುರುಹೂ ಇಲ್ಲದಂತೆ ನಾಶವಾಗುತ್ತದೆ. ಅದೇ ಹನಿ ಕಮಲದ ಎಲೆಯ ಮೇಲೆ ಬಿದ್ದಾಗ ಮುತ್ತಿನಂತೆ ಹೊಳೆಯುತ್ತದೆ. ಅದು ಸ್ವಾತಿ ಮಳೆಯಲ್ಲಿ ಸಮುದ್ರದಲ್ಲಿನ ಕಪ್ಪೆ ಚಿಪ್ಪಿನ ಮೇಲೆ ಬಿದ್ದಿದ್ದೇ ಆದರೆ ಮುತ್ತೇ ಆಗಿಬಿಡುತ್ತದೆ. ಆದ್ದರಿಂದ ಬಹುತೇಕ ನಮ್ಮ ಅಧಮ, ಮಧ್ಯಮ, ಉತ್ತಮ ಗುಣಗಳು ಸಹವಾಸದಿಂದ ಉಂಟಾಗುತ್ತವೆ. ಸಹವಾಸ ಮಾಡುವಾಗ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು.
– ನೀತಿಶತಕ
***
ಇಂದಿನ ಇತಿಹಾಸ
ಆಗಸ್ಟ್ 10
* ಅಲ್ಲಾದಿಯಾ ಖಾನ್ – ಉಸ್ತಾದ್ ಅಲ್ಲಾದಿಯಾ ಖಾನ್ ಅವರು ಆಗಸ್ಟ್ 10, 1855 ರಂದು ಜನಿಸಿದರು. ಇವರು ಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕರಾಗಿದ್ದರು. ಇವರಿಗೆ ಗಾನ ಸಾಮ್ರಾಟನೆಂಬ ಬಿರುದಿತ್ತು. ಇವರು ತಮ್ಮದೇ ವಿಶಿಷ್ಟ ಶೈಲಿಯನ್ನು ಪ್ರಾರಂಭಿಸಿದರು, ಅದಕ್ಕೆ ಜೈಪುರ್ – ಅತ್ರೌಲಿ ಘರಾಣೆಯೆಂದು ಕರೆಯುತ್ತಾರೆ. ಇದು ಆಗ್ರಾ ಘರಾಣೆಯ ಪಾಯಾದ ಮೇಲೆ ಕಟ್ಟಲ್ಪಟ್ಟಿದೆ. ಇವರು ಅನೇಕ ಹಳೆಯ ರಾಗಗಳನ್ನು ಪುನರುಜ್ಜೀವನಗೊಳಿಸಿದರು ಮತ್ತು ಅನೇಕ ಹೊಸ ರಾಗಗಳನ್ನು ಮತ್ತು ಚೀಜ್ ಗಳನ್ನು ರಚಿಸಿದರು.
* ಆಗಸ್ಟ್ 10, 1821 ರಂದು ಅಮೆರಿಕದ 24 ನೇ ರಾಜ್ಯವಾಗಿ ಮಿಸ್ಸೌರಿ ಸೇರ್ಪಡೆಯಾಯಿತು.
* ಆಗಸ್ಟ್ 10, 1869 ರಂದು ಚಲಿಸುವ ಚಿತ್ರ ಪ್ರಕ್ಷೇಪಕ ಕ್ಕೆ ಓ.ಬಿ.ಬ್ರೌನ್ ಪೇಟೆಂಟ್ ಪಡೆದರು.
* ಆಗಸ್ಟ್ 10, 1927 ರಂದು ಮನಾಲಿ ಕಲ್ಲತ್ ವೈನು ಬಪ್ಪು ಅವರ ಜನಿಸಿದರು. ಭಾರತೀಯ ಖಗೋಳತಜ್ಞರಾದ ಇವರು ‘ಬಪ್ಪು – ಬಾಪ್ – ನ್ಯೂಕಿರ್ಕ್’ ಧೂಮಕೇತುವನ್ನು ಕಂಡು ಹಿಡಿದವರು. ತಮಿಳುನಾಡಿನ ಕಾವಲೂರಿನಲ್ಲಿರುವ ಖಗೋಳ ವೀಕ್ಷಣಾಲಯಕ್ಕೆ ಬಪ್ಪು ಅವರ ಹೆಸರನ್ನೇ ಇಡಲಾಗಿದೆ.
* ಆಗಸ್ಟ್ 10, 1986 ರಂದು ಭಾರತದ ಮಾಜಿ ಸೇನಾ ದಂಡನಾಯಕ ಜನರಲ್ ಅರುಣ್ ಶ್ರೀಧರ್ ವೈದ್ಯ ಅವರನ್ನು ಸಿಖ್ ಉಗ್ರಗಾಮಿಗಳು ಪುಣೆಯಲ್ಲಿ ಗುಂಡಿಟ್ಟು ಕೊಲೆಗೈದರು.
* ಆಗಸ್ಟ್ 10, 1988 ರಂದು ದೂರವಾಣಿ ಕದ್ದಾಲಿಕೆ ಪ್ರಕರಣದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದರು.