https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು : ಬೆಂಗಳೂರಿನ ಜೀವನಾಡಿ ಎನಿಸಿಕೊಂಡಿರುವ ನಮ್ಮ ಮೆಟ್ರೋದ ಪ್ರಯಾಣ ದರವನ್ನು ಶೀಘ್ರದಲ್ಲೇ ಪರಿಷ್ಕರಿಸಲು BMRCL (ಬೆಂಗಳೂರು ಮೆಟ್ರೋ ರೈಲು ನಿಗಮ) ಸಿದ್ಧತೆ ನಡೆಸಿದೆ.
ಮೆಟ್ರೋ ನಿಗಮವು ದರ ಪರಿಷ್ಕರಣೆ ಕುರಿತಾದ ಪ್ರಮುಖ ಹೆಜ್ಜೆಯನ್ನಿಟ್ಟಿದೆ. ಈ ಹಿಂದೆ ಶೇ. 5ರಷ್ಟು ವಾರ್ಷಿಕ ಸ್ವಯಂಚಾಲಿತ ದರ ಏರಿಕೆಗೆ ಪ್ರಸ್ತಾಪಿಸಲಾಗಿತ್ತು. ಆದರೆ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಈಗ ಹೊಸ ವರದಿ ಬಂದ ನಂತರ ಸರ್ಕಾರ ಎಷ್ಟು ಏರಿಕೆಗೆ ಸಮ್ಮತಿ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮೆಟ್ರೋ ನಿರ್ವಹಣೆ, ಸಿಬ್ಬಂದಿ ವೇತನ, ವಿದ್ಯುತ್ ವೆಚ್ಚ ಮತ್ತು ಆರ್ಥಿಕ ನಷ್ಟದ ಕುರಿತು ಬಿಎಂಆರ್‌ಸಿಎಲ್ ಆಂತರಿಕ ಆಡಿಟ್ ಪೂರ್ಣಗೊಳಿಸಿದೆ. ಈ ವರದಿಯನ್ನು ನಾಳೆ (ಫೆಬ್ರವರಿ 25, 2026) ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಾಗುತ್ತದೆ.ಈ ಹಿಂದೆ ಶೇ. 5ರಷ್ಟು ದರ ಏರಿಕೆಗೆ ಪ್ರಸ್ತಾಪಿಸಲಾಗಿತ್ತು.
ಆದರೆ ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ, ಸದ್ಯಕ್ಕೆ ಶೇ. 1ರಷ್ಟು ಮಾತ್ರ ದರ ಏರಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.ಮೆಟ್ರೋ ಸಂಸ್ಥೆಯು ಅನುಭವಿಸುತ್ತಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಮತ್ತು ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ವಾದಿಸುತ್ತಿದೆ.ಸರ್ಕಾರದ ಅನುಮೋದನೆ ದೊರೆತರೆ, ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ.