Subscribe ನ್ಯೂಸಿಕ್ಸ್ ಕನ್ನಡ
newsics.com
ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ 29 ವರ್ಷದ ನರ್ಸ್ ಕ್ರಿಸ್ಟಿ ರಾಬರ್ಟ್ ಕಳೆದ ನಾಲ್ಕು ವರ್ಷಗಳಿಂದ ಐಸಿಯು (ICU) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಅನೇಕ ರೋಗಿಗಳ ಅಂತಿಮ ಕ್ಷಣಗಳನ್ನು ಕಣ್ಣಾರೆ ಕಂಡಿದ್ದಾರೆ. ಅವರ ಅನುಭವ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕ್ರಿಸ್ಟಿ ಹೇಳುವ ಪ್ರಕಾರ,
ಸಾವಿಗೆ ಕೆಲವೇ ಗಂಟೆಗಳು ಅಥವಾ ನಿಮಿಷಗಳು ಬಾಕಿ ಇರುವಾಗ ರೋಗಿಗಳಲ್ಲಿ ಒಂದು ವಿಚಿತ್ರ ಬದಲಾವಣೆ ಕಾಣಿಸುತ್ತದೆ. ಕೆಲವೊಮ್ಮೆ ಅವರ ದೇಹದ ಸ್ಥಿತಿ ಸಾಮಾನ್ಯವಾಗಿಯೇ ಕಾಣುತ್ತದೆ. ವೈದ್ಯರು “ಅಪಾಯ ಇಲ್ಲ” ಎಂದು ಹೇಳಿದರೂ, ರೋಗಿಗಳು ತಮ್ಮೊಳಗೆ ಏನೋ ನಡೆಯುತ್ತಿದೆ ಎಂದು ಅನುಭವಿಸುತ್ತಾರೆ.
ಅವರು ಹೇಳುವಂತೆ, ಸಾಯುವ ಮುನ್ನ ಬಹುತೇಕ ರೋಗಿಗಳು ಒಂದೇ ರೀತಿಯ ಮಾತುಗಳನ್ನು ಹೇಳುತ್ತಾರೆ. “ದಯವಿಟ್ಟು ನನ್ನ ಕುಟುಂಬಕ್ಕೆ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿ”, “ನನಗೆ ಹುಷಾರಿಲ್ಲ, ನಾನು ಸಾಯುತ್ತಿದ್ದೇನೆ ಎಂದು ನನಗೆ ಗೊತ್ತಾಗಿದೆ.” ಇವು ಸಾಮಾನ್ಯವಾಗಿ ಕೇಳಿಬರುವ ಮಾತುಗಳು. ಈ ಮಾತುಗಳನ್ನು ಹೇಳಿದ ಕೆಲವೇ ಸಮಯದ ಬಳಿಕ ರೋಗಿಯು ನಿಧನರಾಗುತ್ತಾರೆ ಎಂದು ಅವರು ವಿವರಿಸಿದ್ದಾರೆ. ಈ ಅನುಭವವನ್ನು ಕಿರ್ಸ್ಟಿ ಒಂದು ಸಾಮಾಜಿಕ ಮಾಧ್ಯಮ ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಆ ವೀಡಿಯೊಗೆ ಲಕ್ಷಾಂತರ ಜನರು ವೀಕ್ಷಣೆ ನೀಡಿದ್ದಾರೆ. ಹಲವರು ತಮ್ಮದೇ ಅನುಭವಗಳನ್ನು ಕಾಮೆಂಟ್ ಮಾಡಿದ್ದಾರೆ. ಕೆಲವು ವೈದ್ಯಕೀಯ ಸಿಬ್ಬಂದಿಯೂ ಈ ಮಾತಿಗೆ ಬೆಂಬಲ ನೀಡಿದ್ದಾರೆ.
ಕಿರ್ಸ್ಟಿ ಜನರಿಗೆ ಸಂದೇಶ ಏನು?
ಜೀವನವೆಂದರೆ ಹಣ ಅಥವಾ ಆಸ್ತಿ ಸಂಗ್ರಹಿಸುವುದಲ್ಲ. ಕೊನೆಯಲ್ಲಿ ನಮ್ಮ ಜೊತೆ ಉಳಿಯುವುದು ಪ್ರೀತಿ ಮತ್ತು ಸಂಬಂಧಗಳೇ. ಕುಟುಂಬವನ್ನು ಪ್ರೀತಿಸಿ, ಇತರರಿಗೆ ಸಹಾಯ ಮಾಡಿ, ಕೃತಜ್ಞತೆಯಿಂದ ಬದುಕಿ ಎಂದು ಅವರು ಸಲಹೆ ನೀಡುತ್ತಾರೆ.
ವಿವಿಧ ಬೇಡಿಕೆಗಳ ಈಡೇರಿಸುವಲ್ಲಿ ಸರ್ಕಾರ ವಿಫಲ; ಮಾ11ರಿಂದ ಮುಷ್ಕರ ನಡೆಸಲು ಮುಂದಾದ ವೈದ್ಯಾಧಿಕಾರಿಗಳು