https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಮದುವೆಯಾದ ಮರುದಿನ ಪತಿಯೊಂದಿಗೆ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಾಜಿ ಪ್ರಿಯಕರ ಬಂದೂಕು ತೋರಿಸಿ, ನವವಧುವನ್ನು ಅಪಹರಿಸಿರುವ ಘಟನೆ ಒಡಿಶಾದ ಬಲಂಗೀರ್ನಲ್ಲಿ ನಡೆದಿದೆ. ಈ ಕುರಿತು ತರ್ಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರು ತಿಂಗಳ ಹಿಂದೆ ಬಲಂಗೀರ್ ಜಿಲ್ಲೆಯ ಕಾಮಾಖ್ಯನಗರದ ರಿಕು ಪಟೇಲ್ ಮತ್ತು ಬೌಧ್ ಜಿಲ್ಲೆಯ ಕಾಂತಮಲ್ ರಥಪದದ ಯುವತಿಯ ನಡುವೆ ಮದುವೆ ನಿಶ್ಚಯವಾಗಿತ್ತು. ಅದರಂತೆ ಶನಿವಾರ ಅವರ ವಿವಾಹ ಜರುಗಿತ್ತು. ಮದುವೆಯಾದ ಬಳಿಕ ಮದುಮಗ ರಿಕು ಭಾನುವಾರ ತನ್ನ ಪತ್ನಿಯೊಂದಿಗೆ ತನ್ನೂರಾದ ಕಾಮಾಖ್ಯನಗರಕ್ಕೆ ಹಿಂತಿರುಗುತ್ತಿದ್ದ.
ಈ ವೇಳೆ ಅವರು ಸಾಗುತ್ತಿದ್ದ ವಾಹನವನ್ನು ಕೆಲ ಯುವಕರ ಗುಂಪು ಸೋನೆಪುರ್ ಜಿಲ್ಲೆಯ ತರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಜನ ರಸ್ತೆಯಲ್ಲಿ ತಡೆದಿದ್ದರು. ಏನಾಗುತ್ತಿದೆ ಎಂದು ಅರಿಯುವ ಮೊದಲೇ ಬಂದೂಕನ್ನು ತೋರಿಸಿ ಹೆದರಿಸಿದ್ದು, ನವವಿವಾಹಿತ ವಧುವನ್ನು ಕರೆದುಕೊಂಡು ಪರಾರಿಯಾಗಿದ್ದಾರೆ.
ಮಾಜಿ ಪ್ರಿಯಕರನಿಂದ ಕೃತ್ಯ ಶಂಕೆ: ಪ್ರಾಥಮಿಕ ಮಾಹಿತಿಯ ಪ್ರಕಾರ, ವಧುವನ್ನು ಅಪಹರಿಸಿದ್ದು, ಆಕೆಯ ಪ್ರಿಯಕರನಾಗಿದ್ದು, ಆತನೇ ಅಪಹರಿಸಿದ್ದಾನೆ ಎಂದು ಆರೋಪಗಳು ಕೇಳಿಬಂದಿವೆ. ವರನ ಕುಟುಂಬ ಕೂಡ ಇದೇ ರೀತಿ ಆರೋಪಿಸಿದೆ. ಆದರೆ, ಪೊಲೀಸರ ತನಿಖೆಯಲ್ಲಿ ಇದು ಸ್ಪಷ್ಟವಾಗಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಗೆ ಮುಂದಾಗಿದ್ದಾರೆ.
ವಜ್ರದ ವ್ಯಾಪಾರಿ ಜೊತೆ ಮಲೈಕಾ ಡೇಟಿಂಗ್; ಇಬ್ಬರ ನಡುವಿನ ಏಜ್ ಗ್ಯಾಪ್ ಎಷ್ಟು?