newsics.com
ಬೆಂಗಳೂರು: ಝಿ ಕನ್ನಡ ಹೊಸದೊಂದು ಪ್ರಯತ್ನ ಮಾಡ್ತಿದ್ದು, ಭಕ್ತಿ-ಶಕ್ತಿಯ ಸಂಕೇತವಾಗಿರುವ ರಾಯರ ಕತೆಯನ್ನು ಧಾರಾವಾಹಿ ರೂಪದಲ್ಲಿ ತರಲು ತಯಾರಿ ನಡೆಸಿದೆ.
ಈ ಬಗ್ಗೆ ಖುದ್ದು ಝಿ ಕನ್ನಡ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರೇ ಮಾಹಿತಿ ನೀಡಿದ್ದಾರೆ.
ರಾಯರ ಆರಾಧನೆಯ ಕುರಿತು ಧಾರಾವಾಹಿ ಮಾಡ್ಬೇಕು ಅನ್ನೋದು ರಾಘವೇಂದ್ರ ಹುಣಸೂರು ಅವರ ಕನಸಾಗಿತ್ತಂತೆ. ಆ ಕನಸು ಸದ್ಯ ನನಸಾಗ್ತಿದೆ. ಈಗಾಗಲೇ ಸ್ಟೋರಿ ರೆಡಿ ಮಾಡಿಕೊಂಡಿರೋ ತಂಡ ಇದೇ ಆಗಸ್ಟ್ 18ನೇ ತಾರೀಖು ಟೀಸರ್ ರಿಲೀಸ್ ಮಾಡಲಿದೆ ಎಂದರು.
ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಶ್ರೀಗುರು ರಾಘವೇಂದ್ರ ವೈಭವ ಅನ್ನೋ ಧಾರಾವಾಹಿ ಸುಮಾರು 12 ವರ್ಷಗಳ ಹಿಂದೆ ಪ್ರಸಾರವಾಗಿತ್ತು. ಆ ಬಳಿಕ ಯಾವುದೇ ಆ ಥರದ ಕತೆಗಳು ಬಂದಿರಲಿಲ್ಲ. ಈಗ ಝಿ ವಾಹಿನಿ ರಾಯರ ಕುರಿತು ಹೊಸ ಧಾರಾವಾಹಿಯನ್ನು ಪ್ಲ್ಯಾನ್ ಮಾಡಿಕೊಂಡಿರೋದು ರಾಯರ ಭಕ್ತರಿಗೆ ಹೊಸ ಅನುಭವ ನೀಡಲಿದೆ.
ಹೆಣ್ಣುಮಕ್ಕಳ ಮದುವೆ ವಯಸ್ಸು 9 ವರ್ಷಕ್ಕೆ ಇಳಿಸಲು ಸಿದ್ಧತೆ..!; ಇರಾಕ್ ಸರ್ಕಾರದ ವಿರುದ್ಧ ಆಕ್ರೋಶ
ಬೆಕ್ಕು ಕಚ್ಚಿ ಶಿವಮೊಗ್ಗದ ಮಹಿಳೆ ಸಾವು..!; ಬೆಕ್ಕನ್ನು ಸಾಕುವವರೇ ಇನ್ಮೇಲೆ ಹುಷಾರ್!