https://youtube.com/shorts/9RsasXrq5aU?si=61YTJAfsqMgsMtHR
Subscribe ನ್ಯೂಸಿಕ್ಸ್ ಕನ್ನಡ
newsics.com
ಲಖನೌ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಅವರ ಶಿಷ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರಯಾಗರಾಜ್‌ನ ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯವೊಂದು ಶನಿವಾರ ಆದೇಶಿಸಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ವಿನೋದ್ ಕುಮಾರ್ ಚೌರಾಸಿಯಾ ಅವರು ಪೊಲಿಸರಿಗೆ ನಿರ್ದೇಶನ ನೀಡಿದ್ದಾರೆ.
ಕಳೆದ ವಾರ ಅವಿ ಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಜಿಗಳ ಈ ಲೈ0ಗಿಕ ಕಿರುಗಳ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಪೋಕ್ಸ್ ಕೋರ್ಟ್ ಸ್ಪೆಷಲ್ ಜಡ್ಜ್ ವಿನೋದ್ ಕುಮಾರ್ ಚೌರಾಸಿಯಾ ಆದೇಶ ಕಾಯ್ದಿರಿಸಿದ್ದರು. ಮತ್ತಷ್ಟು ದಾಖಲೆ ಹಾಗೂ ಸಾಕ್ಷ್ಯಗಳಿಗಾಗಿ ಆದೇಶ ಕಾಯ್ದಿರಿಸಲಾಗಿತ್ತು. ಇದೀಗ ಆದೇಶ ಹೊರಬಂದಿದ್ದು, ಇಬ್ಬರು ಸ್ವಾಮೀಜಿಗಳಿಗೆ ಸಂಕಷ್ಟ ಹೆಚ್ಚಾಗಿದೆ.
ಅವಿಮುಕ್ತೇಶ್ವರಾನಂದ ಸರಸ್ವತಿ ಸಾಮೀಜಿಗಳ ವಿದ್ಯಾ ಮಠದ ನಾಲ್ಕನೇ ಮಹಡಿಯಲ್ಲಿ ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅಶುತೋಶ್ ಬ್ರಹ್ಮಾಚಾರಿ ಮಹಾರಾಜ್ ದೂರು ನೀಡಿದ್ದರು. ಇದಕ್ಕೆ ಪೂರಕವಾದ ಕೆಲ ದಾಖಲೆಗಳನ್ನು ನೀಡಿದ್ದರು. ಈ ದಾಖಳೆಗಳನ್ನು ಪರಿಶೀಲಿಸಿ ಸ್ವಾಮೀಜಿಗಳ ವಿರುದ್ದ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದರು. ಇದಕ್ಕೆ ಪೂರಕವಾಗಿ ಕೆಲ ವಿಡಿಯೋ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಬಿಎನ್‌ಎಸ್ ಸೆಕ್ಷನ್ 69, 74, 75, 76, 79, ಹಾಗೂ 109ರ ಅಡಿಯಲ್ಲಿ ದೂರು ದಾಖಲಿಸಲು ಬ್ರಹ್ಮಾಚಾರಿ ಮಹಾರಾಜ್ ಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ಆಗ್ರಹಿಸಿದ್ದರು.
https://www.newsics.com/2026/02/22/i-went-crazy-after-seeing-the-mole-i-was-deceived-urfi-javed/