https://youtube.com/shorts/meQfr5hOsT4?si=–SvccKUHgJJVjWK
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: 2 ವರ್ಷದ ಗಂಡು ಮಗುವನ್ನು ಅವನ ಚಿಕ್ಕಮ್ಮ ಕೊಲೆ ಮಾಡಿರುವ ಘಟನೆ ದೆಹಲಿಯ ಮುಖರ್ಜಿ ನಗರದ ಪಾರ್ಕ್ನಲ್ಲಿ ನಡೆದಿದೆ.
ಮಗು ರಂಜಾನ್ ಹಬ್ಬಕ್ಕೆ ತನ್ನ ತಾಯಿಯೊಂದಿಗೆ ತನ್ನ ಅಜ್ಜಿಯ ಮನೆಗೆ ಹೋಗಿತ್ತು. ಆಗ ಅಲ್ಲಿಗೆ ಬಂದಿದ್ದ ಆ ಮಗುವಿನ ತಾಯಿಯ ತಂಗಿ ಮಗುವನ್ನು ಕರೆದುಕೊಂಡು ಪಾರ್ಕ್ಗೆ ಹೋಗಿ ಕೊಲೆ ಮಾಡಿದ್ದಾಳೆ.
ನಂತರ ಆಕೆ ಉದ್ಯಾನವನದಲ್ಲಿ ಕುಳಿತು ಮಗುವಿನ ಶವವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅಳುತ್ತಾ ನಾಟಕವಾಡಿದ್ದಾಳೆ. ಸ್ಥಳೀಯರು ಮಹಿಳೆಯನ್ನು ಈ ಸ್ಥಿತಿಯಲ್ಲಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮಹಿಳೆಯಿಂದ ಶವವನ್ನು ಪಡೆದುಕೊಂಡಿದ್ದಾರೆ. ಆಗ ಆ ಮಹಿಳೆ ಮಗುವಿನ ಶವವನ್ನು ಬಿಡಲು ನಿರಾಕರಿಸಿದ್ದಾಳೆ. ಪೊಲೀಸರು ಆಕೆಯ ಮನವೊಲಿಸಿ ಮಗುವಿನ ಶವವನ್ನು ವಶಕ್ಕೆ ಪಡೆದಿದ್ದಾರೆ.
ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ. ಹಾದಿಯ ಚಿಕ್ಕಮ್ಮ ಅಜ್ರಾಳನ್ನೂ ಪೊಲೀಸರು ಬಂಧಿಸಿದ್ದಾರೆ.