ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಶ್ರೀಲಂಕಾದತ್ತ ಸಾಗುತ್ತಿದ್ದು, ಇಂದು ಅದು ‘ತೀವ್ರ ವಾಯುಭಾರ ಕುಸಿತ’ವಾಗಿ ಬಲಗೊಳ್ಳಲಿದೆ. ಈ ನಡುವೆ, ಫೆಬ್ರವರಿ 21 (ಶನಿವಾರ) ರಂದು ಮತ್ತೊಂದು ವಾಯುಭಾರ ಕುಸಿತ ಉಂಟಾಗಲಿದ್ದು, ಇದು ಫೆಬ್ರವರಿ 23ರ ವೇಳೆಗೆ ಶ್ರೀಲಂಕಾ ಕರಾವಳಿಯತ್ತ ಚಲಿಸಲಿದೆ ಎಂದು ಹವಾಮಾನ ಮಾದರಿಗಳು ಸೂಚಿಸಿವೆ.
ದಕ್ಷಿಣ ಕನ್ನಡ , ಉಡುಪಿ (ಕರಾವಳಿ) ಮತ್ತು ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2-3 ದಿನಗಳ ಕಾಲ ಹಗುರ ಮಳೆಯಾಗುವ ಸಾಧ್ಯತೆಯಿದೆ.ಶ್ರೀಲಂಕಾ ಆಗ್ನೇಯ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪಶ್ಚಿಮಕ್ಕೆ ಚಲಿಸುತ್ತಿರುವುದರಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಕಾಫಿ ಬೆಳೆಗಾರರಿಗೆ ವರದಾನ: ಈ ಅವಧಿಯಲ್ಲಿ ಬೀಳುವ ಮಳೆಯು ಕಾಫಿ ತೋಟಗಳಿಗೆ ‘ಬ್ಲಾಸಮ್ ಶವರ್’ (ಹೂ ಮಳೆ) ಆಗಿ ಪರಿಣಮಿಸಲಿದೆ. ಇದು ಕಾಫಿ ಗಿಡಗಳಲ್ಲಿ ಮೊಗ್ಗು ಅರಳಲು ಮತ್ತು ಮುಂದಿನ ಫಸಲಿಗೆ ಬಹಳ ಸಹಕಾರಿಯಾಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣವಿದ್ದು, ಸಂಜೆ ವೇಳೆಗೆ ಮೋಡ ಕವಿಯುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 31°C ಆಸುಪಾಸಿನಲ್ಲಿರಲಿದೆ.
ಉತ್ತರ ಕರ್ನಾಟಕ: ಉತ್ತರ ಒಣನಾಡಿನ ಜಿಲ್ಲೆಗಳಾದ ವಿಜಯಪುರ, ಕಲಬುರಗಿ, ಬೀದರ್ ಮತ್ತು ಬಾಗಲಕೋಟೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಬಿಸಿಲಿನ ತಾಪ ಯಥಾಸ್ಥಿತಿ ಇರಲಿದೆ.
ವಾಯುಭಾರ ಕುಸಿತ ಹಿನ್ನೆಲೆ 2-3 ದಿನ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ