https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಮುಂದಿನ ಐದು ವರ್ಷದಲ್ಲಿ ಬಹುತೇಕ ಎಲ್ಲಾ ಐಟಿ ಸರ್ವಿಸ್ ಮತ್ತು ಬಿಪಿಒ ಕೆಲಸಗಳು ಕಣ್ಮರೆಯಾಗುತ್ತವೆ ಎಂದು ಭಾರತ ಮೂಲದ ಅಮೆರಿಕನ್ ಉದ್ಯಮಿ ವಿನೋದ್ ಖೋಸ್ಲಾ ಎಚ್ಚರಿಸಿದ್ದಾರೆ. ನಂತರದ ಕೆಲ ವರ್ಷಗಳಲ್ಲಿ ಮಾನವ ಕಾರ್ಮಿಕರ ಬಹುತೇಕ ಕೆಲಸಗಳನ್ನು ಯಂತ್ರ ಕಾರ್ಮಿಕರು ಮಾಡುತ್ತವೆ ಎಂದೂ ಖೋಸ್ಲಾ ಹೇಳಿದ್ದಾರೆ.
ಎಐ ಬಂದು ಹೊಸ ಕಂಪನಿಗಳನ್ನು ಹುಟ್ಟುಹಾಕುತ್ತಿದೆ. ಇಷ್ಟು ವರ್ಷಗಳಲ್ಲಿ ಬಂದ ತಂತ್ರಜ್ಞಾನಗಳು ಕೆಲಸ ಮಾಡುವುದರಲ್ಲಿ ಸಹಾಯ ಮಾಡುತ್ತಿದ್ದರೆ. ಎಐ ಮಾತ್ರ ಮನುಷ್ಯರ ಕೆಲಸವನ್ನು ಮಾಡಲು ಆರಂಭಿಸಿದೆ.ಐಟಿ ಮತ್ತು ಬಿಪಿಒ ಸೇವೆಗಳು ಮುಂದಿನ ಐದು ವರ್ಷದಲ್ಲಿ ಮರೆಯಾಗುವುದು ಖಚಿತ. ಕಲೆ, ಸಾಹಿತ್ಯದಂತಹ ಸೃಜನಾತ್ಮಕ ಕ್ಷೇತ್ರಗಳು ಇದರಿಂದ ಹೊರತಾಗಿದ್ದರೂ, 5 ವರ್ಷಗಳಲ್ಲಿ ಎಐ ಮಾನವರನ್ನು ಸರಿಗಟ್ಟುತ್ತದೆ. ಅಮೆರಿಕ ಸೇರಿದಂತೆ ವಿಶ್ವದ ಆರ್ಥಿಕತೆಯನ್ನೇ ಪರಿವರ್ತಿಸುತ್ತದೆ’ ಎಂದು ಖೋಸ್ಲಾ ತಿಳಿಸಿದರು.
ಯಂತ್ರಕ್ಕಿಂತ ಮನುಷ್ಯ ಚೆನ್ನಾಗಿ ಕೆಲಸ ಮಾಡುತ್ತಾನೆ ಎಂದು ಹೇಳಿಕೊಳ್ಳಲು ಹೆಚ್ಚೇನೂ ಇರದು. ಭಾರತದಲ್ಲಿ ಇದರ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದ ಖೋಸ್ಲಾ, ‘ದೇಶದಲ್ಲಿ ಎಐ ಅಳವಡಿಕೆಯ ಪ್ರಮಾಣವು ರಾಜಕೀಯ ಮತ್ತು ಸರ್ಕಾರದ ನೀತಿಗಳ ಮೇಲೆ ನಿರ್ಧರಿತವಾಗುತ್ತದೆ ಎಂದು ಸನ್ ಮೈಕ್ರೋಸಿಸ್ಟಮ್ಸ್ನ ಸಹ-ಸಂಸ್ಥಾಪಕರಾದ ಖೋಸ್ಲಾ ಸ್ಪಷ್ಟಪಡಿಸಿದ್ದಾರೆ.