Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಗನೇ ನಮ್ಮ ಪ್ರಪಂಚ ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮ*ಹತ್ಯೆ
ದೇಶಪ್ರಮುಖ

ಮಗನೇ ನಮ್ಮ ಪ್ರಪಂಚ ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮ*ಹತ್ಯೆ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಛತ್ತೀಸ್​ಗಢ:  ಮಗನ ಸಾವಿನ ನೋವಿನಿಂದ ನೊಂದು ಪೋಷಕರು ಆತ್ಮಹತ್ಯೆ ಮಾಡಿಕೊಂಡ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.ಮನೆಯ ಅಂಗಳದ ಬೇವಿನ ಮರದಲ್ಲಿ ಕೃಷ್ಣ ಪಟೇಲ್ ಮತ್ತು ಅವರ ಪತ್ನಿ ರಮಾ ಬಾಯಿ ಅವರ ಶವಗಳು ನೇತಾಡುತ್ತಿದ್ದವು.

ಅಪಘಾತವೊಂದರಲ್ಲಿ ಈ ದಂಪತಿ ಮಗನನ್ನು ಕಳೆದುಕೊಂಡಿದ್ದರು. ಆತನೇ ನಮ್ಮ ಪ್ರಪಂಚವಾಗಿದ್ದ, ಈಗ ಅವನೇ ಇಲ್ಲದ ಮೇಲೆ ನಾವು ಬದುಕಿ ಪ್ರಯೋಜನವೇನು ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಸಾವಿಗೆ ಶರಣಾಗಿದ್ದಾರೆ

ಅವರಿಗೆ ಇದ್ದಿದ್ದು ಒಬ್ಬನೇ ಮಗ ಆತನಿಗೆ 21 ವರ್ಷ ವಯಸ್ಸಾಗಿತ್ತು, 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ವೃತ್ತಿಯಲ್ಲಿ ಮೇಸ್ತ್ರಿ ಆಗಿದ್ದ ಕೃಷ್ಣ (48) ಮತ್ತು ರಮಾ ಬಾಯಿ (47)ಗೆ ಆದಿತ್ಯನೇ ಪ್ರಪಂಚವಾಗಿದ್ದ. ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋದ ದಿನದ ಬಗ್ಗೆ ಕೃಷ್ಣ ಬರೆದಿದ್ದಾರೆ.

 

ಆದಿತ್ಯ ಅಂದು ಹೋಗುವುದಿಲ್ಲ ಎಂದರೂ ತಾನೇ ಬಲವಂತವಾಗಿ ಅವನನ್ನು ಕಳುಹಿಸಿಕೊಟ್ಟು ತಪ್ಪು ಮಾಡಿದೆ. ಮಗ ಶಾಶ್ವತವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಆದರೆ ನಾವು ಮಾತ್ರ ಜೀವಂತವಾಗಿದ್ದೇವೆ ಎಂದು ಬರೆದಿದ್ದಾರೆ. ದಂಪತಿ ಭಾನುವಾರ ತಡರಾತ್ರಿ ತಮ್ಮ ಅಂಗಳದಲ್ಲಿರುವ ಬೇವಿನ ಮರಕ್ಕೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಡಿಯೋವನ್ನು ಕೂಡಾ ರೆಕಾರ್ಡ್​ ಮಾಡಿದ್ದಾರೆ. ಆದಿತ್ಯನ ಅಪಘಾತದ ನಂತರ ಬಂದ ಪರಿಹಾರದ ಹಣವನ್ನು ತಮ್ಮ ಹಿರಿಯ ಸಹೋದರರಾದ ಕುಲಭರ ಪಟೇಲ್ ಮತ್ತು ಜಲಭರ ಪಟೇಲ್‌ಗೆ ವರ್ಗಾಯಿಸಬೇಕೆಂದು ಅವರು ವಿನಂತಿಸಿದ್ದಾರೆ. ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ನಮ್ಮನ್ನು ಶಿವನಿಗೆ ಅರ್ಪಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರೂ ಹೊಣೆಯಲ್ಲ, ಸಂತೋಷದಿಂದ ನಮ್ಮನ್ನು ಕಳುಹಿಸಿಕೊಡಿ ಎಂದು ಬರೆದಿದ್ದಾರೆ.

https://www.newsics.com/2026/02/17/gold-and-silver-prices-have-fallen/

TAGGED:"Son is our world"Couple commits suicidewrites death note saying
Share This Article
Facebook Twitter Copy Link Print
Previous Article ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಇಳಿಕೆಯಾದ ಬಂಗಾರ – ಬೆಳ್ಳಿ ಬೆಲೆ!
Next Article 6 ಕೋಟಿ ಆಸ್ತಿಗಾಗಿ ಹೆತ್ತ ತಂದೆಯನ್ನೇ ಕೊಲೆಗೈದ ಪಾಪಿ ಮಕ್ಕಳು

Popular Posts

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?