https://youtube.com/shorts/74VSpekXhn4?si=vijWxjVUFibUVb68
Subscribe ನ್ಯೂಸಿಕ್ಸ್ ಕನ್ನಡ
newsics.com
ನಟ ಅಕ್ಷಯ್ ಕುಮಾರ್ ಅವರು ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಿನ ಒಂದು ಕಾರ್ಯಕ್ರಮದಲ್ಲಿ ಅವರು ಕೆಲವು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಸ್ವಲ್ಪ ಹೆಚ್ಚು-ಕಡಿಮೆ ಆಗಿದ್ದರೂ ಅಕ್ಷಯ್ ಕುಮಾರ್ ಅವರ ಜೀವನದಲ್ಲಿ ದೊಡ್ಡ ದುರಂತ ನಡೆದುಹೋಗುತ್ತಿತ್ತು.
ಪಾರ್ಟಿಯಲ್ಲಿ ನಡೆದ ಒಂದು ಜಗಳದಿಂದ ವ್ಯಕ್ತಿಯೊಬ್ಬನ ಪ್ರಾಣವೇ ಹೋಗುವ ಸಾಧ್ಯತೆ ಇತ್ತು. ಆ ದಿನವನ್ನು ಅಕ್ಷಯ್ ಕುಮಾರ್ ಅವರು ಈಗ ನೆನಪಿಸಿಕೊಂಡಿದ್ದಾರೆ.
ಇದು ಹಲವು ವರ್ಷಗಳ ಹಿಂದೆ ನಡೆದ ಘಟನೆ. ಹೈಪ್ರೊಫೈಲ್ ಪಾರ್ಟಿಯೊಂದರಲ್ಲಿ ಅಕ್ಷಯ್ ಕುಮಾರ್ ಅವರು ಸ್ನೇಹಿತರ ಜೊತೆ ಭಾಗಿ ಆಗಿದ್ದರು. ಆಗ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬನು ಕಿರಿಕ್ ಶುರು ಮಾಡಿದ್ದ. ಅಕ್ಷಯ್ ಕುಮಾರ್ ಸ್ನೇಹಿತರ ಮೇಲೆ ಆ ವ್ಯಕ್ತಿ ಕೈ ಮಾಡಲು ಆರಂಭಿಸಿದ್ದ. ಅದರಿಂದ ಅಕ್ಷಯ್ ಕುಮಾರ್ ಅವರಿಗೆ ಕೋಪ ಬಂದಿತ್ತು.
ಕುಡಿದು ಜಗಳ ಮಾಡುತ್ತಿದ್ದ ಆ ವ್ಯಕ್ತಿಗೆ ಅಕ್ಷಯ್ ಕುಮಾರ್ ಅವರು ಹಲವು ಬಾರಿ ಎಚ್ಚರಿಕೆ ನೀಡಿದರು. ಎಷ್ಟು ಸಲ ವಾರ್ನಿಂಗ್ ಕೊಟ್ಟರೂ ಕೂಡ ಆತ ತನ್ನ ವರ್ತನೆ ನಿಲ್ಲಿಸಲೇ ಇಲ್ಲ. ಆಗ ಅಕ್ಷಯ್ ಕುಮಾರ್ ಅವರಿಗೆ ಪಿತ್ತ ನೆತ್ತಿಗೇರಿತು. ಜೋರಾಗಿ ಆತನ ಕೆನ್ನೆಗೆ ಬಾರಿಸಿದರು. ಕೂಡಲೇ ಅವನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ! ಆತ ಬದುಕುತ್ತಾನೋ ಇಲ್ಲವೋ ಎಂದು ಅಕ್ಷಯ್ ಕುಮಾರ್ ಅವರಿಗೆ ಚಿಂತೆ ಶುರು ಆಯಿತು.
ಆ ಕ್ಷಣದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಹತ್ತಾರು ಆಲೋಚನೆ ಬಂದಿತ್ತು. ಆ ಘಟನೆಯಿಂದ ತನ್ನ ಕರಿಯರ್ ಮುಗಿದೇ ಹೋಯಿತು ಎಂದು ಅವರು ಭಾವಿಸಿದ್ದರು. ಅದೃಷ್ಟವಶಾತ್, ಸ್ವಲ್ಪ ಹೊತ್ತಿನ ಬಳಿಕ ಆ ವ್ಯಕ್ತಿಗೆ ಪ್ರಜ್ಞೆ ಬಂತು. ಹಾಗಾಗಿ ಅಕ್ಷಯ್ ಕುಮಾರ್ ಬಚಾವ್ ಆದರು. ಒಂದು ವೇಳೆ ಇಂದು ಅದೇ ರೀತಿ ಜಗಳ ನಡೆದರೆ ತಾವು ಆ ರೀತಿ ಪ್ರತಿಕ್ರಿಯಿಸಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ, ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ಗಳಲ್ಲಿ ಅಕ್ಷಯ್ ಕುಮಾರ್ ಅವರು ಬ್ಯುಸಿ ಆಗಿದ್ದಾರೆ. ಅವರು ನಟಿಸಿದ ‘ಭೂತ್ ಬಂಗ್ಲ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅದಲ್ಲದೇ, ‘ವೆಲ್ಕಮ್ ಟು ದಿ ಜಂಗಲ್’ ಮತ್ತು ‘ಹೈವಾನ್’ ಸಿನಿಮಾಗಳಲ್ಲೂ ಅಕ್ಷಯ್ ಕುಮಾರ್ ಅವರು ನಟಿಸಿದ್ದಾರೆ.
CBSE EXAM ಸಿಬಿಎಸ್ಇ ಪರೀಕ್ಷೆ: ಮಾರ್ಗಸೂಚಿ ಬಿಡುಗಡೆ, ಪರೀಕ್ಷಾರ್ಥಿಗಳು ಹೇಗಿರಬೇಕು?