Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗಣೇಶ್ ಮಾತು ಕೇಳದೆ 4 ಕೋಟಿ ಕಳೆದುಕೊಂಡಿದ್ದಾರೆ ಸಹೋದರ ಮಹೇಶ್
ಪ್ರಮುಖಮನರಂಜನೆ

ಗಣೇಶ್ ಮಾತು ಕೇಳದೆ 4 ಕೋಟಿ ಕಳೆದುಕೊಂಡಿದ್ದಾರೆ ಸಹೋದರ ಮಹೇಶ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಸ್ಯಾಂಡಲ್‌ವುಡ್‌ನ ‘ಗೋಲ್ಡನ್ ಸ್ಟಾರ್’ ಕುಟುಂಬದ ಮತ್ತೊಬ್ಬ ಸದಸ್ಯ ಬಣ್ಣದ ಲೋಕದ ಮಾಯೆಗೆ ಬಿದ್ದು, ಅಣ್ಣ ಹಾಕಿಕೊಟ್ಟ ಭದ್ರ ಬುನಾದಿಯನ್ನು ಕಳೆದುಕೊಂಡಿರೊದು ಚರ್ಚೆಗೆ ಗ್ರಾಸವಾಗಿದೆ.
ಗಣೇಶ್ ಅವರ ಸಹೋದರ ಮಹೇಶ್.
ನಟ ಮಹೇಶ್ ‘ನಮಕ್‌ಹರಾಮ್’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಈಗ ‘ಮಗ್ಗಿ ಪುಸ್ತಕ’ ಎಂಬ ಸಿನಿಮಾದಲ್ಲಿ ನೆಗೆಟಿವ್ ಶೆಡ್ ಇರುವ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಂದರ್ಶನದಲ್ಲಿ ಮಹೇಶ್ ತಮ್ಮ ಸಿನಿ ಜರ್ನಿಯ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಅಣ್ಣನ ಮಾತು ಮೀರಿ ಬಂದಿದ್ದಕ್ಕೆ ಪಶ್ಚಾತ್ತಾಪ:
“ನನ್ನ ಅಣ್ಣ ಗಣೇಶ್ ಅವರಿಗೆ ಚಿತ್ರರಂಗದ ಕಷ್ಟಗಳು ಚೆನ್ನಾಗಿ ಗೊತ್ತಿತ್ತು. ನಾನು ಸಿನಿಮಾ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿಯೇ ಅವರು ನನಗೆ ಒಂದು ಉತ್ತಮ ಬ್ಯುಸಿನೆಸ್ ಸೆಟ್ ಮಾಡಿಕೊಟ್ಟಿದ್ದರು,” ಎಂದು ಮಹೇಶ್ ನೆನಪಿಸಿಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿ ಅರ್ಧಕ್ಕೆ ಬಿಟ್ಟಿದ್ದ ಮಹೇಶ್ ಅವರಿಗೆ, ‘ಮುಂಗಾರುಮಳೆ’ ಹಿಟ್ ಆದ ನಂತರ ಗಣೇಶ್ ಅವರು ಎಂಟಿಆರ್ (MTR) ಹೋಲ್‌ ಸೇಲ್ ಡಿಸ್ಟ್ರಿಬ್ಯೂಷನ್ ಬ್ಯುಸಿನೆಸ್ ಆರಂಭಿಸಿಕೊಟ್ಟಿದ್ದರು. ವರ್ಷಕ್ಕೆ ಸುಮಾರು 4 ರಿಂದ 5 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದ್ದ ಆ ವ್ಯವಹಾರದಲ್ಲಿ ಮಹೇಶ್ ನೆಲೆ ಕಂಡುಕೊಂಡಿದ್ದರು.
ಆದರೆ, ಸುತ್ತಮುತ್ತಲಿನ ಗೆಳೆಯರ ಪ್ರಚೋದನೆ ಮತ್ತು ಸಿನಿಮಾ ಮೇಲಿನ ವ್ಯಾಮೋಹದಿಂದ ಮಹೇಶ್ ಆ ಲಾಭದಾಯಕ ಬ್ಯುಸಿನೆಸ್ ಅನ್ನು ಅರ್ಧಕ್ಕೆ ನಿಲ್ಲಿಸಿದರು. “ನಾನು ದಡ್ಡನ ತರಹ ಅಣ್ಣ ಹಾಕಿಕೊಟ್ಟ ಬ್ಯುಸಿನೆಸ್ ಹಾಳು ಮಾಡಿಕೊಂಡೆ. ಸಿನಿಮಾ ಮಾಡೋಣ, ನೀವೇ ಹೀರೋ ಅಂತ ಸ್ನೇಹಿತರು ಹೇಳಿದ್ದನ್ನು ನಂಬಿ ಬಂದೆ. ಅಣ್ಣ ಬೇಡ ಅಂದರೂ ಕೇಳಲಿಲ್ಲ. ಆ ನಿರ್ಧಾರ ತಪ್ಪು ಎಂದು ಈಗ ಅನ್ನಿಸುತ್ತಿದೆ, ಆ ಕೊರಗು ಇವತ್ತಿಗೂ ಇದೆ,” ಎಂದು ಮಹೇಶ್ ಭಾವುಕರಾಗಿ ನುಡಿದಿದ್ದಾರೆ.ಗಣೇಶ್ ಅವರ ಕುಟುಂಬದಿಂದ ಕೇವಲ ಮಹೇಶ್ ಮಾತ್ರವಲ್ಲ, ಕಿರಿಯ ಸಹೋದರ ಸೂರಜ್ ಕೃಷ್ಣ ಕೂಡ ‘ನಾನೇ ರಾಜ’ ಎಂಬ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಆ ಸಿನಿಮಾ ಸೋತಿದ್ದರಿಂದ ಅವರು ಚಿತ್ರರಂಗದಿಂದ ದೂರ ಸರಿದು, ಈಗ ತಮ್ಮ ಹುಟ್ಟೂರಾದ ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ ಅಣಬೆ ವ್ಯಾಪಾರ ಮಾಡಿಕೊಂಡಿದ್ದಾರೆ.
‘ಮಗ್ಗಿ ಪುಸ್ತಕ’ದ ಮೇಲೆ ಭರವಸೆ:
ಮಹೇಶ್ ನಟನೆಯ 5ನೇ ಸಿನಿಮಾ ‘ಮಗ್ಗಿ ಪುಸ್ತಕ’ ಈಗ ಬಿಡುಗಡೆಯಾಗಿದೆ. ಎಚ್. ಸಿ ಮಹೇಶ್ ಬರೆದ ‘ಅವನಿ’ ಎಂಬ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ರಂಗಾಯಣ ರಘು ಮತ್ತು ಗಿರಿಜಾ ಲೋಕೇಶ್ ಅಂತಹ ಹಿರಿಯ ಕಲಾವಿದರಿದ್ದಾರೆ. ನೆಗೆಟಿವ್ ರೋಲ್ ಮೂಲಕ ಮಹೇಶ್ ಈ ಬಾರಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಭರವಸೆಯಲ್ಲಿದ್ದಾರೆ. ಅಣ್ಣ ಗಣೇಶ್ ಇಂದಿಗೂ ತಮಗೆ ರೋಲ್ ಮಾಡೆಲ್ ಎಂದು ಹೇಳುವ ಮಹೇಶ್, ಕಳೆದುಕೊಂಡಿದ್ದನ್ನು ಸಾಧನೆಯ ಮೂಲಕ ಮರಳಿ ಪಡೆಯುವ ಹಾದಿಯಲ್ಲಿದ್ದಾರೆ.

ಅಮಾವಾಸ್ಯೆಯಂದು ಮಗು ಜನಿಸಿದರೆ ಏನಾಗುತ್ತೆ..? ಶಾಸ್ತ್ರ ಹೇಳುವುದೇನು?

TAGGED:Brother Mahesh lost 4 crores without listening to Ganesh
Share This Article
Facebook Twitter Copy Link Print
Previous Article ಅಮಾವಾಸ್ಯೆಯಂದು ಮಗು ಜನಿಸಿದರೆ ಏನಾಗುತ್ತೆ..? ಶಾಸ್ತ್ರ ಹೇಳುವುದೇನು?
Next Article ಭಾರತದ ಹತ್ತಿರ ಬಿ.ಎನ್‌.ಪಿ. ಕೇಳಿದ್ದೇನು?

Popular Posts

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

ಅಮೆಜಾನ್ ಉದ್ಯೋಗಿನಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read

ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಸುದ್ದಿ ಕೇಳಿ ಪವನ್ ಕುಮಾರ್‌ಗೆ ‘ಹಾರ್ಟ್ ಬ್ರೇಕ್’; ವೈರಲ್ ಆಯ್ತು ಫನ್ನಿ ವಿಡಿಯೋ!

2 Min Read

You Might Also Like

ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read
ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?