newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
09-08-2024, ಶುಕ್ರವಾರ
ದಿನ ವಿಶೇಷ:
* ನಾಗರಪಂಚಮಿ
* ವಿಶ್ವ ಆದಿವಾಸಿ ದಿನ
***

***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***
ಈ ದಿನದ ಮಾತು
ಯಾರ ಅಧಃಪತನವನ್ನು ನಾವು ಬಯಸುವುದಿಲ್ಲವೋ, ಅವರು ಕೇಳದೇ ಇದ್ದರೂ, ಅವರಿಗೆ ಪ್ರಿಯವೆಂದು ಅನಿಸಲಿ ಅಥವಾ ಅಪ್ರಿಯವೆಂದು ಅನಿಸಲಿ, ಒಳಿತು ಎಂದೆನಿಸಲಿ ಅಥವಾ ಕೆಡುಕು ಎಂದೆನಿಸಲಿ, ಹಿತವಾದದ್ದನ್ನು ನಾವು ಹೇಳಲೇಬೇಕು.
– ಪಂಚತಂತ್ರ
***
ಇಂದಿನ ಇತಿಹಾಸ
09 ಆಗಸ್ಟ್
ವಿಶ್ವ ಆದಿವಾಸಿ ದಿನ
ಆಗಸ್ಟ್ 09 ರಂದು ವಿಶ್ವ ಆದಿವಾಸಿ ದಿನ ಆಚರಿಸುತ್ತದೆ. ವಿಶ್ವ ಸಂಸ್ಥೆ 1995 ರಿಂದ ಈ ದಿನವನ್ನು ಆಚರಿಸುತ್ತಿದೆ. ಆದಿವಾಸಿಗಳ ಎಂಬ ಪದವು ಕೊಡೆ ಶಬ್ಧದಿಂದ ಬಂದಿದೆ. ಇದು ಒಂದು ವಿದವಾದ ಜನಾಂಗೀಯ ಮತ್ತು ಬುಡಕಟ್ಟು ಗುಂಪು ಭಾರತದ ಜನಸಂಖ್ಯೆಯಲ್ಲಿ ತನ್ನ ಮೂಲವನ್ನು ಹೊಂದಿದೆ. ಅವರು ಭಾರತದ ಜನಸಂಖ್ಯೆಯಲ್ಲಿ ದೇಶಿಯ ಅಲ್ಪಸಂಖ್ಯಾತರಾಗಿದ್ದಾರೆ.
ಪ್ರಮುಖ ಘಟನೆಗಳು:
* ಆಗಸ್ಟ್ 09, 1173 ರಂದು ಪೀಸಾ ಗೋಪುರದ ನಿರ್ಮಾಣ ಆರಂಭವಾಯಿತು. ಈ ಕಾಮಗಾರಿಯು ಪೂರ್ಣಗೊಳ್ಳಲು ಎರಡು ಶತಮಾನಗಳನ್ನು ತೆಗೆದುಕೊಂಡಿತು.
* ಆಗಸ್ಟ್ 09, 1898 ರಂದು ಡೀಸೆಲ್ ಎಂಜಿನ್ ಎಂದು ಕರೆಯಲ್ಪಡುವ “ಆಂತರಿಕ ದಹನಕಾರಿ ಎಂಜಿನ್ “ಗಾಗಿ ಫ್ರಾನ್ಸ್ನ ರುಡಾಲ್ಫ್ ಡೀಸೆಲ್ಗೆ ಪೇಟೆಂಟ್ ಸಂಖ್ಯೆ 608,845 ನೀಡಲಾಯಿತು.
* ವಿನಾಯಕ ಕೃಷ್ಣ ಗೋಕಾಕ – ವಿನಾಯಕ ಕೃಷ್ಣ ಗೋಕಾಕರು 1909 ರ ಆಗಸ್ಟ್ 09 ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1991ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
* ಆಗಸ್ಟ್ 09, 1910 ರಂದು ವಿದ್ಯುತ್ ಬಟ್ಟೆ ಒಗೆಯುವ ಯಂತ್ರಕ್ಕೆ ಆಲ್ವ ಫಿಶರ್ ಪೇಟೆಂಟ್ ಪಡೆದರು.
* ಆಗಸ್ಟ್ 09, 1942 ರಂದು ಮಹಾತ್ಮಾ ಗಾಂಧಿಯವರನ್ನು ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದ ನಂತರ ಬ್ರಿಟೀಷರು ಅವರನ್ನು ಬಾಂಬೆಯಲ್ಲಿ ಬಂಧಿಸಿದರು.
* ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್ ದಾಳಿಗಳು – ಆಗಸ್ಟ್ 09, 1945ರಲ್ಲಿ ನಡೆದ IIನೇ ಜಾಗತಿಕ ಸಮರದ ಅಂತಿಮ ಹಂತಗಳ ಅವಧಿಯಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನವು ಜಪಾನ್‌ನಲ್ಲಿರುವ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ವಿರುದ್ಧ ಪರಮಾಣು ಬಾಂಬ್ ದಾಳಿಗಳನ್ನು ನಡೆಸಿತು.