https://youtube.com/shorts/Z1cy8EQaCVE?si=-_cWMt02yPVoM0xd
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: 1993ರಲ್ಲಿ ಕೇವಲ 10 ವರ್ಷದವನಾಗಿದ್ದಾಗ ಅಮ್ಮನ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದ್ದ ಡೊಮೇನ್ ಬರೋಬ್ಬರಿ 33 ವರ್ಷಗಳ ಬಳಿಕ ಅದೇ ವ್ಯಕ್ತಿಗೆ ಭಾರೀ ಆದಾಯ ತಂದುಕೊಟ್ಟಿದೆ.
ಮಲೇಷ್ಯಾದ ಟೆಕ್ ಉದ್ಯಮಿ 1993ರಲ್ಲಿ ಕೇವಲ 100 ಡಾಲರ್‌ಗೆ (ಆಗಿನ ರೂಪಾಯಿಯ್ಲಿ 300 ರೂಪಾಯಿ) AI.com ಅನ್ನೋ ಡೊಮೇನ್‌ಅನ್ನು ಖರದಿ ಮಾಡಿದ್ದರು. ಈಗ ಅದೇ ಡೊಮೇನ್‌ಅನ್ನ ಉದ್ಯಮಿ ಬರೋಬ್ಬರಿ 70 ಮಿಲಿಯನ್ ಯುಎಸ್ ಡಾಲರ್ ಅದರೆ ಬರೋಬ್ಬರಿ 634 ಕೋಟಿ ರೂಪಾಯಿಗೆ Crypto.com ಸಿಇಒ ಕ್ರಿಸ್ ಮಾರ್ಜಲೆಕ್ ಅವರಿಗೆ ಮಾರಾಟ ಮಾಡಿದ್ದರೆ. ಇದು ಇಂಟರ್ನೆಟ್ ಇತಿಹಾಸದಲ್ಲಿ ಸಾರ್ವಜನಿಕಾಗಿ ಬಹಿರಂಗವಾದ ಅತಿದೊಡ್ಡ ಮೊತ್ತದ ಡೊೇನ್ ಮಾರಾಟ ಎನಿಸಿಕೊಂಡಿದೆ.
ವರದಿಗಳ ಪ್ರಕಾರ, ಅರ್ಸಿಯಾನ್ ಇಸ್ಮಾಯಿಲ್ ಅವರು ಈ ಡೊಮೇನ್ ಅನ್ನು ಕೃತಕ ಬುದ್ಧಿಮತ್ತೆ (Artificial Intelligence) ಎಂಬ ಕಾರಣಕ್ಕಾಗಿ ಖರೀದಿಸಿರಲಿಲ್ಲ. ಬದಲಿಗೆ, ಅವರ ಹೆಸರಿನ ಮೊದಲ ಅಕ್ಷರಗಳಾದ Arsyan Ismail ಎಂಬುದಕ್ಕೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಖರೀದಿಸಿದ್ದರು. ಅಂದು ಕೇವಲ ಹೆಸರಿನ ಸಂಕ್ಷಿಪ್ತ ರೂಪವಾಗಿದ್ದ ‘AI’, ಇಂದು ಜಾಗತಿಕ ತಂತ್ರಜ್ಞಾನ ಲೋಕವನ್ನೇ ಆಳುತ್ತಿರುವುದು ಅರ್ಸಿಯಾನ್ ಅವರ ಪಾಲಿಗೆ ಲಕ್ಕಿ ಬೋನಸ್ ಆಗಿದೆ.
ಇತಿಹಾಸದಲ್ಲೇ ಅತ್ಯಂತ ದುಬಾರಿ ಡೀಲ್
ವಹಿವಾಟು: ಏಪ್ರಿಲ್ 2025 ರಲ್ಲಿ ಈ ಡೀಲ್ ನಡೆದಿದ್ದು, ಇದರ ಪಾವತಿಯನ್ನು ಸಂಪೂರ್ಣವಾಗಿ ಕ್ರಿಪ್ಟೋಕರೆನ್ಸಿ ಮೂಲಕ ಮಾಡಲಾಗಿದೆ.
ದಾಖಲೆ: ಇದು 2010 ರಲ್ಲಿ 49.7 ಮಿಲಿಯನ್ ಡಾಲರ್‌ಗೆ ಮಾರಾಟವಾಗಿದ್ದ CarInsurance.com ದಾಖಲೆಯನ್ನು ಮುರಿದಿದೆ.
ಸೂಪರ್ಬೌಲ್ಪ್ರದರ್ಶನ: ಸೂಪರ್ ಬೌಲ್ LX ವೇಳೆ ನಡೆದ ಜಾಹೀರಾತಿನಲ್ಲಿ ಈ ಡೊಮೇನ್ ಕಾಣಿಸಿಕೊಂಡಾಗ ಜಗತ್ತಿನ ಗಮನ ಸೆಳೆಯಿತು. Crypto.com ಈಗ ಈ ಡೊಮೇನ್ ಅನ್ನು ತನ್ನ ಹೊಸ “ಪರ್ಸನಲ್ AI ಏಜೆಂಟ್” ಪ್ಲಾಟ್‌ಫಾರ್ಮ್‌ಗಾಗಿ ಬಳಸುತ್ತಿದೆ.
ವರದಿಗಳ ಪ್ರಕಾರ, ಈ ಡೊಮೇನ್‌ಗೆ ಸುಮಾರು 100 ಮಿಲಿಯನ್ ಡಾಲರ್‌ವರೆಗೂ ಆಫರ್‌ಗಳು ಬಂದಿದ್ದವು. ಆದರೆ ಅಂತಿಮವಾಗಿ ಅವರು 70 ಮಿಲಿಯನ್ ಡಾಲರ್‌ಗೆ ಒಪ್ಪಂದ ಮಾಡಿಕೊಂಡರು. ಈ ಕುರಿತು ಮಾತನಾಡಿದ ಅರ್ಸಿಯಾನ್, “ಒಬ್ಬ ಬಿಲಿಯನೇರ್ ಜೊತೆ ಅತಿಯಾಗಿ ಚೌಕಾಸಿ ಮಾಡಬೇಡಿ” ಎಂದು ಇತರರಿಗೆ ಸಲಹೆ ನೀಡಿದ್ದಾರೆ.
https://www.newsics.com/2026/02/13/four-corrupt-officials-caught-in-loka-raids-face-hefty-fines/