Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ವೇಶ್ಯಾವಾಟಿಕೆ ಜಾಲ – ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ
ಕರ್ನಾಟಕಪ್ರಮುಖ

ವೇಶ್ಯಾವಾಟಿಕೆ ಜಾಲ – ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಶಿಕ್ಷೆ

Share
1 Min Read
SHARE

https://youtube.com/shorts/s_4DpSB4DuI?si=YOaYwZUOrd4WZwlV

Subscribe ನ್ಯೂಸಿಕ್ಸ್ ಕನ್ನಡ

newsics.com

ಶಿವಮೊಗ್ಗ : ಹಣದಾಸೆಗಾಗಿ ಮಹಿಳೆಯರನ್ನು ವೇಶ್ಯಾವಾಟಿಕೆ ಬಳಸಿಕೊಳ್ಳುತ್ತಿದ್ದ ಜಾಲವೊಂದನ್ನು ಭೇದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರಾವತಿಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ.

ಭದ್ರಾವತಿ ಹೊಸೂರು ಜೇಡಿಕಟ್ಟೆಯ ನಿವಾಸಿ ಚಂದ್ರಕಲಾ ಅಲಿಯಾಸ್ ಶ್ವೇತಾ (31), ಉಜ್ಜನಿಪುರದ ಎಸ್. ಶಿಲ್ಪಾ (35) ಹಾಗೂ ಹೊಸ ಸಿದ್ಧಾಪುರದ ಕವಿತಾ (40) ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ಭದ್ರಾವತಿ ಪಟ್ಟಣದ ಉಜ್ಜನಿಪುರದ ಮಾರಿಯಮ್ಮ ದೇವಸ್ಥಾನದ ಹಿಂಭಾಗದ 3ನೇ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಕಾನೂನುಬಾಹಿರವಾಗಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಆರೋಪಿಗಳಾದ ಚಂದ್ರಕಲಾ ಮತ್ತು ಶಿಲ್ಪಾ, ಮತ್ತೋರ್ವ ಆರೋಪಿ ಕವಿತಾಳೊಂದಿಗೆ ಸೇರಿಕೊಂಡು ಹಣ ಸಂಪಾದನೆಯ ದುರುದ್ದೇಶದಿಂದ ಶಿಲ್ಪಾಳ ಮನೆಯನ್ನೇ ದಂಧೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅಲ್ಲಿಗೆ ಬೇರೆ ಕಡೆಯಿಂದ ಹೆಣ್ಣುಮಕ್ಕಳನ್ನು ಕರೆಸಿ, ಅವರನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿತ್ತು.

ಸುದೀರ್ಘ ವಿಚಾರಣೆಯ ನಂತರ, ಆರೋಪಿಗಳ ಮೇಲಿನ ಸಾಕ್ಷ್ಯಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಮೂವರು ಅಪರಾಧಿಗಳಿಗೆ ತಲಾ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಪ್ರತಿಯೊಬ್ಬರಿಗೂ ತಲಾ 1.61 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ.

https://www.newsics.com/2026/02/10/bollywood-actress-sonam-kapoor-is-gorgeous-seemantha-shastra/

TAGGED:Prostitution ring - Three women get 10 years rigorous imprisonment
Share This Article
Facebook Twitter Copy Link Print
Previous Article ಬಾಲಿವುಡ್‌ ನಟಿ ಸೋನಂ ಕಪೂರ್ ಅದ್ಧೂರಿ ಸೀಮಂತ ಶಾಸ್ತ್ರ – ಇಲ್ಲಿದೆ ಫೋಟೋಸ್​
Next Article ಎರಡು ಮಕ್ಕಳ ತಂದೆಯ ಜತೆ 19ರ ಯುವತಿ ಲವ್; ಮರ್ಯಾದೆಗೆ ಅಂಜಿ ಪ್ರಾಣ ಬಿಟ್ಟ ಅಮ್ಮ-ಮಗಳು

Popular Posts

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read

You Might Also Like

ಕರ್ನಾಟಕಪ್ರಮುಖ

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read
ಕರ್ನಾಟಕಕೃಷಿದೇಶಪ್ರಮುಖ

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read
ಕರ್ನಾಟಕಪ್ರಮುಖಮನರಂಜನೆ

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read
ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?