Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಮಾಡಿದ್ದೇನು?
ಕರ್ನಾಟಕಪ್ರಮುಖ

ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಮಾಡಿದ್ದೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಚಿತ್ರಾಳ ಕರಾಳ ಇತಿಹಾಸ ಒಂದೊಂದಾಗಿ ಹೊರಬರುತ್ತಿದೆ.
ಆರೋಪಿ ಸುಚಿತ್ರಾಳ ಮೂಲ ಹೆಸರು ಸುರೇಖಾ. ಅವರಗುಪ್ಪಾ ಜಾತ್ರೆಯಲ್ಲಿ ಮಹೇಶ್ ಜಟ್ಯಾ ನಾಯ್ಕ್ ಪರಿಚಯವಾಗಿದ್ದಾಗ ಆಕೆಯ ಹೆಸರು ಸುರೇಖಾ ಎಂದೇ ಇತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಸುಮಾರು 5 ವರ್ಷಗಳ ಕಾಲ ಇಬ್ಬರೂ ಪ್ರೀತಿಸಿದ್ದರು. ವಿಶೇಷವೆಂದರೆ, ಸುಚಿತ್ರಾ ಅಪ್ರಾಪ್ತ ವಯಸ್ಸಿನಲ್ಲೇ ಅಂದರೆ 17ನೇ ವಯಸ್ಸಿಗೆ ಮಹೇಶ್‌ನಿಂದ ಗರ್ಭವತಿಯಾಗಿದ್ದಳು. 18 ವರ್ಷ ತುಂಬಲು ಇನ್ನು 3-4 ತಿಂಗಳು ಬಾಕಿ ಇರುವಾಗಲೇ ಮನೆಯವರ ವಿರೋಧದ ನಡುವೆಯೂ ಮಹೇಶ್ ಜೊತೆ ಓಡಿಹೋಗಿ ಮದುವೆಯಾಗಿದ್ದಳು. ಮದುವೆಯಾದ ನಾಲ್ಕೇ ತಿಂಗಳಿಗೆ ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮದುವೆಯಾದ ನಂತರ ಈಕೆ ತನ್ನ ಹೆಸರನ್ನು ‘ಸುಚಿತ್ರಾ’ ಎಂದು ಬದಲಾಯಿಸಿಕೊಂಡಿದ್ದಳು.
ಆರಂಭದ 2-3 ವರ್ಷ ಊರಿನಲ್ಲೇ ಇದ್ದ ಮಹೇಶ್, ನಂತರ ಜೀವನ ನಿರ್ವಹಣೆಗಾಗಿ ಬೆಂಗಳೂರಿನ ಹೋಟೆಲ್ ಕೆಲಸಕ್ಕೆ ಸೇರಿದ್ದರು. ಗಂಡ ಊರು ಬಿಟ್ಟಿದ್ದೇ ತಡ, ಸುಚಿತ್ರಾ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದಳು. ಮದುವೆಯಾದ 3 ವರ್ಷದ ನಂತರ ಶಿವಮೊಗ್ಗದ ಸೊರಬ ತಾಲೂಕಿನ ಸೀಳಗಿ ಮೂಲದ ಪ್ರಕಾಶ್ ಎಂಬಾತನ ಜತೆ ಅನೈತಿಕ ಸಂಬಂಧ ಬೆಳೆಸಿದ್ದಳು. ಪ್ರಕಾಶ್ ಆಗಾಗ ಸುಚಿತ್ರಾ ಮನೆಗೆ ಬಂದು ಹೋಗುತ್ತಿದ್ದ. ಈ ವಿಚಾರವಾಗಿ ಗಂಡ-ಹೆಂಡಿರ ನಡುವೆ ಭಾರೀ ಜಗಳವಾಗಿತ್ತು. ‘ನಿನಗೆ ಇಂತಹ ಚಟಗಳಿದ್ದರೆ ನನಗೆ ಮತ್ತು ನನ್ನ ಮಕ್ಕಳಿಗೆ ಡಿವೋರ್ಸ್ ಕೊಟ್ಟು ಹೋಗು’ ಎಂದು ಮಹೇಶ್ ಎಚ್ಚರಿಸಿದ್ದರೂ ಆಕೆ ಜಗ್ಗಿರಲಿಲ್ಲ.
ಸುಚಿತ್ರಾಗೆ ಐಷಾರಾಮಿ ಬದುಕು ಮತ್ತು ಬೈಕ್‌ಗಳೆಂದರೆ ಎಲ್ಲಿಲ್ಲದ ಮೋಹ. ಫೇಸ್‌ಬುಕ್‌ನಲ್ಲಿ ಯಾರಾದರೂ ಬುಲೆಟ್ ಬೈಕ್ ಜೊತೆ ಫೋಟೋ ಹಾಕಿದರೆ ಸಾಕು, ಅವರನ್ನು ಸಂಪರ್ಕಿಸಿ ಚಕ್ಕಂದ ಆಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಪ್ರಕಾಶ್ ನಂತರ ಗುಲ್ಬರ್ಗಾದ ಜಮೀನ್ದಾರ ಶರಣಬಸಪ್ಪ ಎಂಬಾತನ ಜೊತೆ ಸುಮಾರು 3 ವರ್ಷಗಳ ಕಾಲ ‘ಲವ್ವಿ-ಡವ್ವಿ’ ನಡೆಸಿದ್ದಳು. ಈಕೆಯ ಈ ಎಲ್ಲಾ ಅಕ್ರಮ ಸಂಬಂಧಗಳ ಬಗ್ಗೆ ಗೊತ್ತಿದ್ದರೂ, ಪತಿ ಮಹೇಶ್ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದರು.
ಸುಚಿತ್ರಾಳ ವರ್ತನೆ ಊರಿನವರಿಗೂ ತಲೆನೋವಾಗಿತ್ತು. ಗಂಡ ಕೊಡಿಸಿದ ಸ್ಕೂಟಿಯಲ್ಲಿ ರಸ್ತೆಯಲ್ಲಿ ಹೋಗುವಾಗ ಯಾರಾದರೂ ಅಡ್ಡ ಬಂದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಗಂಡನ ಜೊತೆ ಬೈಕ್‌ನಲ್ಲಿ ಹೋಗುವಾಗಲೂ, ಎದುರಿಗೆ ಬಂದವರಿಗೆ ಗಂಡ ಬೈಯದಿದ್ದರೆ, ‘ನೀನ್ಯಾಕೆ ಅವರಿಗೆ ಬೈಯ್ಯಲಿಲ್ಲ’ ಎಂದು ನಡುರಸ್ತೆಯಲ್ಲೇ ಗಂಡನ ಜತೆ ಜಗಳವಾಡುತ್ತಿದ್ದ ‘ಗಂಡುಬೀರಿ’ ಇವಳಾಗಿದ್ದಳು. ಆಸ್ತಿ ವಿಚಾರವಾಗಿಯೂ ಗಲಾಟೆ ಮಾಡಿ, ಮಾವನಿಂದ ಗಂಡನಿಗೆ 50 ಸೆಂಟ್ಸ್ ಮತ್ತು ಮೃತ ವಸಂತ ನಾಯ್ಕ್ ಗೆ 50 ಸೆಂಟ್ಸ್ ಆಸ್ತಿ ಭಾಗ ಮಾಡಿಸಿಕೊಂಡಿದ್ದಳು.

ಕಳೆದ 6 ತಿಂಗಳ ಹಿಂದೆ ಗಂಡನನ್ನು ಬಿಟ್ಟು ಜ್ಯೋತಿಷಿ ಕಮಲಾಕರ ಭಟ್ ಜೊತೆ ಸೇರಿಕೊಂಡಿದ್ದ ಸುಚಿತ್ರಾ, ಹಣ ಗಳಿಸುವ ತಂತ್ರವಾಗಿ ಸಂಬಂಧಗಳನ್ನು ಬಳಸಿಕೊಳ್ಳುತ್ತಿದ್ದಳು. ಇದೀಗ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಈಕೆಯ ರಂಗಿನಾಟಕ್ಕೆ ತೆರೆ ಬಿದ್ದಂತಾಗಿದೆ.

ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಪ್ರಸಾರದ ಕುರಿತು ಕೇಸ್ ದಾಖಲು

TAGGED:Suchitrawho was pregnant at 17 after seeing Mahesh's bullet; what did she do when her husband left town?
Share This Article
Facebook Twitter Copy Link Print
Previous Article ಮಾಜಿ ಸೇನಾ ಮುಖ್ಯಸ್ಥ ನರವಾಣೆ ಅಪ್ರಕಟಿತ ಪುಸ್ತಕದ ಪ್ರಸಾರ ಕುರಿತು ಕೇಸ್ ದಾಖಲು
Next Article ಪ್ರಖ್ಯಾತ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಆತ್ಮ*ಹತ್ಯೆ!

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?