https://youtube.com/shorts/s_4DpSB4DuI?si=4AZmgba8KEPzCEfP
Subscribe ನ್ಯೂಸಿಕ್ಸ್ ಕನ್ನಡ
newsics.com
ಅಡೂರು: ತುಳು ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಿದ್ದ ಕಾಸರಗೋಡಿನ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆತ್ಮಹತ್ಯೆ ಮಾಡಿಕೊಡಿದ್ದಾರೆ.
ಆಡೂರು ಮೂಲದ ಚಿನ್ನು ಪಾಪು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರಗೆ 24 ವರ್ಷ ವಯಸ್ಸಾಗಿತ್ತು.ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಅವರನ್ನ ಆಸ್ಪತ್ರೆಗೆ ದಾಖಲು ಮಾಡುವ ವೇಳೆಗೆ ಅವರು ಸಾವು ಕಂಡಿರುವುದು ದೃಢವಾಗಿತ್ತು.
ಮೃತ ಮಹಿಳೆಯ ನಿಜವಾದ ಹೆಸರು ಕೆ.ರೇಷ್ಮಾ, ಆದರೆ, ಸೋಶಿಯಲ್ ಮೀಡಿಯಾದಲ್ಲಿ ಚಿನ್ನು ಪಾಪು ಎನ್ನುವ ಹೆಸರಿನಿಂದಲೇ ಅವರು ಫೇಮಸ್ ಆಗಿದ್ದರು. ಮೂಲತಃ ಅವರು ಕೇರಳದ ಆಡೂರಿನವರಾಗಿದ್ದರೂ, ಕರ್ನಾಟಕದ ಗಡಿ ಭಾಗಕ್ಕೆ ಹೊಂದಿರುವ ಕನ್ನಡಿಗರೇ ಹೆಚ್ಚಿರುವ ಕೇರಳದ ಕಾಸರಗೋಡಿನ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ಶವ ಕ್ವಾರ್ಟರ್ಸ್‌ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಚಿನ್ನು ಪಾಪು ಒಂದು ತಿಂಗಳ ಹಿಂದೆ ವಿಚ್ಛೇದನ ಪಡೆದಿದ್ದರು ಎನ್ನುವುದು ಗೊತ್ತಾಗಿದೆ. ಅವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಆತ್ಮ*ತ್ಯೆಗೆ ವಿಚ್ಛೇದನಕ್ಕೆ ಸಂಬಂಧಿಸಿದ ಯಾವುದೇ ಕಾರಣವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.