Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇದೇನು ರಿಲೇಶನ್‌ಶಿಪ್‌ ಸಿಪ್ಪಿಂಗ್‌ ಟ್ರೆಂಡ್‌? ಇದು ಯಾಕೆ ಜನಪ್ರಿಯವಾಗುತ್ತಿದೆ?
ಪ್ರಮುಖಲೈಫ್‌ಸ್ಟೈಲ್

ಇದೇನು ರಿಲೇಶನ್‌ಶಿಪ್‌ ಸಿಪ್ಪಿಂಗ್‌ ಟ್ರೆಂಡ್‌? ಇದು ಯಾಕೆ ಜನಪ್ರಿಯವಾಗುತ್ತಿದೆ?

Share
1 Min Read
SHARE

https://youtube.com/shorts/fUqc-HD4bis?si=BTQaSysLhuDRvAiz

Subscribe ನ್ಯೂಸಿಕ್ಸ್ ಕನ್ನಡ

newsics.com

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಲ್ಲಿರುವ ‘ರಿಲೇಶನ್ ಸಿಪ್ಪಿಂಗ್’ ಟ್ರೆಂಡ್. ಇದು ಪ್ರೀತಿ ಮತ್ತು ಸಂಬಂಧಗಳಲ್ಲಿ ದೊಡ್ಡ ಮಟ್ಟದ ಆಡಂಬರಕ್ಕಿಂತ ಸಣ್ಣ ಸಣ್ಣ ಕ್ಷಣಗಳಿಗೆ ಪ್ರಾಮುಖ್ಯತೆ ನೀಡುವ ಹೊಸ ತಲೆಮಾರಿನ  ಟ್ರೆಂಡ್‌. ‘ಸಿಪ್ಪಿಂಗ್’ ಎಂದರೆ ಯಾವುದನ್ನಾದರೂ ಸಣ್ಣಗೆ ಹೀರುವುದು ಅಥವಾ ಗುಟುಕರಿಸುವುದು ಎಂದರ್ಥ.  ದೈನಂದಿನ ಜೀವನದ ಸರಳ ಮತ್ತು ಮಧುರವಾದ ಕ್ಷಣಗಳನ್ನು ಆನಂದಿಸುವುದನ್ನೇ ಈ ಟ್ರೆಂಡ್ ರಿಲೇಶನ್ ಸಿಪ್ಪಿಂಗ್ ಎಂದು ಕರೆಯುತ್ತದೆ.

ಈ ಟ್ರೆಂಡ್ ಅನುಸರಿಸುವವರು ಪ್ರೀತಿಯನ್ನು ಸಣ್ಣ ಸಣ್ಣ ವಿಷಯಗಳಲ್ಲಿ ಹುಡುಕುತ್ತಾರೆ. ವಾರಾಂತ್ಯದಲ್ಲಿ ದುಬಾರಿ ಹೋಟೆಲ್‌ಗೆ ಹೋಗುವ ಬದಲು, ಮನೆಯಲ್ಲೇ ಕುಳಿತು ಸಂಗಾತಿಯ ನೆಚ್ಚಿನ ಸಿನಿಮಾ ನೋಡುವುದು ಅಥವಾ ಒಟ್ಟಿಗೆ ಅಡುಗೆ ಮಾಡುವುದು. ಬೆಲೆಬಾಳುವ ಒಡವೆಗಳಿಗಿಂತ, ಸಂಗಾತಿಗೆ ಇಷ್ಟವಾದ ತಿಂಡಿಯನ್ನು ಅವರು ಕೇಳದೆಯೇ ತಂದುಕೊಡುವುದು ಅಥವಾ ಹಳೆಯ ನೆನಪಿನ ಸಣ್ಣ ವಸ್ತುವನ್ನು ಉಡುಗೊರೆಯಾಗಿ ನೀಡುವುದು. ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಾಕಲೆಂದೇ ಡೇಟಿಂಗ್ ಹೋಗುವ ಬದಲು, ಆ ಕ್ಷಣವನ್ನು ಕೇವಲ ತಮ್ಮೊಳಗೆ ಸಂಭ್ರಮಿಸುವುದು. ಸಂಗಾತಿಯ ಸಣ್ಣ ಪುಟ್ಟ ಆಸೆಗಳನ್ನು ನೆನಪಿಟ್ಟುಕೊಳ್ಳುವುದು ಉದಾಹರಣೆಗೆ ಅವರ ಕಾಫಿ ಹೇಗಿರಬೇಕು ಎಂದು ನೆನಪಿಡುವುದು ಹೀಗೆ.

ಇಂದಿನ ಕಾಲದಲ್ಲಿ ಎಲ್ಲವೂ ‘ಇನ್‌ಸ್ಟಾಗ್ರಾಮ್ ಪ್ರದರ್ಶನ’ಕ್ಕಾಗಿ ನಡೆಯುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಇದರಿಂದ ಸಂಬಂಧಗಳಲ್ಲಿ ನೈಜತೆ ಕಡಿಮೆಯಾಗುತ್ತಿದೆ ಎಂಬ ಆತಂಕ ಹೆಚ್ಚಿದೆ. ಈ ಕಾರಣದಿಂದಾಗಿ, ಯುವಜನತೆ ಈಗ ನೈಜ ಸಂವಹನ  ಮತ್ತು ಪ್ರಾಮಾಣಿಕವಾದ ಪ್ರೀತಿಯನ್ನು ಬಯಸುತ್ತಿದ್ದಾರೆ. ದೊಡ್ಡ ದೊಡ್ಡ ಆಡಂಬರಗಳು ಕೆಲವೊಮ್ಮೆ ಒತ್ತಡವನ್ನು ಉಂಟುಮಾಡಬಹುದು. ಆದರೆ ಈ ಸಣ್ಣ ಸಣ್ಣ ಹೆಜ್ಜೆಗಳು ಸಂಬಂಧವನ್ನು ಗಟ್ಟಿಗೊಳಿಸಲು ಮತ್ತು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ರಿಲೇಶನ್ ಸಿಪ್ಪಿಂಗ್ ಎಂಬುದು “ನಾನು ನಿನ್ನ ಬಗ್ಗೆ ಕಾಳಜಿ ವಹಿಸುತ್ತೇನೆ” ಎಂದು ಹೇಳಲು ದೊಡ್ಡ ವೇದಿಕೆಯ ಅಗತ್ಯವಿಲ್ಲ, ಬದಲಿಗೆ ಪ್ರೀತಿಯ ಒಂದು ಸಣ್ಣ ಗುಟುಕು ಸಾಕು ಎಂಬ ಮಂತ್ರವನ್ನು ಸಾರುತ್ತದೆ.

https://www.newsics.com/2026/02/09/nationwide-strike-on-february-12th/

TAGGED:Is this the relationship sipping trend?
Share This Article
Facebook Twitter Copy Link Print
Previous Article ಫೆಬ್ರವರಿ 12ರಂದು ದೇಶವ್ಯಾಪಿ ಮುಷ್ಕರ
Next Article ಸುಚಿತ್ರಾ ಲವ್ವಿ ಡವ್ವಿ: ಸೋಶಿಯಲ್ ಮೀಡಿಯಾದಲ್ಲಿ ಚೆಂದದ ಹುಡುಗರಿಗೆ ಗಾಳ – ಸ್ಫೋಟಕ ಮಾಹಿತಿ ಬಹಿರಂಗ

Popular Posts

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read
ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?