https://youtube.com/shorts/fUqc-HD4bis?si=BTQaSysLhuDRvAiz
Subscribe ನ್ಯೂಸಿಕ್ಸ್ ಕನ್ನಡ
newsics.com
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲು ದೇಶದ ಕೇಂದ್ರ ಕಾರ್ಮಿಕ ಸಂಘಗಳು ಫೆಬ್ರವರಿ 12 ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ.
ದೇಶಾದ್ಯಂತ ಬಂದ್ ನಡೆಸುವುದಾಗಿ ಆಲ್ ಇಂಡಿಯಾ ಕಿಸಾನ್ ಸಭಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿವೆ. ಈ ಕುರಿತು ಮಾತನಾಡಿದ ಕಿಸಾನ್ ಸಭಾ ನಾಯಕ ಕೃಷ್ಣ ಪ್ರಸಾದ್, “ಅಮೆರಿಕ-ಭಾರತ ವ್ಯಾಪಾರ ಒಪ್ಪಂದದಿಂದ ರೈತರ ಜೊತೆಗೆ ಹೈನುಗಾರಿಕೆ ಮಾಡುವ ರೈತರಿಗೂ ತೀವ್ರ ನಷ್ಟವಾಗಲಿದೆ. ಒಣಗಿದ ಡಿಸ್ಟಿಲರ್ ಧಾನ್ಯಗಳು , ಪಶುಗ್ರಾಹಕ್ಕಾಗಿ ಕೆಂಪು ಜೋಳ ಮತ್ತು ಸೋಯಾಬೀನ್ ಎಣ್ಣೆಯಂತಹ ವಸ್ತುಗಳಿಗೆ ಭಾರತದ ಮಾರುಕಟ್ಟೆಯನ್ನು ಮುಕ್ತಗೊಳಿಸುವುದರಿಂದ ಕೃಷಿ ಮತ್ತು ಡೈರಿ ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಜೊತೆಗಿನ ಭಾರತದ ಒಪ್ಪಂದಗಳು ದೇಶಕ್ಕೆ ಪ್ರಯೋಜನಕಾರಿಯಾಗಿಲ್ಲ, ಅವು ಕೇವಲ ಅವರ ಸ್ವಂತ ಆರ್ಥಿಕ ಹಿತಾಸಕ್ತಿಗಳಿಗಾಗಿ ನಡೆದಿವೆ ಎಂದು ವಿಮರ್ಶಿಸಿದ್ದಾರೆ.
ಫೆಬ್ರವರಿ 2, 2026 ರಂದು ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50 ರಿಂದ ಶೇ. 18ಕ್ಕೆ ಇಳಿಸಿದೆ.ಸೋಯಾಬೀನ್ ಎಣ್ಣೆ, ಕೆಂಪು ಜೋಳ ಮತ್ತು ಪ್ರಾಣಿಗಳ ಆಹಾರವಾಗಿ ಬಳಸುವ DDGS ಆಮದಿನಿಂದ ಸ್ಥಳೀಯ ಬೆಲೆಗಳು ಕುಸಿಯಬಹುದು ಎಂಬುದು ರೈತರ ಭಯ.ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಹಾಲು, ಬೆಣ್ಣೆ, ತುಪ್ಪದಂತಹ ಡೈರಿ ಉತ್ಪನ್ನಗಳು ಮತ್ತು ಗೋಧಿ, ಅಕ್ಕಿಯಂತಹ ಪ್ರಮುಖ ಬೆಳೆಗಳಿಗೆ ಒಪ್ಪಂದದಲ್ಲಿ ರಕ್ಷಣೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬಂದ್ ಪರಿಣಾಮ ಹೇಗಿರಬಹುದು?
ಬ್ಯಾಂಕಿಂಗ್: ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಹಣಕಾಸು ವಹಿವಾಟಿನಲ್ಲಿ ವಿಳಂಬವಾಗಬಹುದು.
ಸಾರಿಗೆ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕ ಸಂಘಟನೆಗಳು ಈ ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲವಾದರೂ, ಹಲವು ಕಡೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಅಗತ್ಯ ಸೇವೆಗಳು: ಹಾಲು, ತರಕಾರಿ ಮತ್ತು ಆಸ್ಪತ್ರೆಗಳಂತಹ ಅಗತ್ಯ ಸೇವೆಗಳಿಗೆ ಸಾಮಾನ್ಯವಾಗಿ ಬಂದ್‌ನಿಂದ ವಿನಾಯಿತಿ ಇರುತ್ತದೆ.
https://www.newsics.com/2026/02/09/usa-cricketer-harmeet-singh-arrested/