Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಸಿಟಿ ಜನರಲ್ಲಿ ಹೆಚ್ಚಾಗುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ – ಆರೋಗ್ಯ ಇಲಾಖೆ ಆಘಾತಕಾರಿ ಅಂಶ ಬಯಲು
ಕರ್ನಾಟಕಆರೋಗ್ಯಪ್ರಮುಖಲೈಫ್‌ಸ್ಟೈಲ್

ಸಿಟಿ ಜನರಲ್ಲಿ ಹೆಚ್ಚಾಗುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ – ಆರೋಗ್ಯ ಇಲಾಖೆ ಆಘಾತಕಾರಿ ಅಂಶ ಬಯಲು

Share
2 Min Read
SHARE

https://youtube.com/shorts/j6ilMdnEwVU?si=GV2lBgMPtg5UG3lR

Subscribe ನ್ಯೂಸಿಕ್ಸ್ ಕನ್ನಡ

newsics.com

ದೇಹಕ್ಕೆ ಬಂದ ರೋಗವನ್ನು ಗುಣಪಡಿಸಬಹುದು ಆದರೆ ಮನಸ್ಸಿಗಾದ ನೋವನ್ನು ವಾಸಿ ಮಾಡಲು ಮಾತ್ರೆ, ಔಷಧಗಳಿಂದ ಸಾಧ್ಯವಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಾನಸಿಕ ಅನಾರೋಗ್ಯ ಮತ್ತು ಒತ್ತಡ ಹೆಚ್ಚಾಗುತ್ತಿದೆ. ಜನ ಎಚ್ಛೆತ್ತುಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಈ ಬಗ್ಗೆ ಅನೇಕ ರೀತಿಯ ಸಂಶೋಧನೆಗಳು ಕೂಡ ನಡೆದಿದ್ದು,ಟೆಲಿ ಮಾನಸ್​​ಗೆ ಮನೋ ರೋಗಿಗಳಿಂದ ಲಕ್ಷಾಂತರ ಕರೆಗಳು ಬರುತ್ತಿವೆ. ಸಿ. ಜೆ ರಾಯ್​ ಹಾಗೂ ಮಕ್ಕಳ ಸೂಸೈಡ್ ಬಳಿಕ ಆರೋಗ್ಯ ಇಲಾಖೆ ಶಾಕಿಂಗ್ ಮಾಹಿತಿಯೊಂದನ್ನು ಬಯಲು ಮಾಡಿದೆ.

ಸಿಟಿಯ ವೇಗದ ಜೀವನಶೈಲಿ ಬೆಂಗಳೂರಿನ ಜನರಲ್ಲಿ ಮಾನಸಿಕ ಅನಾರೋಗ್ಯ ಮತ್ತು ಒತ್ತಡವನ್ನು ಹೆಚ್ಚಿಸಿದೆ. ಸಿ.ಜೆ. ರಾಯ್ ಘಟನೆಯ ನಂತರ, ಆತ್ಮಹತ್ಯೆ ಯೋಚನೆಗಳು ಮತ್ತು ಖಿನ್ನತೆ ಪ್ರಕರಣಗಳು ಹೆಚ್ಚಾಗಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಟೆಲಿ ಮಾನಸ್ (14416) ಸಹಾಯವಾಣಿ ಆರಂಭಿಸಿದೆ.

ಸಿಜೆ ರಾಯ್ ಹಾಗೂ ಮಕ್ಕಳ ಸೂಸೈಡ್ ಘಟನೆ ಬಳಿಕ ಆರೋಗ್ಯ ಇಲಾಖೆ ಅಚ್ಚರಿಯ ಮಾಹಿತಿ ನೀಡಿದೆ. ಒಂದೇ ವರ್ಷದಲ್ಲಿ 101,898 ಜನರಿಗೆ ಆತ್ಮಹತ್ಯೆ ಯೋಚನೆಗಳು ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಗುಪ್ತ ಖಿನ್ನತೆ ಕೇಸ್ ಹೆಚ್ಚಳ ಕಂಡಿದೆ. ಹಗಲು-ರಾತ್ರಿ ಎನ್ನದೇ ಟೆಲಿ ಮಾನಸ್​​ಗೆ ಮನೋ ರೋಗಿಗಳು ಕರೆ ಮಾಡುತ್ತಿದ್ದಾರೆ.

 

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಸ್ಫೋಟಕ ಅಂಕಿ-ಅಂಶ ಬಯಲಾಗಿದೆ. ಟೆಲಿ ಮಾನಸ್​ಗೆ ಸರಾಸರಿ ಎರಡುವರೆ ಲಕ್ಷ ಜನ ಕರೆ ಮಾಡಿ ತಮ್ಮ ಖಿನ್ನತೆ ಬಗ್ಗೆ ದೂರು ಹೇಳಿಕೊಂಡಿದ್ದಾರೆ. ಈ ಪೈಕಿ ಪುರಷರಲ್ಲಿ 49.86%, ಮಹಿಳೆಯರಲ್ಲಿ 45.45% ಮಾನಸಿಕ ಒತ್ತಡ ಕಂಡು ಬಂದಿದೆ.

ರಾಯ್ ಅವರಂತೆ ನಗದರ ಅನೇಕ ಜನರಿಲ್ಲಿ ಗುಪ್ತ ಖಿನ್ನತೆ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಒತ್ತಡ, ಕೌಟುಂಬಿಕ ಮತ್ತು ಕೆಲಸದ ಒತ್ತಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ತಮಗೆ ಗೊತ್ತಿಲ್ಲದೆ ಜನರು ಖಿನ್ನತೆಗೆ ಒಳಪಡುತ್ತಿದ್ದು, ಗುಪ್ತ ಖಿನ್ನತೆಗೆ ಒಳಪಟ್ಟು ಸಾಕಷ್ಟು ಸಮಯದ ನಂತರ ಮನೋಶಾಸ್ತ್ರಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಟಿ ಜನರ ಮಾನಸಿಕ ಆರೋಗ್ಯಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯಿಂದ ಟೆಲಿ ಮಾನಸ್ ಯೋಜನೆ ಶುರು ಮಾಡಿದೆ. ನಿಮ್ಹಾನ್ಸ್ ಆಸ್ಪತ್ರೆ ಸಹಯೋಗದಲ್ಲಿ ಟೆಲಿ ಮಾನಸ್ ಸೇವೆ ಆರಂಭವಾಗಿದ್ದು, ಈಗಾಗಲೇ ಸರಾಸರಿ 2 ಲಕ್ಷ 3 ಸಾವಿರ ಜನರಿಗೆ ಚಿಕಿತ್ಸೆ ಸಲಹೆ ನೀಡಲಾಗಿದೆ.

ಖಿನ್ನತೆ ಬಗ್ಗೆ ಹೆಚ್ಚಿರುವ ಹಿನ್ನಲೆ ಆರೋಗ್ಯ ಇಲಾಖೆ ಮೂರು ಹಂತದಲ್ಲಿ ವೈದ್ಯರ ನೇಮಕ ಮಾಡಿಕೊಂಡಿದೆ. ಸಿಂಪಲ್ ಸಮಸ್ಯೆಗೆ ಜ್ಯೂನಿಯರ್ ಸೈಕಾಲಜಿಸ್ಟ್ಗಳಿಂದ ಚಿಕಿತ್ಸೆ ನೀಡಿದರೆ, ಕಷ್ಟಕರ ಕೇಸ್​​ಗಳಿಗೆ ಸೀನಿಯರ್ ಸೈಕಾಲಜಿಸ್ಟ್ ಸಹಾಯ ಮಾಡುತ್ತಾರೆ. ಗೊಂದಲಮಯ ಸೇರಿದಂತೆ ದೊಡ್ಡ ಸಮಸ್ಯೆಗಳಿದ್ದಾಗ ವೃತ್ತಿಪರ ವೈದ್ಯರು ಸಹಾಯ ಮಾಡುತ್ತಾರೆ. ಇದಕ್ಕಾಗಿಯೇ 14416 ಸಹಾಯವಾಣಿ ಶುರು ಮಾಡಿದ್ದು, ಯಾವುದೇ ಮುಜುಗರ ಇಲ್ಲದೇ ಸೇವೆ ಪಡೆಯಲು ಆರೋಗ್ಯ ಇಲಾಖೆ ಮನವಿ ಮಾಡಿದೆ.

 

https://www.newsics.com/2026/02/08/husband-cuts-off-genitals-because-he-couldnt-satisfy-his-wife-sexually/

TAGGED:Mental depression is increasing among city residents - Health Department reveals shocking fact
Share This Article
Facebook Twitter Copy Link Print
Previous Article ಪತ್ನಿಗೆ ಲೈಂಗಿಕ ತೃಪ್ತಿ ನೀಡಲು ಸಾಧ್ಯವಾಗದ್ದಕ್ಕೆ ಜನನಾಂಗ ಕತ್ತರಿಸಿಕೊಂಡ ಗಂಡ
Next Article ಹುಷಾರ್..! 10 ನಿಮಿಷ ಟಾಯ್ಲೆಟ್​ನಲ್ಲಿ ಕುಳಿತರೆ ನಿಮಗೆ ಈ ಕಾಯಿಲೆ ಬರಬಹುದು

Popular Posts

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read
ದೇಶಪ್ರಮುಖ

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?