https://youtube.com/shorts/kv9in5qxZnE?si=xMEQPbw5L2rTAx6o
Subscribe ನ್ಯೂಸಿಕ್ಸ್ ಕನ್ನಡ
newsics.com
ಸೋಲಾಪುರ್ : ಸಿಜೆ ರಾಯ್ ಬೆನಲ್ಲೇ ಮತ್ತೊಬ್ಬ ಉದ್ಯಮಿ ದುರಂತ ಸಾವು, ಜನಪ್ರಿಯ ಮುಲ್ತಾನಿ ಬೇಕರಿ ಮಾಲೀಕ, ಶ್ರೀಮಂತ ಉದ್ಯಮಿ ಸುನಿಲ್ ಮೋತಿಲಾಲ್ ಬದುಕು ಅಂತ್ಯಗೊಳಿಸಿದ್ದಾರೆ. ಕೆಲವೇ ದಿನಗಳ ಅಂತರದಲ್ಲಿ ಉದ್ಯಮ ಜಗತ್ತು ಬೆಚ್ಚಿ ಬಿದ್ದಿದೆ.
ಮಹಾರಾಷ್ಟ್ರದ ಸೋಲಾಪುರದ ಪನಾಶ್ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ಬಳಿಕ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ಸುನಿಲ್ ಮೋತಿಲಾಲ್ ತೀವ್ರವಾಗಿ ಮಾನಸಿಕ ಒತ್ತಡದಲ್ಲಿದ್ದರು ಎಂದು ಸ್ಥಳೀಯರು ಗಮನಿಸಿದ್ದಾರೆ. 17ನೇ ಮಹಡಿ ತುದಿಯಲ್ಲಿ ನಿಂತ ಮುಲ್ತಾನಿ ಬೇಕರಿ ಮಾಲೀಕನ ಪರಿಸ್ಥಿತಿ ಕಂಡು ಆತಂಕಗೊಂಡ ಇತರ ನಿವಾಸಿಗಳು ತಕ್ಷಣವೇ ಸಕ್ಯೂರಿಟಿ ಗಾರ್ಡ್‌ಗೆ ಸೂಚನೆ ನೀಡಿದ್ದಾರೆ.
17ನೇ ಮಹಡಿ ಬಳಿಕ ತೆರಳಿದ ಸೆಕ್ಯೂರಿಟಿ ಗಾರ್ಡ್ ಕೈಮುಗಿದು ಬೇಡಿಕೊಂಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಸತತವಾಗಿ ಮಾತುಕತೆ ನಡೆಸಿ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುನಿಲ್ ಮೋತಿಲಾಲ್ ಮನ ಒಲಿಸಿದ ಸೆಕ್ಯೂರಿಟಿ ಗಾರ್ಡ್ ಯಶಸ್ವಿಯಾಗಿ ಉದ್ಯಮಿಯನ್ನು ಕೆಳಗೆ ಕರೆ ತರುವ ಪ್ರಯತ್ನ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ಗೆ ಭರವಸೆ ನೀಡಿದ ಉದ್ಯಮಿ, ತಾನು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ತೀವ್ರ ಒತ್ತಡದಲ್ಲಿ ತಾನು ನಿರ್ಧಾರ ಮಾಡಿದ್ದೆ. ಇದೀಗ ಬದಲಾಯಿಸಿದ್ದೇನೆ ಎಂದಿದ್ದಾರೆ. ಸುನಿಲ್ ಮೋತಿಲಾಲ್ ಮಾತು ನಂಬಿಸಿದ ಸೆಕ್ಯೂರಿಟಿ ಗಾರ್ಡ್ ನಿಟ್ಟುಸಿರು ಬಿಟ್ಟು ಮೂರು ಫ್ಲೋರ್ ಇಳಿಯುತ್ತಿದ್ದಂತೆ ತನ್ನ ಕೀ ಮೇಲಿದೆ ತರುತ್ತೇನೆ ಎಂದು ಉದ್ಯಮಿ ಹೇಳಿದ್ದಾರೆ. ಮತ್ತೆ ಮೇಲಕ್ಕೆ ತೆರಳಿದ ಉದ್ಯಮಿ ಹಿಂದಿನಿಂದಲೇ ಸೆಕ್ಯೂರಿಟಿ ಗಾರ್ಡ್ ಕೂಡ ತೆರಳಿದ್ದಾರೆ. ಆದರೆ ಒಂದು ಒಂದೇ ಸಮನೇ ಓಡಿದ ಉದ್ಯಮಿ ರೂಫ್ ಟಾಪ್ ಮೇಲಿಂದ ಕೆಳಕ್ಕೆ ಜಿಗಿದಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಆರಂಭಿಸಿದ್ದಾರೆ.