https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ 2026 ರ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 203 ರನ್ಗಳ ಬೃಹತ್ ರನ್ ದಾಖಲಿಸಿತು.
ಈ ಗುರಿ ಬೆನ್ನಟ್ಟಿದ ಆರ್ಸಿಬಿ ಕೊನೆಯ ಓವರ್ನಲ್ಲಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ, ನಾಯಕಿ ಜೆಮಿಮಾ ರಾಡ್ರಿಗಸ್ (57), ಅನುಭವಿ ಲೌರಾ ವೊಲ್ವಾರ್ಡ್ತ್ (44) ಹಾಗೂ ಚಿನೆಲ್ಲೆ ಹೆನ್ರಿ (35) ಅವರ ಅಮೋಘ ಆಟದ ಬಲದಿಂದ 4 ವಿಕೆಟ್‌ಗೆ 203 ರನ್ ಕಲೆಹಾಕಿತ್ತು.
ಈ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದ ಆರ್‌ಸಿಬಿ, ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 204 ರನ್ ಗಳಿಸಿ ಗುರಿ ಮುಟ್ಟಿತು.
ಕೇವಲ 9 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಗಿದ್ದ ಆರ್‌ಸಿಬಿಗೆ, ನಾಯಕಿ ಸ್ಮೃತಿ ಮಂದಾನ ಹಾಗೂ ಜಾರ್ಜಿಯಾ ವೋಲ್ ಚೇತರಿಕೆ ನೀಡಿದರು.
ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 165 ರನ್ ಸೇರಿಸಿದ ಈ ಜೋಡಿ, ತಂಡವನ್ನು ಜಯದ ಸನಿಹ ತಂದು ನಿಲ್ಲಿಸಿದರು. 54 ಎಸೆತಗಳಲ್ಲಿ 79 ರನ್ ಗಳಿಸಿದ್ದ ವೋಲ್, ತಂಡದ ಮೊತ್ತ 174 ರನ್ ಆಗಿದ್ದಾಗ ಪೆವಿಲಿಯನ್ ಸೇರಿಕೊಂಡರು. ನಂತರ, ಬಂದ ರಿಚಾ ಘೋಷ್ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. 41 ಎಸೆತಗಳಲ್ಲಿ 87 ರನ್ ಗಳಿಸಿದ್ದ ಮಂದಾನ ಕೂಡ ಅವರ ಹಿಂದೆಯೇ ಹೊರಟರು.
ಇದರಿಂದಾಗಿ ಪಂದ್ಯವು ಕೊನೇ ಓವರ್‌ವರೆಗೂ ಸಾಗಿತು.
ಕೊನೆಯಲ್ಲಿ ಅನುಭವದ ಆಟವಾಡಿದ ನದೀನ್ ಡಿ ಕ್ಲರ್ಕ್, ಆರ್‌ಸಿಬಿ ಪಾಳಯವನ್ನು ಆವರಿಸಿದ್ದ ಆತಂಕವನ್ನು ದೂರ ಮಾಡಿದರು. ರಾಧಾ ಯಾದವ್ ಜೊತೆಗೂಡಿ ಜಯದ ರನ್ ಕದಿಯುವ ಮೂಲಕ ಆರ್‌ಸಿಬಿಯನ್ನು ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದರು.
ಆದರೆ, ಸತತ ನಾಲ್ಕು ಆವೃತ್ತಿಗಳಲ್ಲೂ ಫೈನಲ್‌ಗೇರಿದ ಸಾಧನೆ ಮಾಡಿದ ಕ್ಯಾಪಿಟಲ್ಸ್, ಮತ್ತೊಮ್ಮೆ ನಿರಾಸೆ ಅನುಭವಿಸಿತು.
ಗರ್ಲ್ ಫ್ರೆಂಡ್ ಭೇಟಿ ಮಾಡಲೆಂದೇ ಲಾಹೋರ್ ನಲ್ಲಿ ಸೇತುವೆ ನಿರ್ಮಿಸಿದ್ದ ಪಾಕ್ ಪ್ರಧಾನಿ