https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಕಳೆದ 10 ವರ್ಷಗಳಲ್ಲಿ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ, ಪ್ರಸ್ತುತ ದೇಶವು 100 ಬಿಲಿಯನ್ ಡಾಲರ್‌ಗಳಷ್ಟು ಸಾಲದ ಹೊರೆಯಿಂದ ಬಳಲುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನದ ಹಾಲಿ ಪ್ರಧಾನಿ ಶಹಬಾಜ್ ಶರೀಫ್ ನಿರ್ಮಿಸಿರುವ ಸೇತುವೆ ಈಗ ಸಾಕಷ್ಟು ಸದ್ದು ಮಾಡುತ್ತಿದೆ.
ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಶಹಬಾಜ್ ಷರೀಫ್ ಐದು ಬಾರಿ ವಿವಾಹವಾಗಿದ್ದಾರೆ.ಅದರಲ್ಲೂ 1993 ರಲ್ಲಿ ತಮ್ಮ ಎರಡನೇ ಪತ್ನಿ ಆಲಿಯಾ ಹನಿ ಅವರನ್ನು ವಿವಾಹವಾಗಿದ್ದುಬಹಳ ಸುದ್ದಿಗೆ ಕಾರಣವಾಗಿತ್ತು. ಅಲಿಯಾ ಅವರನ್ನು ಮದುವೆಯಾದಾಗ ಶಹಬಾಜ್ ಷರೀಫ್ ಅವರಿಗೆ ಸುಮಾರು 43 ವರ್ಷ ವಯಸ್ಸಾಗಿತ್ತು. ಆಗ ಅವರು ಲಾಹೋರ್‌ನಲ್ಲಿ ಆಲಿಯಾ ಹನಿ ಹೆಸರಿನಲ್ಲಿ ಸೇತುವೆಯನ್ನು ನಿರ್ಮಿಸಿದ್ದರು.ಅಚ್ಚರೆ ಎಂದರೆ ಈ ಸೇತುವೆ ನಿರ್ಮಿಸಲು ಪ್ರಮುಖ ಕಾರಣವೆಂದರೆ ತಮ್ಮ ಎರಡನೇ ಪತ್ನಿ (ಆಲಿಯಾ ಹನಿ) ಅವರನ್ನು ಭೇಟಿಯಾಗಲು ಎನ್ನಲಾಗಿದೆ. ಆದಾಗ್ಯೂ, ಆಲಿಯಾ ಹನಿ ಅವರೊಂದಿಗಿನ ಅವರ ವಿವಾಹವು ಹೆಚ್ಚು ಕಾಲ ಉಳಿಯಲಿಲ್ಲ. ಅವರು ಮದುವೆಯಾದ ಅದೇ ವರ್ಷ 1993 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ, ಆಲಿಯಾ ಹನಿ 1993 ರಲ್ಲಿ ನಿಗೂಢವಾಗಿ ಸಾವನ್ನಪ್ಪಿದರು.
ಶೆಹಬಾಜ್ ಷರೀಫ್ ಅವರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದರೂ, ಪಾಕ್ ಸ್ಥಿತಿ ಮಾತ್ರ ಹದಗೆಟ್ಟಿದೆ. ಇತ್ತೀಚೆಗೆ, ಪಾಕಿಸ್ತಾನದ ಕೇಂದ್ರ ಬ್ಯಾಂಕ್ ದೇಶದ ವಿದೇಶಿ ವಿನಿಮಯ ಸಂಗ್ರಹವು $4.3 ಬಿಲಿಯನ್‌ಗೆ ಇಳಿದಿದೆ.ಈ ಹಣದಲ್ಲಿ ಕೇವಲ ಮೂರು ವಾರಗಳವರೆಗೆ ಮಾತ್ರ ದೇಶವನ್ನು ನಡೆಸಬಹುದಾಗಿದೆ.ಇದು ದೇಶ ದಿವಾಳಿಯಾಗುವ ಅಪಾಯವನ್ನು ಹೆಚ್ಚಿಸಿದೆ. ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಪಾಕಿಸ್ತಾನ ಸರ್ಕಾರ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಸಾಲವನ್ನು ಕೋರಿದೆ ಎಂದು ವರದಿಯಾಗಿದೆ.
ಕಮಲಾಕರ್ ಗುರೂಜಿ ಅನೈತಿಕ ಸಂಬಂಧಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು ಹೇಗೆ?