Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸಹೋದರಿಯರ ಆತ್ಮಹತ್ಯೆ ಕೇಸ್: ಕೊರಿಯನ್‌ ಹುಡುಗ್ರನ್ನ ಮದುವೆಯಾಗಲು ಬಯಸಿದ್ರು, ಆ ರಾತ್ರಿ ಗಾಜಿಯಾಬಾದ್‌ನಲ್ಲಿ ಏನಾಯ್ತು?
ದೇಶಪ್ರಮುಖವೈರಲ್

ಸಹೋದರಿಯರ ಆತ್ಮಹತ್ಯೆ ಕೇಸ್: ಕೊರಿಯನ್‌ ಹುಡುಗ್ರನ್ನ ಮದುವೆಯಾಗಲು ಬಯಸಿದ್ರು, ಆ ರಾತ್ರಿ ಗಾಜಿಯಾಬಾದ್‌ನಲ್ಲಿ ಏನಾಯ್ತು?

Share
3 Min Read
SHARE

https://youtube.com/shorts/8CqHwGKEL5g?si=1-oJ_JGuSNaYETpQ

Subscribe ನ್ಯೂಸಿಕ್ಸ್ ಕನ್ನಡ

newsics.com

ಗಾಜಿಯಾಬಾದ್‌ನ ತಿಲಾ ಮಾಡ್ ಪ್ರದೇಶದಲ್ಲಿ ಮೂವರು ಅಪ್ರಾಪ್ತ ಸಹೋದರಿಯರ ಆತ್ಮಹತ್ಯೆ ಇಡೀ ಸಮುದಾಯವನ್ನೇ ಬೆಚ್ಚಿಬೀಳಿಸಿದೆ. ಭಾರತ್ ಸಿಟಿ ಸೊಸೈಟಿಯ ಒಂಬತ್ತನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದು, ಕುಟುಂಬಗಳು, ನೆರೆಹೊರೆಯವರು ಮತ್ತು ಪೊಲೀಸರಲ್ಲಿ ಆಘಾತದ ಅಲೆಯನ್ನೇ ಸೃಷ್ಟಿಸಿದೆ.
ಪೊಲೀಸರ ಪ್ರಕಾರ, ಮೂವರು ಸಹೋದರಿಯರೂ ಕೊರಿಯನ್ ಸಂಸ್ಕೃತಿಯಿಂದ ಆಳವಾಗಿ ಪ್ರಭಾವಿತರಾಗಿದ್ದರು. ಈಗ ಈ ಪ್ರಕರಣವು ಆತ್ಮ*ಹ*ತ್ಯೆಗೆ ಮಾತ್ರವಲ್ಲ, ಸಾಮಾಜಿಕ ಮಾಧ್ಯಮ, ಮೊಬೈಲ್ ಫೋನ್ ವ್ಯಸನ ಮತ್ತು ಕೌಟುಂಬಿಕ ಒತ್ತಡದಂತಹ ಹಲವಾರು ಸಮಸ್ಯೆಗಳಿಗೆ ಸಂಬಂಧಿಸಿದೆ ಎಂದು ತೋರುತ್ತದೆ.
ಪೊಲೀಸರ ಪ್ರಕಾರ, ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮೂವರು ಸಹೋದರಿಯರು ಕೋಣೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದರು. ನಂತರ ಅವರು ಸ್ಟೂಲ್ ಬಳಸಿ ಒಬ್ಬೊಬ್ಬರಾಗಿ ಬಾಲ್ಕನಿಯಿಂದ ಹಾರಿದರು. ಆರಂಭದಲ್ಲಿ ನೆರೆಹೊರೆಯವರು ಇದು ಅಪಘಾತ ಎಂದೇ ಭಾವಿಸಿದ್ದರು. ಆದರೆ ಶೀಘ್ರದಲ್ಲೇ ಪ್ರದೇಶದಾದ್ಯಂತ ಇದು ಆತ್ಮ*ಹ*ತ್ಯೆ ಪ್ರಕರಣ ಎಂಬ ಸುದ್ದಿ ಹರಡಿತು.

ಪೊಲೀಸರ ಪ್ರಕಾರ, ಮೃತ ಸಹೋದರಿಯರು ನಿಶಿಕಾ (16 ವರ್ಷ), ಪ್ರಾಚಿ (14 ವರ್ಷ), ಮತ್ತು ಪಖಿ (12 ವರ್ಷ) ಎನ್ನಲಾಗಿದೆ. ಮೂವರೂ ಒಡಹುಟ್ಟಿದ ಸಹೋದರಿಯರು. ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.

ಪೊಲೀಸರು ಘಟನಾ ಸ್ಥಳದಲ್ಲಿ ಒಂದು ಪುಟದ ಆತ್ಮ*ಹ*ತ್ಯೆ ಪತ್ರ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ “ಕ್ಷಮಿಸಿ, ಅಮ್ಮ ಮತ್ತು ಅಪ್ಪ.” ಎಂದಿತ್ತು. ಎಂಟು ಪುಟಗಳ ಡೈರಿಯನ್ನು ಸಹ ವಶಪಡಿಸಿಕೊಳ್ಳಲಾಯಿತು. ಇದರಲ್ಲಿ ಸಹೋದರಿಯರು ತಮ್ಮ ಆದ್ಯತೆಗಳು, ಆಲೋಚನೆಗಳು ಮತ್ತು ಸಂದರ್ಭಗಳ ಬಗ್ಗೆ ಬರೆದಿದ್ದರು.
ಹಾಗಾದರೆ ಡೈರಿಯಲ್ಲಿ ಏನು ಬರೆದಿತ್ತು?
ಮೂವರು ಸಹೋದರಿಯರು ಕೊರಿಯನ್ ಸಂಸ್ಕೃತಿ, ಕೆ-ಪಾಪ್, ಕೊರಿಯನ್ ಚಲನಚಿತ್ರ, ಸಂಗೀತ ಮತ್ತು ಯೂಟ್ಯೂಬ್‌ನಿಂದ ಆಳವಾಗಿ ಪ್ರಭಾವಿತರಾಗಿದ್ದಾರೆ ಎಂದು ಹೇಳಲಾಗಿದೆ. ಕೊರಿಯನ್ ಜೀವನಶೈಲಿ ಅಳವಡಿಸಿಕೊಳ್ಳಲು ಬಯಸಿದ್ದರು. ಪರಿಣಾಮವಾಗಿ, ಕೊರಿಯನ್ ಪುರುಷನನ್ನು ಮದುವೆಯಾಗುವ ಬಯಕೆಯನ್ನ ವ್ಯಕ್ತಪಡಿಸಿದರು. ಯಾವಾಗ ಅವರ ಮೊಬೈಲ್ ಫೋನ್‌ಗಳನ್ನು ಆಫ್ ಮಾಡಲಾಯ್ತೋ ಅವರು ಪ್ರೀತಿಸುವ ಪ್ರಪಂಚದಿಂದ ಸಂಪರ್ಕ ಕಡಿತಗೊಂಡಿದ್ದಾರೆ ಎಂದು ಡೈರಿಯಲ್ಲಿ ಹೇಳಲಾಗಿದೆ.
ಗೇಮ್ ಒತ್ತಡ ಇತ್ತೇ?
ಪೊಲೀಸರು ತಮ್ಮ ಆರಂಭಿಕ ತನಿಖೆಯಲ್ಲಿ ಯಾವುದೇ “ಕೊರಿಯನ್ ಲವ್ ಗೇಮ್” ಬಗ್ಗೆ ಪುರಾವೆಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹುಡುಗಿಯರು ಪ್ಲೇ ಸ್ಟೋರ್‌ನಲ್ಲಿ ಸುಲಭವಾಗಿ ಲಭ್ಯವಿರುವ ಸಾಮಾನ್ಯ ಮೊಬೈಲ್ ಆಟಗಳನ್ನು ಆಡುತ್ತಿದ್ದರು. ಪೊಲೀಸರು ಪ್ರಸ್ತುತ ಎಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ ಪರೀಕ್ಷೆಗಾಗಿ ಕಾಯುತ್ತಿದ್ದಾರೆ.
ಕುಟುಂಬದ ಹಿನ್ನೆಲೆ ಹೇಗಿತ್ತು?
ಹುಡುಗಿಯರ ತಂದೆ ಎರಡು ಬಾರಿ ಮದುವೆಯಾಗಿದ್ದು ಐದು ಮಕ್ಕಳನ್ನು ಹೊಂದಿದ್ದಾರೆಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರ ಪ್ರಕಾರ, ಮೊಬೈಲ್ ಫೋನ್ ವ್ಯಸನ ಇರುವುದಕ್ಕೇ ಕುಟುಂಬವು ಹುಡುಗಿಯರು ತಮ್ಮ ಫೋನ್ ಬಳಸುವುದನ್ನು ನಿಷೇಧಿಸಿತ್ತು. ಈ ನಿರ್ಧಾರವು ಮನೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲು ಕಾರಣವಾಯಿತು ಮತ್ತು ಹುಡುಗಿಯರು ಮಾನಸಿಕ ಯಾತನೆಯನ್ನು ಅನುಭವಿಸಲು ಪ್ರಾರಂಭಿಸಿದರು.
ಆತ್ಮಹತ್ಯೆಗೆ ಮುನ್ನ
1:35 ಮೂವರು ಹೆಣ್ಣುಮಕ್ಕಳು ನೀರು ಕುಡಿಯುವುದಾಗಿ ನೆಪ ಹೇಳಿ ತಾಯಿಯ ಕೋಣೆಯಿಂದ ಹೊರಟು ಬೇರೆ ಕೋಣೆಗೆ ಹೋದರು.
1:40 ಕೋಣೆಯನ್ನು ತಲುಪಿದ ನಂತರ, ಹೆಣ್ಣುಮಕ್ಕಳು ಒಳಗಿನಿಂದ ಬಾಗಿಲನ್ನು ಲಾಕ್ ಮಾಡಿದರು. ಬಾಗಿಲು ಮುಚ್ಚುವ ಶಬ್ದ ಕೇಳಿ ತಾಯಿಗೆ ಅನುಮಾನ ಬಂದು ಹೊರಗೆ ಬಂದು ಬಡಿಯಲು ಪ್ರಾರಂಭಿಸಿದಳು.
1:45: ಬಾಗಿಲು ತೆರೆಯದಿದ್ದಾಗ ತಾಯಿ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ತಂದೆಯನ್ನು ಎಬ್ಬಿಸಿ, ಅವನಿಗೆ ಇಡೀ ಕಥೆಯನ್ನು ಹೇಳಿದಳು.
1:50: ತಂದೆ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಮತ್ತು ಕೋಣೆ ಮುಚ್ಚಿತ್ತು.
1:55: ಇದ್ದಕ್ಕಿದ್ದಂತೆ ಕೆಳಗೆ ಏನೋ ಬೀಳುವ ಶಬ್ದ ಕೇಳಿಸಿತು. ತಂದೆ ಪಕ್ಕದ ಕೋಣೆಯ ಕಿಟಕಿಯಿಂದ ಹೊರಗೆ ನೋಡಿದಾಗ ತನ್ನ ಒಬ್ಬಳು ಹೆಣ್ಣುಮಗಳು ಮಕಾಡೆ ಮಲಗಿರುವುದನ್ನು ಕಂಡಳು.
ಕೆಲವೇ ಕ್ಷಣಗಳಲ್ಲಿ ಇತರ ಇಬ್ಬರು ಹೆಣ್ಣುಮಕ್ಕಳು ಕೂಡ ಒಬ್ಬೊಬ್ಬರಾಗಿ ಕೆಳಗೆ ಹಾರಿದರು. ಆತಂಕಗೊಂಡ ತಂದೆ ತಕ್ಷಣ ಡಯಲ್ 112 ಗೆ ಕರೆ ಮಾಡಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಬಂದವು. ಮೂವರು ಹೆಣ್ಣುಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಬಾರಾಮತಿ ದುರಂತ ಕೇವಲ ಅಪಘಾತವಲ್ಲವೆಂದ ತನಿಖೆ; ಹೇಳಿದ್ದೇನು?

TAGGED:Sisters' suicide case: They wanted to marry Korean boyswhat happened that night in Ghaziabad?
Share This Article
Facebook Twitter Copy Link Print
Previous Article ಬಾರಾಮತಿ ದುರಂತ ಕೇವಲ ಅಪಘಾತವಲ್ಲವೆಂದ ತನಿಖೆ; ಹೇಳಿದ್ದೇನು?
Next Article 1 ವರ್ಷದ ಮಗುವಿನ ಬರ್ತ್‌ಡೇಗೆ ಹೈವೇ ಪಕ್ಕದ ಸೈಟ್; 11 ಲಕ್ಷ ಕ್ಯಾಶ್ ಗಿಫ್ಟ್ ನೀಡಿದ ಸೋದರಮಾವ

Popular Posts

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

ಅಮೆಜಾನ್ ಉದ್ಯೋಗಿನಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read

ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಸುದ್ದಿ ಕೇಳಿ ಪವನ್ ಕುಮಾರ್‌ಗೆ ‘ಹಾರ್ಟ್ ಬ್ರೇಕ್’; ವೈರಲ್ ಆಯ್ತು ಫನ್ನಿ ವಿಡಿಯೋ!

2 Min Read

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read

You Might Also Like

ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ವೈರಲ್

ಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ: ಪೊಲೀಸ್ ಠಾಣೆಗೆ ಮುತ್ತಿಗೆ, ತೀವ್ರ ಪ್ರತಿಭಟನೆ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?