https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಹಣ ಕೊಡಲಿಲ್ಲ ಎಂದು ಮಂಗಳಮುಖಿಯೊಬ್ಬರು ಯುವತಿ ಮುಖಕ್ಕೆ ಗುಟ್ಕಾದಿಂದ ಉಗಿದಿರುವ ಘಟನೆ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಹಣ ಕೊಡು ಎಂದು ಯುವತಿಗೆ ಆಶೀರ್ವಾದ ಮಾಡಲು ಮಂಗಳಮುಖಿ ಮುಂದೆಬರುತ್ತಾರೆ. ಆಗ ಆಕೆ ಕೊಡುವುದಿಲ್ಲ ಎಂದಿದ್ದಕ್ಕೆ ಮಂಗಳಮುಖಿಯರ ಶಾಪ ನಿನಗೆ ತಟ್ಟುತ್ತೆ ಎನ್ನುತ್ತಾರೆ. ಅದಕ್ಕೆ ಯುವತಿ ಗಾಬರಿಗೊಳ್ಳದೆ ನಿಮ್ಮ ಆಶೀರ್ವಾದ ಸಿಗದಿದ್ದರೆ ಏನಾಗುವುದಿಲ್ಲ ಮುಂದಕ್ಕೆ ಹೋಗಿ ಎನ್ನುತ್ತಾಳೆ.
ಆ ಯುವತಿ ಕ್ಯಾಮೆರಾವನ್ನು ಎಸ್ಕಲೇಟರ್ ಬಳಿ ಇರಿಸಿ ವಿಷಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ, ಮಂಗಳಮುಖಿ ಆಕೆಯ ಮೇಲೆ ಗುಟ್ಕಾ ಉಗುಳುತ್ತಾಳೆ.
https://www.newsics.com/2026/02/05/student-molested-by-classmates/