Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಐಷಾರಾಮಿ ಜೀವನ, ಉದ್ಯಮ ನಷ್ಟದಿಂದ ಆಘಾತಗೊಂಡಿದ್ರಾ ಸಿಜೆ ರಾಯ್?
ಕರ್ನಾಟಕದೇಶಪ್ರಮುಖ

ಐಷಾರಾಮಿ ಜೀವನ, ಉದ್ಯಮ ನಷ್ಟದಿಂದ ಆಘಾತಗೊಂಡಿದ್ರಾ ಸಿಜೆ ರಾಯ್?

Share
2 Min Read
SHARE

https://youtube.com/shorts/2Z4I0oFUbOQ?si=GQh11tLqq7tz2UFd

Subscribe ನ್ಯೂಸಿಕ್ಸ್ ಕನ್ನಡ

newsics.com

ಐಷಾರಾಮಿ ಜೀವನಶೈಲಿ, ದುಬಾರಿ ವಾಹನಗಳು ಮತ್ತು ಭವ್ಯ ಬದುಕಿನ ಕಾರಣಕ್ಕೆ ಸಿಜೆ ರಾಯ್ ಅವರನ್ನು ಹಲವರು ‘ಎರಡನೇ ವಿಜಯ್ ಮಲ್ಯ’ ಎಂದೇ ಕರೆಯುತ್ತಿದ್ದರು. ಆದ್ರೆ, ಕಳೆದ ಆರು ತಿಂಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇದ್ದರು ಎಂಬುದು ಇದೀಗ ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಸಿಜೆ ರಾಯ್ ತಮ್ಮ ವ್ಯವಹಾರಕ್ಕಾಗಿ ಯಾವುದೇ ಬ್ಯಾಂಕ್ ಸಾಲ ಪಡೆದಿರಲಿಲ್ಲ. ಕರ್ನಾಟಕ, ಕೇರಳ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅವರ ವ್ಯವಹಾರ ವಿಸ್ತಾರಗೊಂಡಿತ್ತು. ಆದರೆ ಹೊಸ ಪ್ರಾಜೆಕ್ಟ್‌ಗಳಿಗೆ ಬ್ಯಾಂಕ್ ಹಣದ ಬದಲು ಕೆಲವು ರಾಜಕಾರಣಿಗಳಿಂದಲೇ ಹೂಡಿಕೆ ಬಂದಿತ್ತು. ಆ ಹಣದಲ್ಲಿ ಬಹುಪಾಲು ಅಕ್ರಮ ಹಣ (ಬ್ಲ್ಯಾಕ್ ಮನಿ) ಆಗಿರಬಹುದೆಂಬ ಅನುಮಾನವೂ ತನಿಖಾ ಸಂಸ್ಥೆಗಳಿಗೆ ಮೂಡಿತ್ತು ಎನ್ನಲಾಗಿದೆ.
ಆದರೆ ರಾಯ್ ಕೈಗೊಂಡ ಹೊಸ ಯೋಜನೆಗಳು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಇತ್ತ ಬಂದ ಆದಾಯದ ದೊಡ್ಡ ಭಾಗವನ್ನು ಅವರು ಐಷಾರಾಮಿ ಜೀವನಶೈಲಿಗೆ ಖರ್ಚು ಮಾಡುತ್ತಿದ್ದರು. ಪರಿಣಾಮವಾಗಿ ಹಣಕಾಸು ನಿರ್ವಹಣೆಯಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ರಾಜಕಾರಣಿಗಳಿಂದ ಹಣ ವಾಪಸ್ ಒತ್ತಡ, ಏಜೆನ್ಸಿಗಳ ತನಿಖೆಯಿಂದ ಕುಗ್ಗಿದ್ದ ಉದ್ಯಮಿ?
ಪ್ರಾಜೆಕ್ಟ್‌ಗಳು ನಷ್ಟಕ್ಕೆ ತಿರುಗುತ್ತಿದ್ದಂತೆಯೇ, ಹೂಡಿಕೆ ಮಾಡಿದ ಕೆಲ ರಾಜಕಾರಣಿಗಳು ಹಣ ವಾಪಸ್ ಕೇಳತೊಡಗಿದ್ದರು. ಇದರ ನಡುವೆ ಕೇಂದ್ರ ತನಿಖಾ ಸಂಸ್ಥೆಗಳು ಸಿಜೆರಾಯ್ ಅವರ ವ್ಯವಹಾರಗಳತ್ತ ಗಮನಹರಿಸಿದ್ದವು. ಬ್ಯಾಂಕ್ ಸಾಲವಿಲ್ಲದೆ ಇಷ್ಟು ದೊಡ್ಡ ಮಟ್ಟದ ವ್ಯವಹಾರಕ್ಕೆ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆಯೇ ತನಿಖೆಯ ಮೂಲವಾಗಿತ್ತು.
ಒಂದೆಡೆ ಹಣ ಹೂಡಿದವರ ಒತ್ತಡ, ಮತ್ತೊಂದೆಡೆ ಆದಾಯ ತೆರಿಗೆ ಹಾಗೂ ಇತರೆ ಏಜೆನ್ಸಿಗಳ ಪ್ರಶ್ನೆಗಳು, ಇವೆಲ್ಲದಕ್ಕೂ ಉತ್ತರ ನೀಡಲು ಸಾಧ್ಯವಾಗದೆ ಸಿಜೆ ರಾಯ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಮಾನಸಿಕ ಒತ್ತಡ ಹಾಗೂ ಖಿನ್ನತೆ
ಆರ್ಥಿಕವಾಗಿ ಸಂಪೂರ್ಣ ಕುಸಿತ ಕಂಡಿದ್ದ ರಾಯ್, ಮಾನಸಿಕವಾಗಿ ಕೂಡ ಕುಗ್ಗಿಹೋಗಿದ್ದರು. ಕಳೆದ ಕೆಲ ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು. ತನಿಖೆಯಿಂದ ತಮ್ಮ ವ್ಯವಹಾರಗಳ ಎಲ್ಲಾ ಅಂಶಗಳು ಬಹಿರಂಗವಾಗುತ್ತವೆ ಎಂಬ ಭಯವೂ ಅವರನ್ನು ಕಾಡತೊಡಗಿತ್ತು. ಈ ಎಲ್ಲಾ ಒತ್ತಡಗಳು ಒಂದೇ ಸಮಯದಲ್ಲಿ ಎದುರಾದ ಪರಿಣಾಮ ಅವರು ಆತ್ಮಹತ್ಯೆಯ ಕಠಿಣ ನಿರ್ಧಾರಕ್ಕೆ ಬಂದಿರಬಹುದೆಂದು ಪೊಲೀಸ್ ಮೂಲಗಳು ಶಂಕಿಸಿವೆ.
ಸದ್ಯ, ಆತ್ಮಹತ್ಯೆ ಹಿಂದಿನ ನಿಖರ ಕಾರಣಗಳನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅರೆಸ್ಟ್

TAGGED:Is CJ Roy shocked by luxurious life and loss?
Share This Article
Facebook Twitter Copy Link Print
Previous Article ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅರೆಸ್ಟ್
Next Article ಕೊನೆಗೂ ಸಿಕ್ತು ಉದ್ಯಮಿ ಸಿಜೆ ರಾಯ್ ಡೆತ್ ನೋಟ್ ; ಸುಸೈಡ್ ನೋಟ್ ನಲ್ಲೇನಿದೆ?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?