Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಶ್ಲೀಲ ವಿಡಿಯೊ ನೋಡಿ ಅಪ್ರಾಪ್ತ ಮಗಳ ಮೇಲೆ ಅತ್ಯಚಾರ ಎಸಗಿದ ಕಾಮುಕ ತಂದೆ
ದೇಶಪ್ರಮುಖ

ಅಶ್ಲೀಲ ವಿಡಿಯೊ ನೋಡಿ ಅಪ್ರಾಪ್ತ ಮಗಳ ಮೇಲೆ ಅತ್ಯಚಾರ ಎಸಗಿದ ಕಾಮುಕ ತಂದೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಕಾಮುಕನೊಬ್ಬ ತನ್ನ ಅಪ್ರಾಪ್ತ ಪುತ್ರಿಯ ಮೇಲೆ 4 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ.

ನಿರಂತರ ದೌರ್ಜನ್ಯದಿಂದ ಬೇಸತ್ತ ಆಕೆ ಮನೆಯಿಂತ ತಪ್ಪಿಸಿಕೊಳ್ಳುವ ಮೂಲಕ ನರಕದಿಂದ ಹೊರ ಬಂದಿದ್ದು, ಆ ಮೂಲಕ ಪ್ರಕರಣ ಹೊರ ಜಗತ್ತಿಗೆ ಗೊತ್ತಾಗಿದೆ.
ಕ್ಯಾನ್ಸರ್‌ ಬಾಧಿತ ಪತ್ನಿ ಕೆಲವು ಸಮಯಗಳಿಂದ ಹಾಸಿಗೆ ಹಿಡಿದಿದ್ದು ಪತಿ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪ್ಲೆಟಾದ ಮನೆಯೊಂದರಿಂದ 19 ವರ್ಷದ ಯುವತಿ ಇದ್ದಕ್ಕಿದ್ಧಂತೆ ನಾಪತ್ತೆಯಾಗುವ ಮೂಲಕ ಪ್ರಕರಣದ ಎಳೆ ಬಿಚ್ಚತೊಡಗಿತು. ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ. ಪ್ರಕರಣ ಕೈಗೆತ್ತಿಕೊಂಡ ಉಪ್ಲೆಟಾ ಠಾಣೆಯ ಪೊಲೀಸರು ಮತ್ತು ರಾಜ್‌ಕೋಟ್‌ ರೂರಲ್‌ ಕ್ರೈಂ ಬ್ರ್ಯಾಂಚ್‌ ಸಿಬ್ಬಂದಿ ತನಿಖೆ ಆರಂಭಿಸಿ ಯುವತಿಯನ್ನು ಪತ್ತೆ ಹಚ್ಚಿದರು. ಪೊಲೀಸರ ಬಳಿ ಯುವತಿ ಘಟನೆಯನ್ನು ಬಿಚ್ಚಿಡುತ್ತಿದ್ದಂತೆ ದೇಶವೇ ನಾಚಿಕೆಯಿಂದ ತಲೆತಗ್ಗಿಸುವ ವಿಚಾರ ಗೊತ್ತಾಗಿದೆ.
ವಿಚಾರಣೆ ವೇಳೆ ಯುವತಿ ತನ್ನ ಮೇಲೆ ತಂದೆಯಿಂದ ಆದ ಕಿರುಕುಳವನ್ನು ತಿಳಿಸಿದ್ದಾಳೆ. ಅಪ್ರಾಪ್ತ ವಯಸ್ಸಿನಿಂದಲೂ ತಂದೆ ದೌರ್ಜನ್ಯ ಎಸಗುತ್ತಿದ್ದ. ತಾಯಿ ಹಾಸಿಗೆ ಹಿಡಿದ ಬಳಿಕ ತನ್ನ ಮೇಲೆ ಕಿರುಕುಳ ಆರಂಭವಾಯಿತು ಎಂದು ವಿವರಿಸಿದ್ದಾಳೆ. ʼʼ3-4 ವರ್ಷಗಳಿಂದ ಆತನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಬಲವಂತಪಡಿಸುತ್ತಿದ್ದʼʼ ಎಂದಿದ್ದಾಳೆ.
ರಾತ್ರಿಯಾದರೆ ಸಾಕು ತಂದೆ ತನ್ನನ್ನು ಹಿಂಸಿಸುತ್ತಿದ್ದ. ಯಾರಲ್ಲಾದರೂ ಈ ವಿಚಾರ ಬಾಯ್ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಬೆದರಿಕೆ ಹಾಕಿದ್ದ. ಪೋರ್ನ್‌ ವಿಡಿಯೊ ಹಾಕಿ ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಲ್ಲದೆ ತಾನು ಕಿರಿಚಿದರೆ ಕೇಳಬಾರದೆಂದು ಟಿವಿಯ ವ್ಯಾಲ್ಯೂಮ್‌ ದೊಡ್ಡದಾಗಿ ಇಡುತ್ತಿದ್ದ ಎಂದು ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಹೀಗೆ ಇತರರಿಗೆ ಗೊತ್ತಾಗದೆ ವರ್ಷಗಳ ಕಾಲ ಈ ರೀತಿ ಕಿರುಕುಳ ಮುಂದುವರಿಯಿತು ಎಂದು ಆಕೆ ಹೇಳಿದ್ದಾಗಿ ವರದಿಯೊಂದು ತಿಳಿಸಿದೆ.
ಸಂತ್ರಸ್ತೆಯ ದೂರಿನ ನಂತರ ಆಕೆಯ ತಂದೆಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆತನ ರೂಮ್‌ನಿಂದ ಹಲವು ಅನುಮಾನಾಸ್ಪದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಆತ ತನ್ನ ಸೋದರ ಸೊಸೆಯ ಮೇಲೂ ಹಲವು ವರ್ಷಗಳ ಹಿಂದೆ ಅತ್ಯಾಚಾರ ಎಸಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಆ ಸಂತ್ರಸ್ತೆಯನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದು, ಹೇಳಿಕೆಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯ ಪತ್ನಿ 4ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ವಿಚಾರ ತಿಳಿದು ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.

ತಾಯಿಯ ಹೆಣ ಹೊತ್ತು, ಅಂತ್ಯಸಂಸ್ಕಾರ ಮಾಡಿದ ಹೆಣ್ಣು ಮಕ್ಕಳು; ವೈರಲ್ ವಿಡಿಯೋ ನೋಡಿ

TAGGED:Lustful father sexually assaults minor daughter after watching pornographic video
Share This Article
Facebook Twitter Copy Link Print
Previous Article ತಾಯಿಯ ಹೆಣ ಹೊತ್ತು, ಅಂತ್ಯಸಂಸ್ಕಾರ ಮಾಡಿದ ಹೆಣ್ಣು ಮಕ್ಕಳು; ವೈರಲ್ ವಿಡಿಯೋ ನೋಡಿ
Next Article ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?