https://youtube.com/shorts/Dd-eFU1bWK0?si=L5Re8M3Rwsyjy227
Subscribe ನ್ಯೂಸಿಕ್ಸ್ ಕನ್ನಡ
newsics.com
ಮದುವೆಯಾಗಿ 20 ವರ್ಷಗಳ ನಂತರ, ಯೆಮನ್‌ನ ಮಹಿಳೆಯೊಬ್ಬಳು ತನ್ನ ಸ್ನೇಹಿತೆ ನೀಡಿದ್ದ ಬೆಳ್ಳಿಯ ಸೊಂಟದ ಪಟ್ಟಿಯನ್ನು ಮಾರಲು ಹೋದಾಗ ಆಘಾತಕಾರಿ ಸತ್ಯವೊಂದು ಬಯಲಾಗಿದೆ.
ತನ್ನ ಆತ್ಮೀಯ ಸ್ನೇಹಿತೆಯೊಬ್ಬಳು ತನ್ನ ಮದುವೆಯ ಸಮಯದಲ್ಲಿ ನೀಡಿದ್ದ ಉಡುಗೊರೆಯಾದ ಬೆಳ್ಳಿಯ ಸೊಂಟದ ಪಟ್ಟಿಯನ್ನು ಮಾರುವುದಕ್ಕೆಂದು ಅಂಗಡಿಗೆ ತೆಗೆದುಕೊಂಡು ಹೋದಾಗ ಅಲ್ಲಿ ಭಯಾನಕ ವಿಚಾರ ಬೆಳಕಿಗೆ ಬಂದಿದೆ. ಆ ಬೆಳ್ಳಿಯ ಸೊಂಟದ ಪಟ್ಟಿಯ ಒಳಗೆ ಮಾಟ ಮಂತ್ರಕ್ಕೆ ಸಂಬಂಧಿಸಿದ ವಸ್ತು ಇರುವುದು ಕಂಡು ಬಂದಿತ್ತು.
ಬರೀ ಅಷ್ಟೇ ಅಲ್ಲ ಅದು ಆಕೆ ಗರ್ಭಿಣಿ ಆಗುವುದಕ್ಕೆ ಅಡ್ಡಿಯಾಗಿತ್ತು. ಅಂದರೆ ಅದು ಬಂಜೆತನಕ್ಕೆ ಕಾರಣವಾಗಿತ್ತು. ಇದೀಗ ಈ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಆ ಬೆಳ್ಳಿಯ ಸೊಂಟದ ಬೆಲ್ಟ್ ಅನ್ನು ಕತ್ತರಿಸಿದ ಅಂಗಡಿಯವರಿಗೆ ಅದರ ಒಳಗೆ ಪ್ಲಾಸ್ಟಿಕ್ಒಳಗೆ ದಾರದಿಂದ ಸುತ್ತಿದ್ದ ಸಣ್ಣ ವಸ್ತುವೊಂದು ಪತ್ತೆಯಾಗಿದ್ದು, ಅವರು ಅದನ್ನು ತೆಗೆಯುವುದನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಅನೇಕರು ಆತ್ಮೀಯ ಗೆಳತಿಯೇ ಹೀಗೆ ಮಾಡಿರುವುದಕ್ಕೆ ಅಚ್ಚರಿ ಪಟ್ಟಿದ್ದಾರೆ.
https://www.instagram.com/reel/DUC-oRxksYj/?igsh=MTIwNWV2bTdkbXFiZQ==