https://youtube.com/shorts/2dkIPQOWaBI?si=dqOOJ07vyMmlj6jT
Subscribe ನ್ಯೂಸಿಕ್ಸ್ ಕನ್ನಡ
newsics.com
ಪತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಪತ್ನಿಯೊಬ್ಬಳು ಹಣಕ್ಕೆ ಬೇಡಿಕೆಯಿಟ್ಟ ಘಟನೆ ಚೀನಾದಲ್ಲಿ ನಡೆದಿದೆ. ತನ್ನ ಪತ್ನಿ ಮೊದಲ ರಾತ್ರಿಯಿಂದಲೇ ತನ್ನ ಜೊತೆ ದೈಹಿಕ ಸಂಬಂಧ ಬೆಳೆಸುವುದಕ್ಕೆ ಹಣ ಕೇಳಿದ ನಂತರ ತಾನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಗಿ ಹೇಳಿದ್ದಾರೆ.
ಅಲ್ಲಿನ ಮಾಧ್ಯಮವಾದ ಸೌತ್ ಚೀನಾ ಪೋಸ್ಟ್ ವರದಿ ಪ್ರಕಾರ, ಈ ದಂಪತಿಯನ್ನು ಹಾವೋ ಹಾಗೂ ಕ್ಸುವಾನ್ ಎಂದು ಗುರುತಿಸಲಾಗಿದೆ.
2014ರಲ್ಲೇ ಇವರ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರತಿಯೊಂದಕ್ಕೂ ಹಣ ಕೇಳುವ ಪತ್ನಿ ಕ್ಸುವಾನ್ ವಿರುದ್ಧ 2021ರಲ್ಲಿ ಪತಿ ಹಾವೋ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪ್ರತಿ ಬಾರಿಯೂ ದೈಹಿಕ ಸಂಬಂಧ ಬೆಳೆಸುವುದಕ್ಕೆ ಪತ್ನಿ 15 ಯುಎಸ್ ಡಾಲರ್ ಮೊತ್ತಕ್ಕೆ ಅಂದರೆ ಸುಮಾರು 1200 ರೂಪಾಯಿಗೆ ಪತ್ನಿ ಬೇಡಿಕೆ ಇಡುತ್ತಿದ್ದಾಳೆ. ಕೆಲವೊಮ್ಮೆ ಮಾತನಾಡುವುದಕ್ಕೂ ಆಕೆ ಹಣ ಕೇಳುತ್ತಾಳೆ ಎಂದು ಗಂಡ ಆರೋಪ ಮಾಡಿದ್ದಾನೆ.
ಆದರೆ ನಂತರದಲ್ಲಿ ಕ್ಸುವಾನ್ ತಾನು ತನ್ನ ಸಂಸಾರ ಸರಿಯಾಗಿ ಸಾಗುವುದಕ್ಕೆ ಕೆಲಸ ಮಾಡುವುದಾಗಿ ಭರವಸೆ ನೀಡಿದ ನಂತರ ಹಾವೋ ಆಕೆಯ ಹೆಸರಿನಲ್ಲಿ ಆಸ್ತಿಯನ್ನು ಕೂಡ ನೋಂದಣಿ ಮಾಡಿಸಿದ್ದರು. ಆದರೆ ದಂಪತಿಯ ಸಂಬಂಧ ಡ ಹಳಸುತ್ತಲೇ ಹೋಯಿತು. ಹೀಗಾಗಿ ಗಂಡ ಹಾವೋ ಈ ವರ್ಷ ಮತ್ತೆ ತನ್ನ ಪತ್ನಿ ವಿರುದ್ಧ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕಳೆದೆರಡು ವರ್ಷಗಳಿಂದ ತಮ್ಮ ನಡುವೆ ಮಾತುಕತೆಯೇ ಇಲ್ಲ ಎಂದು ಹೇಳಿದ್ದಾರೆ.
ಅಗತ್ಯ ಇದ್ದಾಗ ಮೆಸೇಜಿಂಗ್ ಅಪ್ ಮೂಲಕ ಅಷ್ಟೇ ಮಾತುಕತೆ ನಡೆಸುತ್ತಿದ್ದೇವೆ ಎಂದು ಪತಿ ಹಾವೋ ಹೇಳಿದ್ದಾರೆ. ಅಲ್ಲದೇ ತನ್ನ ಪತ್ನಿ ಆಕೆಯ ಸಂಬಂಧಿಕರ ಬಳಿ ತಾನು ಬಹಳ ದಪ್ಪ ಇದ್ದೇನೆ ಹಾಗೂ ಅಸಮರ್ಥ ಎಂದು ಹೇಳಿದ್ದಾಗಿ ಅ ವ್ಯಕ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
https://www.newsics.com/2026/01/27/a-young-woman-like-a-flower-arrow-that-entered-sandalwood/