https://youtube.com/shorts/2dkIPQOWaBI?si=MeR3x4Ryq65sNwNz
Subscribe ನ್ಯೂಸಿಕ್ಸ್ ಕನ್ನಡ
newsics.com
ಸೋಶಿಯಲ್ ಮೀಡಿಯಾವೇ ಹಾಗೆ, ಜನಸಾಮಾನ್ಯರನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಮಾಡಿ ಬಿಡುತ್ತದೆ. ಇಂತಹವರ ಸಾಲಿಗೆ ಬಿರುಗಾಳಿ ಸಿನಿಮಾದ ಹೂವಿನ ಬಾಣದಂತೆ ಹಾಡು ಹಾಡಿದ ಈ ಯುವತಿಯೂ ಸೇರಿಕೊಂಡಿದ್ದಾಳೆ.
ಅಪಶ್ರುತಿಯಲ್ಲಿ ಹಾಡಿ ವೈರಲ್ ಆದ ಮೈಸೂರಿನ ನಿತ್ಯಶ್ರೀ, ಇದೀಗ ಟ್ರೋಲ್‌ಗಳ ನಡುವೆಯೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅವಕಾಶ ಪಡೆದ ನಂತರ ಟೀಕೆ ಹೆಚ್ಚಾಗಿದ್ದರೂ ಈಗ ಬೆಳ್ಳಿಪರದೆಯ ಮೇಲೆ ಮಿಂಚುವ ಅವಕಾಶ ಪಡೆದುಕೊಂಡಿದ್ದಾರೆ.
ಈ ಕುರಿತು ಖುದ್ದು ನಿತ್ಯಶ್ರೀ ಮಾತನಾಡಿದ್ದಾರೆ. ಯಾವ ಸಿನಿಮಾ ಎಂದು ರಿವೀಲ್ ಮಾಡಲು ಅವರು ಒಪ್ಪಲಿಲ್ಲ. ಅದರಲ್ಲಿ ಯಾವ ರೋಲ್ ಎಂದು ಕೇಳಿದರೂ, ಇನ್ನೂ ಅದರ ಬಗ್ಗೆ ಹೇಳಲಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಸತ್ಯ ನಿತ್ಯಶ್ರೀ ಅವರನ್ನೂ ಸೀಕ್ರೆಟ್ ಆಗಿ ಇಟ್ಟಿದ್ದಾರೆ. ಒಟ್ಟಿನಲ್ಲಿ ಅವರಿಗೆ ಈಗ ಬೆಳ್ಳಿಪರದೆಯಲ್ಲಿ ಅವಕಾಶ ಸಿಕ್ಕಿರುವುದು ನಿಜ ಎಂದು ಹೇಳಿದ್ದಾರೆ. ಅಷ್ಟಕ್ಕೂ. ಯಾವಾಗ ನಿತ್ಯಶ್ರೀ ಅವರ ಡಿಮಾಂಡ್ ಹೆಚ್ಚಾಯ್ತೋ ಅದೇ ಜನರು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ಕೆಟ್ಟಕೆಟ್ಟದ್ದಾಗಿ ಈಕೆಗೆ ಚುಚ್ಚು ಮಾತುಗಳನ್ನಾಡುತ್ತಿದ್ದಾರೆ. ಆದರೆ, ಇಂಥ ವೈರಲ್ ಆದವರಿಗೆ ಸಹಜವಾಗಿ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಅವಕಾಶ ಸಿಗುವುದು ಉಂಟು. ಅದರಂತೆಯೇ ಇದೀಗ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಷೋನಲ್ಲಿ ನಿತ್ಯಶ್ರೀ ಅವರಿಗೆ ಅವಕಾಶ ಸಿಕ್ಕಿದ್ದೇ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.