https://youtube.com/shorts/gtZudXyWr4w?si=1q6WWkLE-FRTUNCd
Subscribe ನ್ಯೂಸಿಕ್ಸ್ ಕನ್ನಡ
newsics.com
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಸತೀಶ್ ಮೂರನೇ ವಾರದ ಮಧ್ಯದಲ್ಲೇ ಹೊರ ಹೋದರು. ಅವರಿಗೆ ಸರ್ವೈವ್ ಆಗಲು ಸಾಧ್ಯವಾಗಿರಲಿಲ್ಲ. ಹೊರಗೆ ಅವರು ಸುದ್ದಿ ಆಗುತ್ತಿದ್ದಾರೆ. ವಿವಿಧ ರೀತಿಯ ಸಂದರ್ಶನ ನೀಡುತ್ತಿದ್ದಾರೆ.ಇದೀಗ ನಟ ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಸಮರ್ಥನೆ ಮಾಡುವ ಭರದಲ್ಲಿ ಧರ್ಮಸ್ಥಳ ಭಕ್ತರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಹೇಳಿಕೆ ನೀಡಿದ ಡಾಗ್ ಸತೀಶ್ ಈ ಬಾರಿ ಎಲ್ಲಾ ಲಿಮಿಟ್ ಮೀರಿ ಮಾತನಾಡಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಯಾರು, ಯಾವ ದಿನ ಬೇಕಾದರು ಮಾಂಸಾಹಾರ ತಿನ್ನಬಹುದು. ನಾನು ವರ್ಷದ 365 ದಿನ ನಾನ್ ವೆಜ್ ತಿನ್ನುತ್ತೇನೆ. ಸೋಮವಾರನೂ ತಿನ್ನುತ್ತೇನೆ, ಇತರ ದಿನವೂ ತಿನ್ನುತ್ತೇನೆ.
ನಾನು ಕಾಲೇಜು ದಿನಗಳಲ್ಲಿರುವಾಗ ಗೆಳೆಯರ ಒತ್ತಾಯಕ್ಕೆ ಧರ್ಮಸ್ಥಳಕ್ಕೆ ತೆರಳಿದ್ದೆ. ನಾನು ದೇವರು ದಿಂಡ್ರೂ ನಂಬೋದಿಲ್ಲ. ಆದರೆ ಗೆಳೆಯರ ಜೊತೆಗೆ ಧರ್ಮಸ್ಥಳಕ್ಕೆ ಹೋದಾಗ, ಧರ್ಮಸ್ಥಳದ ಪಾರ್ಕ್‌ನಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ ಎಂದಿದ್ದಾರೆ.