https://youtube.com/shorts/gtZudXyWr4w?si=yALU4qtCj-qMgSWl
Subscribe ನ್ಯೂಸಿಕ್ಸ್ ಕನ್ನಡ
newsics.com
ಇಂದೋರ್ : ಪತ್ನಿ ಜೊತೆ ದೈಹಿಕ ಸಂಪರ್ಕ ಇಲ್ಲದೆ ಸಮಯದಲ್ಲಿ ಗರ್ಭಿಣಿಯಾಗಿದ್ದು ಹೇಗೆ ಎಂದು ಯೋಧ ಹೈಕೋರ್ಟ್ ಮೊರೆ ಹೋಗಿದ್ದ. ಮೋಸ ಮಾಡಿರುವ ಪತ್ನಿಯಿಂದ ವಿಚ್ಚೇದನ ನೀಡಬೇಕು ಎಂದು ಕೋರಿದ್ದ. ಮನವಿ ಪುರಸ್ಕರಿಸಿದ ಹೈಕೋರ್ಟ್, ಮಗುವಿನ ಡಿಎನ್ಎ ಟೆಸ್ಟ್ಗೆ ಆದೇಶ ನೀಡಿದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಭಾರತೀಯ ಯೋಧ ಮದುವೆಯಾದ ಬಳಿಕ ಕೆಲ ದಿನಗಳ ಕಾಲ ಪತ್ನಿ ಜೊತೆಗಿದ್ದು ಕರ್ತವ್ಯಕ್ಕೆ ಮರಳಿದ್ದರು. 6 ತಿಂಗಳಿಗೆ ಒಮ್ಮೆ ರಜೆ ಮೇಲೆ ಊರಿಗೆ ಬರುತ್ತಿದ್ದ. ಆದರೆ ಮತ್ತೊಮ್ಮೆ 8 ತಿಂಗಳ ಬಿಟ್ಟು ರಜೆ ಮೇಲೆ ಬಂದಾಗ ಪತ್ನಿ ಮೂರು ತಿಂಗಳ ಗರ್ಭಿಣಿ ಎಂದು ಗುಡ್ ನ್ಯೂಸ್ ಹೇಳಿದ್ದಾರೆ. ಕಳೆದ 8 ತಿಂಗಳಿನಿಂದ ಮನೆಗೆ ಮರಳಿಲ್ಲ. ಪತ್ನಿ ಜೊತೆ ಕಳೆದಿಲ್ಲ, ದೈಹಿಕ ಸಂಪರ್ಕ ನಡೆಸಿಲ್ಲ. ಹೀಗಾಗಿ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದು ಹೇಗೆ? 8 ತಿಂಗಳ ಹಿಂದೆ ಬಂದ ಸಂದರ್ಭದಲ್ಲೇ ಪತ್ನಿ ಗರ್ಭಿಣಿಯಾಗಿದ್ದರೆ, 7 ರಿಂದ ತಿಂಗಳ ಗರ್ಭಿಣಿಯಾಗಬೇಕಿತ್ತು. ಪತ್ನಿ ಮೋಸ ಮಾಡಿದ್ದಾಳೆ ಎಂದು ಯೋಧ ಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ನಲ್ಲಿ ಯೋಧ ಹಲವು ಮನವಿ ಮಾಡಿದ್ದಾನೆ. ಪತ್ನಿ ತನಗೆ ಮೋಸ ಮಾಡಿದ್ದಾಳೆ. 2015ರಲ್ಲಿ ಪತ್ನಿ ಮಗುವಿಗೆ ಜನ್ಮ ನೀಡಿದ್ದಾಳೆ . ಪತ್ನಿ, ಮಗುವಿಗೆ ಜೀವನಾಂಶ ನೀಡಲು ಅದು ತನ್ನದೇ ಮಗು ಎಂದು ಸಾಬೀತಾಗಬೇಕು. ನನ್ನ ಮಗುವಾಗಿದ್ದರೆ ಸಂಪೂರ್ಣ ಜವಾಬ್ದಾರಿ ನಿರ್ವಹಿಸಲು ನಾನು ಸಿದ್ದ ಎಂದು ಯೋಧ ಕೋರ್ಟ್ನಲ್ಲಿ ಹೇಳಿದ್ದಾನೆ.
ಇತ್ತ ಪತ್ನಿ ಡಿಎನ್ಎ ಪರೀಕ್ಷೆ ವಿರೋಧಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮಗು ದೊಡ್ಡದಾಗುತ್ತಿದೆ. ಡಿಎನ್ಎ ಪರೀಕ್ಷೆಯಿಂದ ಮಗುವಿನ ಖಾಸಗೀತನಕ್ಕೆ ಧಕ್ಕೆಯಾಗಲಿದೆ. ಮಗುವಿನ ಸ್ವಾತಂತ್ರ್ಯ, ಖಾಸಗೀತನದ ಉಲ್ಲಂಘನೆ ಕಾನೂನು ವಿರೋಧಿ ನಡೆ ಎಂದು ಪತ್ನಿ ವಾದಿಸಿದ್ದರು. ಆದರೆ ಹೈಕೋರ್ಟ್ ಯೋಧನ ಪತ್ನಿ ವಾದ ತಳ್ಳಿಹಾಕಿದೆ.
ಪತಿ ಜವಾಬ್ದಾರಿಗಳಿಂದ ಓಡಿ ಹೋಗುತ್ತಿಲ್ಲ, ಮಗುವಿನ ತಂದೆ ಯಾರು, ಅದರ ಹೊಣೆ ಯಾರಿಗೆ ಅನ್ನೋ ವಿಚಾರದಲ್ಲಿ ಸ್ಪಷ್ಟತೆ ಕೇಳುತ್ತಿದ್ದಾರೆ.ಹೀಗಾಗಿ ಮಗುವಿನ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಅನ್ನೋದಕ್ಕೆ ಡಿಎನ್ಎ ಟೆಸ್ಟ್ಗೆ ಹೈಕೋರ್ಟ್ ಆದೇಶ ನೀಡಿದೆ.
https://www.newsics.com/2026/01/27/entry-of-non-hindus-banned-in-badrinath-and-kedarnath-temples/