https://youtube.com/shorts/gtZudXyWr4w?si=8bW9RxsfgtOl_H3U
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಮದುವೆಯಾದ ಎರಡೇ ವರ್ಷದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಡಿಯೂರಿನಲ್ಲಿ ನಡೆದಿದೆ.
ಕೀರ್ತಿ ಶ್ರೀ (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೀರ್ತಿ, 2023ರ ನವೆಂಬರ್‌ನಲ್ಲಿ ಗುರುಪ್ರಸಾದ್ ಎಂಬುವರನ್ನು ಮದುವೆಯಾಗಿದ್ದರು.
2023ರಲ್ಲಿ ಗುರುಪ್ರಸಾದ್ ಹಾಗೂ ಮೃತ ಕೀರ್ತಿ ಶ್ರೀ ಮದುವೆಯಾಗಿದ್ದರು.ಸುಮಾರು 35 ಲಕ್ಷವನ್ನು ಖರ್ಚು ಮಾಡಿ 400 ಗ್ರಾಂ ಚಿನ್ನ ಹಾಗೂ 5 ಲಕ್ಷ ಹಣವನ್ನು ನಗದಾಗಿ ನೀಡಿ ಮದುವೆಯನ್ನು ಮಾಡಿ ಕೊಟ್ಟಿದ್ದರು. ಆದರೆ ಇಷ್ಟಾದರೂ ಮೃತ ಕೀರ್ತಿ ಶ್ರೀ ಗಂಡ ಗುರುಪ್ರಸಾದ್ ಹಾಗೂ ಆತನ ಮನೆಯವರು ಹಣಕ್ಕಾಗಿ ನಿತ್ಯ ಕಿರುಕುಳವನ್ನು ನೀಡುತ್ತಿದ್ದ. ಹೀಗಾಗಿ ಅವರೇ ಕೊಲೆ ಮಾಡಿದ್ದಾರೆ ಎಂದು ಕೀರ್ತಿಶ್ರೀ ತಂದೆ ಆರೋಪ ಮಾಡಿದ್ದಾರೆ.
ಈ ಸಂಬಂಧ ಕೀರ್ತಿ ಕುಟುಂಬಸ್ಥರು ನೀಡಿದ ದೂರನ್ನು ಬನಶಂಕರಿ ಠಾಣೆ ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.