https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಬಗ್ಗೆ ಖುದ್ದು ನಟ ಡಾಲಿ ಧನಂಜಯ್ ಅವರು ‘ಉದಯ ಕನ್ನಡಿಗ 2025’ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಧನಂಜಯ್ ಅವರು ಉದಯ ಕನ್ನಡಿಗ 2025 ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ತಾವು ತಂದೆ ಆಗುತ್ತಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸ್ಟೇಜ್ ಮೇಲೆ ಆಗಮಿಸಿದ್ದ ಡಾಲಿ ಧನಂಜಯ್ ಅವರು ಒಂದು ಗುಲಾಬಿ ಹೆಂಡತಿಗೆ, ಮತ್ತೊಂದು ನನ್ನ ಅಪ್ಪ ಅಂತ ಕರಿಯೋಕೆ ಬರುತ್ತಿರುವ ಮಗುಗೆ ಎಂದು ಹೇಳೋ ಮೂಲಕ ತಾವು ಪೋಷಕರು ಆಗುತ್ತಿರುವ ಸಿಹಿಸುದ್ದಿ ಹೇಳಿದ್ದಾರೆ.
2025ರ ಫೆಬ್ರುವರಿ 16ರಂದ ನಟ ಡಾಲಿ ಧನಂಜಯ್ ಅವರು ವೈದ್ಯೆ ಡಾ. ಧನ್ಯತಾ ಅವರೊಂದಿಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.
https://www.instagram.com/reel/DT1ybzYEhfQ/?igsh=ZXZob2Y5OTQzNm80
ರಜೆ ಹಾಕಿದ ಯುವತಿಗೆ ಬಟ್ಟೆ ಬಿಚ್ಚಿ ಹೊಡಿತೀನೆಂದ ಮಾಲೀಕ; ಆರೋಪಿ ಅರೆಸ್ಟ್