Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಲಬುರಗಿ: ಅತ್ತೆ ಮಗನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ ಮದುವೆಯಾದ ಎರಡೇ ತಿಂಗಳಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರದ ಸಿದ್ದೇಸ್ವರ ಕಾಲೋನಿಯಲ್ಲಿ ನಡೆದಿದೆ.
ಅನಸೂಯ ಅತ್ತೆ ಮಗನನ್ನು ಪ್ರೀತಿಸಿ ವಿವಾಹವಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಸಂಬಂಧಿಕರ ಸಮ್ಮುದಲ್ಲಿ ಮದುವೆಯಾಗಿತ್ತು. ಹಳ್ಳಿಯಲ್ಲಿ ವಾಸವಾಗುತ್ತಿರುವುದಕ್ಕೆ ಅನಸೂಯ ಬೇಸರಗೊಂಡಿದ್ದಳು. ಅನುಸೂಯ ಸಹೋದರಿಯರು ಬೆಂಗಳೂರು ಹಾಗೂ ಮುಂಬೈನಲ್ಲಿ ವಾಸವಾಗಿದ್ದರು. ತಾನು ಮದುವೆ ಬಳಿಕ ಕಲಬುರಗಿಯಂತಹ ಹಳ್ಳಿಗೆ ಬಂದು ನೆಲೆಸಿದ್ದು ಆಕೆಯನ್ನು ಘಾಸಿಗೊಳಿಸಿತ್ತು. ಮದುವೆ ಬಳಿಕ ಹಳ್ಳಿಯಲ್ಲಿರಲು ಬೇಸರ ವ್ಯಕ್ತಪಡಿಸಿದ್ದಳು.
ಹಲವು ಬಾರಿ ಈ ಬಗ್ಗೆ ಮನೆಯಲ್ಲಿಯೂ ಹೇಳಿದ್ದಳು. ಇದೇ ವಿಚಾರವಾಗಿ ತೀವ್ರವಾಗಿ ಮನನೊಂದಿದ್ದ ಅನಸೂಯ ದುಡುಕಿನ ನಿರ್ಧಾರ ಕೈಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
https://www.newsics.com/2026/01/23/high-court-gives-green-signal-to-bike-taxis-again-in-the-state/