Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಒಂಟಿ ಒಂಟಿಯಾಗಿರುವುದು ಬೋರ್ ಅಷ್ಟೇ ಅಲ್ಲ, ಭಾರೀ ಡೇಂಜರು: ಅಧ್ಯಯನ ವರದಿ
ಲೈಫ್‌ಸ್ಟೈಲ್ಆರೋಗ್ಯಪ್ರಮುಖ

ಒಂಟಿ ಒಂಟಿಯಾಗಿರುವುದು ಬೋರ್ ಅಷ್ಟೇ ಅಲ್ಲ, ಭಾರೀ ಡೇಂಜರು: ಅಧ್ಯಯನ ವರದಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಒಂಟಿತನವೆಂಬುದು ಮನುಷ್ಯನ ಜೀವನದಲ್ಲಿ ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಕೆಲವರು ಒಂಟಿತನವನ್ನೇ ಜೀವಮಾನದುದ್ದಕ್ಕೂ ಆಯ್ಕೆಮಾಡಿಕೊಂಡರೆ ಇನ್ನು ಕೆಲವರು ಪತಿಯಿಂದ ದೂರವಾಗಿ, ಸಂಗಾತಿಯನ್ನು ಕಳೆದುಕೊಂಡು ಒಂಟಿತನದ ಬದುಕು ಒಳ್ಳೆಯದು ಎಂದು ಆಯ್ಕೆಮಾಡಿಕೊಂಡಿರುತ್ತಾರೆ. ಆದರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಅಮೆರಿಕನ್ ಲೈಫ್‌ನ ಸರ್ವೆ ಸೆಂಟರ್‌ನ 2023ರ ಸಮೀಕ್ಷೆಯ ಪ್ರಕಾರ, ಜೆನ್ ಝಿ (Gen Z) (1997 ಮತ್ತು 2012ರ ನಡುವೆ ಜನಿಸಿದವರು) ಹದಿಹರೆಯದಲ್ಲಿ ತಾವು ಸಂಬಂಧದಲ್ಲಿದ್ದೆವು ಎಂದು ವರದಿ ಮಾಡಿರುವ ಸಂಖ್ಯೆಯು ಜೆನ್ ಎಕ್ಸ್ (Gen X)ಗಿಂತ ಶೇ. 20 ರಷ್ಟು ಮತ್ತು ಬೇಬಿ ಬೂಮರ್ಸ್ ಗಿಂತ ಶೇ. 22 ರಷ್ಟು ಕಡಿಮೆಯಿದೆ.

ಅಮೆರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಬಾಯ್ಸ್ ಅಂಡ್ ಮೆನ್ ನಡೆಸಿದ 2025ರ ಅಧ್ಯಯನದ ಪ್ರಕಾರ, ಶೇ. 40ಕ್ಕಿಂತ ಹೆಚ್ಚು ಜೆನ್ ಝಿ ಪುರುಷರು ಕಳೆದ ವರ್ಷ ತಮಗೆ ಹದಿಹರೆಯದಲ್ಲಿ ಯಾವುದೇ ಸಂಬಂಧದ ಅನುಭವವಾಗಿಲ್ಲ ಎಂದು ಹೇಳಿದ್ದಾರೆ.

ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವುದು ಮಧ್ಯಮ ಮಟ್ಟದ ಅಪಾಯವನ್ನು ತಂದೊಡ್ಡುತ್ತದೆ ಎಂಬುದನ್ನು ತೋರಿಸುತ್ತವೆ ಎಂದು ಹಿರಿಯ ಸಂಶೋಧಕರಾದ ಮೈಕೆಲ್ ಕ್ರಾಮರ್ ವಿವರಣೆ ನೀಡಿದ್ದಾರೆ.

ಒಟ್ಟಾರೆಯಾಗಿ, ನಮ್ಮ ಸಂಶೋಧನೆಗಳು ಯುವ ವಯಸ್ಸಿನಲ್ಲಿ ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವುದು ಮಧ್ಯಮ ಮಟ್ಟದ ಅಪಾಯವನ್ನು ತಂದೊಡ್ಡುತ್ತದೆ ಎಂಬುದನ್ನು ತೋರಿಸುತ್ತವೆ” ಎಂದು ಹಿರಿಯ ಸಂಶೋಧಕರಾದ ಮೈಕೆಲ್ ಕ್ರಾಮರ್ ವಿವರಣೆ ನೀಡಿದ್ದಾರೆ.

ಶಿಕ್ಷಣದ ಸಮಸ್ಯೆ: ಸಂಶೋಧಕರು 16 ರಿಂದ 29 ವರ್ಷ ವಯಸ್ಸಿನ ಜನರ ಪ್ರತಿಕ್ರಿಯೆಗಳನ್ನು ಸಂಗ್ರಹ ಮಾಡಿ ವರದಿ ತಯಾರು ಮಾಡಿದ್ದಾರೆ. ಪುರುಷರು, ಉನ್ನತ ಶಿಕ್ಷಣ ಪಡೆದವರು, ಪ್ರಸ್ತುತ ಕಡಿಮೆ ನೆಮ್ಮದಿಯನ್ನು ಹೊಂದಿದ್ದಾರೆ. ಒಬ್ಬಂಟಿಯಾಗಿ ಅಥವಾ ಪೋಷಕರೊಂದಿಗೆ ವಾಸಿಸುವವರು ದೀರ್ಘಕಾಲದವರೆಗೆ ಒಂಟಿಯಾಗಿ ಉಳಿಯುವ ಸಾಧ್ಯತೆ ಹೆಚ್ಚು ಎಂದು ಈ ವರದಿ ಹೇಳಿದೆ.

ಶಿಕ್ಷಣದ ಮೇಲೆ ಹೆಚ್ಚಿನ ಗಮನ ಹರಿಸುವುದು ಮತ್ತು ಸಂಬಂಧಗಳನ್ನು ಮುಂದೂಡುವುದರ ನಡುವಿನ ಸಂಬಂಧದ ಬಗ್ಗೆ ಹಿಂದಿನ ಸಂಶೋಧನೆಗಳನ್ನು ಈ ಫಲಿತಾಂಶಗಳು ಬೆಂಬಲಿಸುತ್ತವೆ ಎಂಬುದನ್ನು ಗಮನಿಸಲಾಗಿದೆ.

ಯುವಜನರಲ್ಲಿ ಮೊದಲ ಸಂಬಂಧದ  ಪ್ರಾಮುಖ್ಯತೆಯನ್ನು ಸಹ ಸಂಶೋಧಕರು ಕಂಡುಕೊಂಡಿದ್ದಾರೆ. ಮೊದಲ ಬಾರಿಗೆ ಸಂಗಾತಿಯನ್ನು ಹೊಂದಿದವರು ಹೆಚ್ಚಿನ ಜೀವನ ತೃಪ್ತಿಯನ್ನು ಹೊಂದಿರುವುದಾಗಿ ಮತ್ತು ಕಡಿಮೆ ಒಂಟಿತನವನ್ನು ಅನುಭವಿಸುತ್ತಾರೆ ಎಂದು ತಿಳಿಸಿದ್ದಾರೆ.

ಒಂಟಿತನದ ಸಮಸ್ಯೆ: ಒಂಟಿತನದಿಂದ ಉಂಟಾಗುವ ನಕಾರಾತ್ಮಕ ಆರೋಗ್ಯ ಪರಿಣಾಮಗಳ ಬಗ್ಗೆ ವ್ಯಾಪಕವಾದ ಸಂಶೋಧನೆ ನಡೆದಿದೆ ಮತ್ತು ಈ ಕುರಿತು ಹಲವು ಆತಂಕಗಳನ್ನು ಪಟ್ಟಿ ಮಾಡಲಾಗಿದೆ.

ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಪ್ರಕಾರ, ಒಂಟಿತನವು ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತನಾಳಗಳು, ರೋಗನಿರೋಧಕ ಶಕ್ತಿ ಮತ್ತು ಹೃದಯದ ಸಮಸ್ಯೆಗಳ ಅಪಾಯವನ್ನು ಉಂಟುಮಾಡುತ್ತದೆ.

ಒಂಟಿತನಕ್ಕೆ ಸಂಬಂಧಿಸಿದ ಇತರ ಆರೋಗ್ಯ ಅಪಾಯಗಳೆಂದರೆ ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆ, ಮಧುಮೇಹ, ಪಾರ್ಶ್ವವಾಯು, ಆತ್ಮಹತ್ಯೆ ಮತ್ತು ಅಕಾಲಿಕ ಮರಣ.

ಒತ್ತಡವು ದೇಹದ ಮೇಲೆ ಬೀರುವ ಪರಿಣಾಮ ನಮಗೆ ತಿಳಿದಿದೆ ಮತ್ತು ಒಂಟಿತನವು ಅತ್ಯಂತ ಹೆಚ್ಚು ಒತ್ತಡವನ್ನು ನೀಡುತ್ತದೆ ಎಂದು ಮನಶ್ಶಾಸ್ತ್ರಜ್ಞ ಡಾ. ಆಡಮ್ ಬೋರ್ಲ್ಯಾಂಡ್ ಕ್ಲಿನಿಕ್‌ಗೆ ತಿಳಿಸಿದ್ದಾರೆ.

 

TAGGED:Being lonely can affect health - study report
Share This Article
Facebook Twitter Copy Link Print
Previous Article ನಿಷೇಧವಿದ್ದರೂ  ಕಾರ್ಮಿಕರನ್ನು ಬಳಸಿ ಅಕ್ರಮವಾಗಿ ಮಲಗುಂಡಿ ಸ್ವಚ್ಛಗೊಳಿಸಿದ ಮನೆ ಮಾಲೀಕರು
Next Article ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಹತ್ಯೆ; ಮೃತದೇಹವನ್ನು ಪೀಸ್ ಮಾಡಿ ಎಸೆದ ದುಷ್ಕರ್ಮಿಗಳು

Popular Posts

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?