Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದೆ. ಫಲಿತಾಂಶ ಸುಧಾರಣೆ ದೃಷ್ಟಿಯಿಂದ ವಿದ್ಯಾರ್ಥಿಗಳ ಸ್ಟಡಿ ಹಾಲಿಡೇಗೆ ಬ್ರೇಕ್ ಹಾಕಿದೆ
ಪಿಯು ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆ ಬಳಿಕ ನೀಡಲಾಗುತ್ತಿದ್ದ ಸ್ಟಡಿ ಹಾಲಿಡೆ ಸ್ಥಗಿತಗೊಳಿಸಲಾಗಿದ್ದು, ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು ಎಂದು ಆದೇಶ ಹೊರಡಿಸಲಾಗಿದೆ. ಪಿಯು ಫಲಿತಾಂಶ ಸುಧಾರಣೆಗೆ ಈ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ.
ಸ್ಟಡಿಮನೆಯಲ್ಲಿ ಪೋಷಕರಂತೆ ಕಾಲೇಜಿನಲ್ಲಿ ಉಪನ್ಯಾಸಕರು ಕೂಡ ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ಅಭ್ಯಾಸ ಮಾಡಿಸಲಿದ್ದಾರಂತೆ. ಕಾಲೇಜುಗಳಲ್ಲೇ ಶಿಕ್ಷಕರ ನೇತೃತ್ವದಲ್ಲಿಯೇ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ ನಡೆಸಬೇಕು ಹಾಗೂ ಕ್ಲಾಸ್ ರೂಮ್ನಲ್ಲಿಯೇ ಒಟ್ಟಿಗೆ ಕುಳಿತು ಓದಬೇಕಿದೆ.
ಇಷ್ಟು ವರ್ಷ ಪೂರ್ವ ಸಿದ್ಧತಾ ಪರೀಕ್ಷೆ ಮುಗಿದ ಬಳಿಕ ಮುಖ್ಯ ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳಿಗೆ ಒಂದು ತಿಂಗಳು ಸ್ಟಡಿ ಹಾಲಿಡೆ ನೀಡಲಾಗುತ್ತಿತ್ತು. ಆದರೆ ಈವರ್ಷದಿಂದ ಸ್ಟಡಿ ಹಾಲಿಡೆ ಇರುವುದಿಲ್ಲ. ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಸ್ಟಡಿ ಹಾಲಿಡೆಗೆ ಬ್ರೇಕ್ ಹಾಕಲಾಗಿದೆ.
https://www.newsics.com/2026/01/20/are-you-booking-a-room-at-a-hotel-then-know-this-first/