Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ರಿವೀಲ್ ಆಯ್ತು ಬಿಗ್‌ಬಾಸ್‌ ವಿಜೇತ ಗಳಿಸಿದ ದಾಖಲೆಯ ವೋಟಿಂಗ್‌; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!
ಪ್ರಮುಖಮನರಂಜನೆ

ರಿವೀಲ್ ಆಯ್ತು ಬಿಗ್‌ಬಾಸ್‌ ವಿಜೇತ ಗಳಿಸಿದ ದಾಖಲೆಯ ವೋಟಿಂಗ್‌; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನಾಳೆ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಮೂಲಕ ದೀರ್ಘ ಅವಧಿಯ ಬಿಗ್‌ಬಾಸ್‌ನಲ್ಲಿ ಗೆದ್ದವರಾರು, ರನ್ನರ್ ಅಪ್ ಆದವರಾರು ಎಂಬ ವಿಷಯ ಹೊರಬೀಳಲಿದೆ.ಈ ಬಾರಿಯ ಫಿನಾಲೆ ವಾರಕ್ಕೆ ಆರು ಸ್ಪರ್ಧಿಗಳು ಕಾಲಿಟ್ಟಿದ್ದು, ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಮ್ಯೂಟಂರ್ ರಘು, ಕಾವ್ಯ ಶೈವ ಹಾಗೂ ಧನುಷ್ ಫೈನಲಿಸ್ಟ್‌ಗಳಾಗಿದ್ದಾರೆ.
ಈ ಆರು ಮಂದಿಯಲ್ಲಿ ಓರ್ವರು ವಿನ್ನರ್ ಪಟ್ಟವನ್ನು ಗಿಟ್ಟಿಸಿಕೊಂಡರೆ, ಓರ್ವರು ರನ್ನರ್ ಅಪ್ ಆಗಲಿದ್ದಾರೆ.
ಹೀಗೆ ಭಾರೀ ಕುತೂಹಲ ಹುಟ್ಟುಹಾಕಿರುವ ಈ ಬಾರಿಯ ಫಿನಾಲೆಯಲ್ಲಿ ಇಬ್ಬರ ನಡುವೆ ನೇರಾನೇರ ಪೈಪೋಟಿ ಇದೆ. ಹೌದು, ಆರು ಮಂದಿ ರೇಸ್‌ನಲ್ಲಿದ್ದರೂ ಜಿದ್ದಾಜಿದ್ದಿ ಮಾತ್ರ ನಡೆಯುತ್ತಿರುವುದು ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ನಡುವೆ.
ಆರಂಭದಿಂದಲೂ ಇಬ್ಬರ ನಡುವೆ ಪೈಪೋಟಿ ಇದ್ದು, ಈ ಬಾರಿ ಕಪ್ ಗೆದ್ದರೆ ಗಿಲ್ಲಿ ಅಥವಾ ಅಶ್ವಿನಿ ಎಂದು ಜನ ಮಾತನಾಡಿಕೊಳ್ಳುವ ಮಟ್ಟಕ್ಕೆ ಬಂದು ತಲುಪಿದೆ. ಅಷ್ಟರಮಟ್ಟಿಗೆ ಇಬ್ಬರ ನಡುವಿನ ಯುದ್ಧವಾಗಿ ಪರಿಣಿಮಿಸಿರುವ ಈ ಫಿನಾಲೆಯಲ್ಲಿ ಯಾರು ಟ್ರೋಫಿ ಎತ್ತಿಹಿಡಿಯಲಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.
ನಾಳೆ ವಿನ್ನರ್ ಘೋಷಣೆಯಾಗಲಿದ್ದು, ಇಂದಿನ ವಾರದ ಕಥೆಯ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಈ ಬಾರಿ ನಡೆದಿರುವ ಮತದಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಸೀಸನ್‌ 11ರಲ್ಲಿ ವಿನ್ನರ್ ಆಗಿದ್ದ ಸ್ಪರ್ಧಿ ಪಡೆದುಕೊಂಡಿದ್ದ ಮತದ ಸಂಖ್ಯೆ ಹಾಗೂ ಈ ಬಾರಿ ಅತಿಹೆಚ್ಚು ಮತ ಪಡೆದು ಅಗ್ರಸ್ಥಾನದಲ್ಲಿರುವ ಸ್ಪರ್ಧಿ ಗಳಿಸಿರುವ ಮತಗಳ ಬಗ್ಗೆ ಮಾಹಿತಿ ಹಂಚಿಕೊಂಡ ಕಿಚ್ಚನ ಮಾತುಗಳನ್ನು ಕಂಡು ಮನೆ ಮಂದಿ ಬೆಚ್ಚಿಬಿದ್ದಿದ್ದಾರೆ, ಬಾಯಿಯ ಮೇಲೆ ಕೈ ಇಟ್ಟುಕೊಂಡಿದ್ದಾರೆ.
ಕಳೆದ ಬಾರಿ ವಿನ್ನರ್ 5.23 ಕೋಟಿ ವೋಟ್‌ಗಳನ್ನು ಪಡೆದಿದ್ದರು ಎಂದು ಮಾಹಿತಿ ಹಂಚಿಕೊಂಡ ಕಿಚ್ಚ ಈ ಬಾರಿ ಜನವರಿ 16ರ ರಾತ್ರಿ 12 ಗಂಟೆಯವರೆಗೆ ಮೊದಲ ಸ್ಥಾನದಲ್ಲಿರುವ ಸ್ಪರ್ಧಿ 37 ಕೋಟಿಗೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಮೊದಲ ಸ್ಪರ್ಧಿಗೂ ಎರಡನೇ ಸ್ಪರ್ಧಿಗೂ ವೋಟ್‌ಗಳ ಅಂತರ ಹೆಚ್ಚೇನಿಲ್ಲ ಎಂದು ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಇನ್ನು ಇಂದೂ ಸಹ ವೋಟಿಂಗ್ ನಡೆದಿದ್ದು, ಯಾವ ಸ್ಪರ್ಧಿ ಕೊನೆಯ ಹಂತಕ್ಕೆ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬ ಕುತೂಹಲ ಕೆರಳಿದೆ.

https://x.com/ColorsKannada/status/2012493750593855715?ref_src=twsrc%5Etfw%7Ctwcamp%5Etweetembed%7Ctwterm%5E2012493750593855715%7Ctwgr%5E6217c60b9a4787e31ac6ae5d1e5ba50bac595328%7Ctwcon%5Es1_c10&ref_url=https%3A%2F%2Fapi-news.dailyhunt.in%2F

2.30 ಕೋಟಿ ಲಂಚಕ್ಕೆ ಬೇಡಿಕೆ; ಹಣ ಪಡೆಯವಾಗಲೇ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ

TAGGED:Bigg Boss winner revealedrecord-breaking voting; clue left as to who will be the winner!
Share This Article
Facebook Twitter Copy Link Print
Previous Article 2.30 ಕೋಟಿ ಲಂಚಕ್ಕೆ ಬೇಡಿಕೆ; ಹಣ ಪಡೆಯವಾಗಲೇ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ
Next Article ಮದುವೆಯಾಗದಿದ್ದರೂ ನಾನೂ ದೈಹಿಕವಾಗಿ ತೃಪ್ತಳಾಗಿದ್ದೇನೆ : ಗೀತಾ ಕಪೂರ್

Popular Posts

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?