Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಎಂಟಿಸಿ ಬಸ್ನಲ್ಲಿ ಮಹಿಳೆಯೊಬ್ಬರು ಉದ್ದಟತನ ತೋರಿದ್ದಾರೆ.
ನಿನ್ನೆ ರಾತ್ರಿ ಮಜೆಸ್ಟಿಕ್ನಿಂದ ದಾಬಾಸ್ಪೇಟೆಗೆ ಹೋಗುತ್ತಿದ್ದ ಡಿಪೋ ನಂಬರ್ 43ರ ಬಿಎಂಟಿಸಿ ಬಸ್ನಲ್ಲಿ ಒಬ್ಬ ಮಹಿಳೆಯ ಉದ್ದಟ ವರ್ತನೆಯಿಂದ ಸಹ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ತೊಂದರೆಗೊಳಗಾಗಿದ್ದಾರೆ.
ಮಹಿಳೆ ಬಿಎಂಟಿಸಿ ಬಸ್ನಲ್ಲಿ ಉದ್ದಟತನ ತೋರಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಕ್ತಿಯೋಜನೆ ಮೂಲಕ ಉಚಿತ ಟಿಕೆಟ್ ಪಡೆದು ನಂತರ ಹರಿದು ಬಿಸಾಡಿ ಕಂಡಕ್ಟರ್ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಆದರೆ ಈ ಯೋಜನೆಯ ಟಿಕೆಟ್ ಪಡೆದ ಮಹಿಳೆಯೊಬ್ಬರು ಟಿಕೆಟ್ ಹರಿದು ಬೀಸಾಡಿದ್ದಾರೆ ಇದನ್ನು ಗಮನಿಸಿದ ಕಂಡಕ್ಟರ್ ಪ್ರಶ್ನಿಸಿದ್ದಾರೆ. ಆದರೆ ಕಂಡಕ್ಟರ್ ಪ್ರಶ್ನೆ ಮಾಡಿದಾಗಲೂ ಮಹಿಳೆ ‘ಡೋಂಟ್ ಕೇರ್’ ಎಂದು ಉದ್ದಟತನ ತೋರಿದ್ದಾರೆ. ‘ಚೆಕಿಂಗ್ನವರು ಬರಲಿ, ಅವರ ಬಳಿ ಮಾತಾಡ್ತೇನೆ’ ಎಂದು ಅಹಂಕಾರದಿಂದ ಹೇಳಿದರು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಕಂಡಕ್ಟರ್ ಮಹಿಳೆಯನ್ನು ಹಣ ಕೊಟ್ಟು ಪುನಃ ಟಿಕೆಟ್ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಆದರೆ ಮಹಿಳೆ ಒಪ್ಪದೆ ಉದ್ದಟತನ ಮುಂದುವರಿಸಿದ್ದಾರೆ. ಟಿಕೆಟ್ ಪಡೆಯದೆ ಬಸ್ನಲ್ಲಿ ಕುಳಿತುಕೊಂಡು ಮೊಂಡು ವಾದ ಮಾಡಿದ್ದಾರೆ. ಇದರಿಂದ ಬಸ್ ಸುಮಾರು ಅರ್ಧ ಗಂಟೆ ನಿಲ್ಲಬೇಕಾಯಿತು. ಸಹ ಪ್ರಯಾಣಿಕರು ತೊಂದರೆಗೊಳಗಾದರು. ಕೊನೆಗೂ ಮಹಿಳೆ ಹಠ ಬಿಡದೆ ಟಿಕೆಟ್ ಪಡೆಯಲೇ ಇಲ್ಲ.
ಮಹಿಳೆಯೊಬ್ಬರ ಈ ವರ್ತನೆಯಿಂದ ಬಸ್ನಲ್ಲಿದ್ದ ಇತರೆ ಪ್ರಯಾಣಿಕರಿಗೂ ಸಂಕಷ್ಟ ಎದುರಾಗಿತ್ತು. ಗಂಟೆಗಟ್ಟಲೇ ಬಸ್ ರಸ್ತೆ ಮಧ್ಯೆ ನಿಲ್ಲಬೇಕಾಯಿತು. ಕೊನೆಗೂ ಆ ಮಹಿಳೆಯ ಮೊಂಡು ವಾದ ನಿಲ್ಲದ ಕಾರಣ ಕೊನೆಯಲ್ಲಿ ಒಬ್ಬ ಸಹ ಪ್ರಯಾಣಿಕರು ಮಹಿಳೆಯ ಬದಲು ಟಿಕೆಟ್ ಪಡೆದು ಸಮಸ್ಯೆ ಪರಿಹರಿಸಿದರು ಎಂದು ತಿಳಿದುಬಂದಿದೆ.