Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್
ಪ್ರಮುಖಮನರಂಜನೆ

ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನಟಿ ಕಾರುಣ್ಯಾ ರಾಮ್‌ ಅವರು ತಂಗಿ ಸಮೃದ್ಧಿ ಬೆಟ್ಟಿಂಗ್‌ ಆಡಿ, ಸಾಲ ಮಾಡಿದ್ದಾರೆ ಎಂದು ಆರೋಪ ಮಾಡಿ, ಸ್ವಂತ ತಂಗಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಸ್ಯಾಂಡಲ್ ವುಡ್ ನ ಪ್ರಸಿದ್ಧ ನಟಿ ಕಾರುಣ್ಯ ರಾಮ್ ತಮ್ಮದೇ ತಂಗಿ ಸಮೃದ್ಧಿ ರಾಮ್ ಸೇರಿದಂತೆ ಆರು ಮಂದಿಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಕುಟುಂಬದ ಒಳಗಿರುವ ಕಲಹ, ಆನ್ ಲೈನ್ ಬೆಟ್ಟಿಂಗ್, ಹಣಕಾಸು ವಿವಾದ, ಅಶ್ಲೀಲ ಸಂದೇಶ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಡೆದ ನಿಂದನೆ ಎಲ್ಲವೂ ಸೇರಿ ಪ್ರಕರಣ ಗಂಭೀರ ತಿರುವು ಪಡೆದಿದೆ. ತಂಗಿ ಸಮೃದ್ಧಿ ರಾಮ್ ಜೊತೆಗೆ ಪ್ರತಿಭ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.

ನಟಿ ಕಾರುಣ್ಯ ರಾಮ್ ತಮ್ಮ ದೂರಿನಲ್ಲಿ ತಂಗಿ ಸಮೃದ್ಧಿ ರಾಮ್ ಅವರು ಹಲವು ತಿಂಗಳುಗಳಿಂದ ಕುಟುಂಬದೊಂದಿಗೆ ವಾಸವಿದ್ದರೂ ಅನೇಕ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರೆಂದು ತಿಳಿಸಿದ್ದಾರೆ. ಖಾಸಗಿ ವ್ಯಕ್ತಿಗಳಿಂದ 25 ಲಕ್ಷ ರೂ ಸಾಲ ಪಡೆದು ಆನ್ ಲೈನ್ ಬೆಟ್ಟಿಂಗ್ ನಲ್ಲಿ ನಷ್ಟ ಮಾಡಿಕೊಂಡ ಆರೋಪ ದೂರಿನಲ್ಲಿ ಪ್ರಮುಖವಾಗಿದೆ.

ಬೆಟ್ಟಿಂಗ್ ಗೆ ಬಿದ್ದ ಪರಿಣಾಮವಾಗಿ ಹಣ ಸಂಪೂರ್ಣ ಕಳೆದುಕೊಂಡ ಸಮೃದ್ಧಿ, ಮನೆಯ ಚಿನ್ನ, ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ತನ್ನ ಖರ್ಚಿಗೆ ಬಳಸಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಮೃದ್ಧಿ ರಾಮ್ ಯಾವುದೋ ವ್ಯಾಪಾರ ಆರಂಭಿಸಿದ್ದರೂ ಅದರಲ್ಲಿ ಕೂಡ ದೊಡ್ಡ ಮಟ್ಟದ ನಷ್ಟ ಕಂಡಿದ್ದಾರೆ ಎನ್ನಲಾಗಿದೆ. ಈ ನಷ್ಟದಿಂದ ಹೊರಬರಲು ಮತ್ತೆ ಕುಟುಂಬದಿಂದ ಹಣಕಾಸು ಸಹಾಯ ಕೇಳಿದ್ದರೂ, ಪ್ರಶ್ನೆಗೆ ಉತ್ತರಿಸುವ ಬದಲು ಕುಟುಂಬ ಸದಸ್ಯರೊಂದಿಗೆ ವಾದವಿವಾದ ನಡೆಸಿ ಮನೆಯಿಂದ ದೂರವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಟುಂಬದಿಂದ ದೂರವಾದ ನಂತರವೂ ಮನೆ ಬಳಿ ಬಂದು ಗಲಾಟೆ ಸೃಷ್ಟಿಸುವುದರ ಜೊತೆಗೆ ವಾಟ್ಸಾಪ್ ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪವೂ ನಟಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇಷ್ಟದ ಬಳಿಕವೂ ಸಮೃದ್ಧಿ ರಾಮ್ ಮತ್ತು ಆಕೆಯ ಪರಿಚಿತರಾದ ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಹಾಗೂ ಸಾಗರ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ನಟಿ ಕಾರುಣ್ಯ ರಾಮ್ ಅವರ ಫೋಟೋಗಳಿಗೆ ಅವಹೇಳನಕಾರಿ ಕಮೆಂಟ್ ಗಳನ್ನು ಮಾಡಿದ್ದರೆಂದು ಆರೋಪಿಸಲಾಗಿದೆ. ಅವಾರ್ಡ್ ಫಾರ್ ಚೀಟರ್ಸ್ ಎಂಬಂತಹ ನಿಂದನಾತ್ಮಕ ಪದಗಳೊಂದಿಗೆ ಪೋಸ್ಟ್ ಮಾಡಿರುವ ವಿಷಯಗಳು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರುಣ್ಯ ರಾಮ್ ಮೊದಲಿಗೆ ಆರ್ ಆರ್ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ಕೂಡ ದಾಖಲಾಗಿದೆ. ಘಟನೆಯ ಗಂಭೀರತೆಯನ್ನು ಗಮನಿಸಿ ನಟಿ ನಂತರ ಸಿಸಿಬಿ ಪೊಲೀಸರಿಗೂ ದೂರು ನೀಡಿದ್ದಾರೆ.

17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ

TAGGED:Actress Karunya Ram went to the police station against her sister
Share This Article
Facebook Twitter Copy Link Print
Previous Article 17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ
Next Article ರಣಜಿ ಟೂರ್ನಿಯ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ಗೆ ಒಲಿದ ತಂಡದ ನಾಯಕತ್ವ

Popular Posts

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

You Might Also Like

ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?