Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮಾಜಿ ಸ್ಪರ್ಧಿಯೊಬ್ಬರಿಗೆ ಬಹುಕಾಲದ ಗೆಳೆಯ ಪ್ರಪೋಸ್ ಮಾಡಿದ್ದು, ಆಕೆ ಓಕೆ ಎಂದಿದ್ದೇ ತಡ, ಸದ್ದಿಲ್ಲದೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.
ಬಹುಕಾಲದ ಗೆಳೆಯನ ಪ್ರಪೋಸಲ್‌ಗೆ ಕಾಯುತ್ತಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಪ್ರೇಮ ನಿವೇದನೆ ಮಾಡುತ್ತಿದ್ದಂತೆ ಓಕೆ ಎಂದಿದ್ದಾಳೆ.
ಹಿಂದಿ ಬಿಗ್ ಬಾಸ್ 10ರ ಸ್ಪರ್ಧಿ ನಿತಿಬಾ ಕೌಲ್ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಕೆಲ ವರ್ಷಗಳ ಕಾಲ ಈ ಜೋಡಿ ಪ್ರಣಯ ಹಕ್ಕಿಗಳಂತೆ ಸುತ್ತಾಡಿತ್ತು. ಎಂಗೇಜ್‌ಮೆಂಟ್ ಪೋಸ್ಟ್‌ನಲ್ಲಿ ನಿತಿಬಾ ಕೌಲ್ ಈ ಕುರಿತು ಹೇಳಿಕೊಂಡಿದ್ದಾರೆ. ವರ್ಷಗಳ ಕಾಲ ತಡ ರಾತ್ರಿ ಕರೆ, ವಿಮಾನ ನಿಲ್ದಾಣಗಳಲ್ಲಿ ಗುಡ್ ಬೈ, ಹಲವು ಬಾರಿ ಕಣ್ಣೀರಿನ ಬಳಿಕ ಇದೀಗ ಬದುಕಿನ ಹೊಸ ಬಾಳಿಗೆ ಕಾಲಿಡುತ್ತಿದ್ದೇನೆ ಎಂದಿದ್ದಾರೆ.
ವರ್ಷಗಳ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ಗೆಳೆಯ ಮಂಡಿಯೂರಿ ಬಾಳಸಂಗಾತಿಯಾಗಲು ಪ್ರಪೋಸ್ ಮಾಡಿದ್ದ. ಇದಕ್ಕಿಂತ ಇನ್ನೇನು ಬೇಕು. ನನ್ನ ಕನಸಿನಂತೆ ಪ್ರಪೋಸಲ್, ಆತನ ಪ್ರೀತಿ, ಆರೈಕೆಗೆ ನಾನೇ ಅತಿ ಲಕ್ಕಿ ಗರ್ಲ್ ಎಂಬಂತೆ ಭಾಸವಾಗುತ್ತಿದೆ. ಇದೀಗ ನಮ್ಮ ಪ್ರೀತಿಯ ಪಯಣ ಎಂಗೇಜ್‌ಮೆಂಟ್ ಅರ್ಥ ಪಡೆದುಕೊಂಡಿದೆ ಎಂದು ನಿತಿಬಾ ಕೌಲ್ ಹೇಳಿಕೊಂಡಿದ್ದಾರೆ.
ಬ್ಯಾಚುಲರ್ ಆಫ್ ಬಿಸಿನೆಸ್ ಸ್ಟಡೀಸ್ ಪದವಿ ಪಡೆದಿರುವ ನಿತಿಬಾ ಕೌಲ್, ಕ್ಯಾಂಪಸ್ ಇಂಟರ್ವ್ಯೂ ಮೂಲಕ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಆದರೆ ಉದ್ಯೋಗ ತೊರೆದು ಎಂಟರ್ಟೈನ್ಮೆಂಟ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ 10ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದಾರೆ.
ಬಿಗ್ ಬಾಸ್ ಬಳಿಕ ನಿತಿಬಾ ಕೌಲ್ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದರು. ಬಿಗ್ ಬಾಸ್‌ನಲ್ಲಿ ಸಿಕ್ಕ ಖ್ಯಾತಿಯಿಂದ ಯೂಟ್ಯೂಬ್ಝನ ಮೂಲಕ ಕ್ರಿಯೇಟರ್ ಆಗಿ ಗಮನಸೆಳೆದಿದ್ದಾರೆ. ಹಲವು ವಿಡಿಯೋಗಳಲ್ಲಿ ತಮ್ಮ ಲೈಫ್ ಸ್ಟೈಲ್, ಬಾಲ್ಯದ ಕ್ರಶ್ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಿದ್ದಾರೆ.
ಎಂಗೇಜ್‌ಮೆಂಟ್ ಮಾಡಿಕೊಂಡಿರುವ ನಿತಿಬಾ ಕೌಲ್‌ಗೆ ಬಿಗ್ ಬಾಸ್ 10ರ ಸಹ ಸ್ಪರ್ಧಿಗಳು ಶುಭಕೋರಿದ್ದಾರೆ. ಇದೇ ವೇಳೆ ಅಪಾರ ಅಭಿಮಾನಿಗಳು ಶುಭ ಕೋರಿದ್ದಾರೆ. ನಿತಿಬಾ ಕೌಲ್ ಪೋಸ್ಟ್ ಕ್ಷಣಾರ್ಧಧಲ್ಲಿ ಲಕ್ಷಾಂತರ ವೀವ್ಸ್ ಹಾಗೂ ಲೈಕ್ಸ್ ಪಡೆದಿದೆ.
Relationship 35- 40 ವರ್ಷದ ಮಹಿಳೆಯರು ಬೇರೊಂದು ಸಂಬಂಧ ಹುಡುಕೋದೇಕೆ?