Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕ್ರಾನ್ಸ್ – ಮಾಂಟಾನಾ: ಸ್ವಿಟ್ಜರ್ಲ್ಯಾಂಡ್ನ ಕ್ರಾನ್ಸ್- ಮಾಂಟಾನಾದಲ್ಲಿನ ಐಷಾರಾಮಿ ಬಾರ್ವೊಂದರಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 40 ಜನರು ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಯುರೋಪ್ನ ಅಗ್ರ ಶ್ರೇಯಾಂಕಿತ ಸ್ಕೀ ತಾಣಗಳಲ್ಲಿ ಒಂದಾದ ಜನಪ್ರಿಯ ರೆಸಾರ್ಟ್ಗೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಕರ್ತರು ಧಾವಿಸಿ ಪರಿಶೀಲಿಸಿದ್ದಾರೆ ಎಂದು ಸ್ವಿಸ್ನ ಮಾಧ್ಯಮವೊಂದು ವರದಿ ಮಾಡಿದೆ.
ಬಾರ್ನಲ್ಲಿ ಸಂಭವಿಸಿರುವ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ನೈಋತ್ಯ ಸ್ವಿಟ್ಜರ್ಲ್ಯಾಂಡ್ನ ವಾಲಿಸ್ ಕ್ಯಾಂಟನ್ನಲ್ಲಿರುವ ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷದ ಆಚರಣೆಗಾಗಿ ಸುಮಾರು 100 ಜನರು ಅಲ್ಲಿ ಸೇರಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ. ನ್ಯೂಯಾರ್ಕ್ನ ಪ್ರವಾಸಿಗರೊಬ್ಬರು, ಬಾರ್ನಲ್ಲಿ ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಜ್ವಾಲೆಗಳು ಬರುತ್ತಿರುವುದನ್ನು ಚಿತ್ರೀಕರಿಸಿದ್ದಾರೆ. ಕತ್ತಲೆಯಲ್ಲಿ ಜನರು ಓಡಿಹೋಗುವುದನ್ನು ಮತ್ತು ಕಿರುಚುತ್ತಿರುವುದನ್ನು ನೋಡಿದೆ ಎಂದು ತಿಳಿಸಿದ್ದಾರೆ.
ಸಂಗೀತ ಕಛೇರಿಯ ಸಮಯದಲ್ಲಿ ಪೈರೋಟೆಕ್ನಿಕ್ಗಳನ್ನು ಬಳಸಿದ್ದರಿಂದಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಸ್ವಿಸ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಪೊಲೀಸರು ಕಾರಣ ತಿಳಿದಿಲ್ಲ ಎಂದು ಹೇಳಿದ್ದಾರೆ.
ಲೆ ಕಾನ್ಸ್ಟೆಲೇಷನ್ನಲ್ಲಿ ಮಧ್ಯರಾತ್ರಿ 1:30 ರ ಸುಮಾರಿಗೆ (0030 GMT) ಅಪರಿಚಿತ ಮೂಲದ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ವಕ್ತಾರ ಗೇಟನ್ ಲಾಥಿಯಾನ್ AFP ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹೊಸ ವರ್ಷಕ್ಕೆ ನಟ ಪ್ರಭಾಸ್ ಅಭಿನಯದ ಸ್ಪಿರಿಟ್ ಚಿತ್ರದ ಫಸ್ಟ್ ಲುಕ್ ರಿಲೀಸ್ |