Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಹಿಳೆಯರು ಹೇರ್ ಸ್ಟ್ರೈಟ್ನಿಂಗ್ ಕರ್ಲಿ ಅಂತ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಸಲೂನ್ ಗೆ ಹೋಗೋದು ಸಾಮಾನ್ಯ ವಿಷಯ. ಆದರೆ ಇಲ್ಲೊಬ್ಬ ಮಹಿಳೆ ಸಲೂನ್ ನಲ್ಲಿ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿದ್ದರಿಂದ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿರುವ ಘಟನೆ ನಡೆದಿದೆ
ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ 17 ವರ್ಷದ ಹುಡುಗಿ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಗೆ ಕಿಡ್ನಿ ಫೆಲ್ಯೂರ್ ಆಗಿದೆ. ಕೆಲವು ತಿಂಗಳ ಹಿಂದೆ 25 ವರ್ಷದ ಮಹಿಳೆಗೆ ಸಹ ಕಿಡ್ನಿ ಫೆಲ್ಯೂರ್ ಆಗಿತ್ತು.
ಜೆರುಸಲೆಮ್‌ನ ಶಾರೆ ಝೆಡೆಕ್ ವೈದ್ಯಕೀಯ ಕೇಂದ್ರದ ವರದಿಯ ಪ್ರಕಾರ, ಹೇರ್ ಸ್ಟ್ರೈಟನಿಂಗ್ ಚಿಕಿತ್ಸೆಗೆ ಒಳಗಾದ 17 ವರ್ಷದ ಬಾಲಕಿಯೊಬ್ಬಳು ತೀವ್ರವಾದ ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಸುಮಾರು ಒಂದು ತಿಂಗಳ ಹಿಂದೆ 25 ವರ್ಷದ ಮಹಿಳೆಯೂ ಸಹ ಇದೇ ಕಾರಣದಿಂದ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದರು. ವಾಂತಿ, ತಲೆಸುತ್ತು ಮತ್ತು ತೀವ್ರ ತಲೆನೋವಿನಿಂದ ಬಳಲುತ್ತಿದ್ದ ಈ ಬಾಲಕಿಯನ್ನು ಮಕ್ಕಳ ವಿಭಾಗದಲ್ಲಿ ಹಲವಾರು ದಿನಗಳ ಕಾಲ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಕೆಯನ್ನು ಸೋಮವಾರ ಡಿಸ್ಚಾರ್ಜ್ ಮಾಡಲಾಗಿದ್ದು, ಆಸ್ಪತ್ರೆಯ ಮಕ್ಕಳ ನೆಫ್ರಾಲಜಿ ವಿಭಾಗದಲ್ಲಿ ಮುಂದಿನ ಚಿಕಿತ್ಸೆ ಮುಂದುವರಿದಿದೆ.
https://www.newsics.com/2026/01/01/su-from-so-bhanu-shares-baby-bump-photo/