Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಕರ್ನಾಟಕದಾದ್ಯಂತ ಹೊಸ ವರ್ಷ ಸಂಭ್ರಮಾಚರಣೆ ಜೋರಾಗಿದೆ. ಈ ಬಾರಿ ಸಾಂಪ್ರದಾಯಿಕ ತಾಣವಾದ ಬ್ರಿಗೇಡ್ ರಸ್ತೆ ಕಳೆಗುಂದಿದ್ದು, ಯುವ ಸಮೂಹ ಕೋರಮಂಗಲದತ್ತ ಮುಖ ಮಾಡಿದೆ. ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಸುರಕ್ಷತೆ ಖಚಿತಪಡಿಸಲು ಪೊಲೀಸರು ಕೋರಮಂಗಲದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಎಂ.ಜಿ ರೋಡ್ ಮತ್ತು ಬ್ರಿಗೇಡ್ ರಸ್ತೆಗೆ ಗುಡ್ ಬೈ ಹೇಳಿರುವ ಯುವ ಸಮೂಹ ಈ ಬಾರಿ ಕೋರಮಂಗಲಕ್ಕೆ ಲಗ್ಗೆ ಇಟ್ಟಿದೆ. ನಗರದ ಎಲ್ಲಾ ಭಾಗಗಳಿಗಿಂತಲೂ ಅತಿ ಹೆಚ್ಚು ಜನಸಂದಣಿ ಕೋರಮಂಗಲದಲ್ಲಿ ಕಂಡುಬರುತ್ತಿದೆ. ಕಿಲೋಮೀಟರ್‌ಗಟ್ಟಲೆ ಯುವಕ-ಯುವತಿಯರ ಜನಸಾಗರವೇ ಹರಿದು ಬರುತ್ತಿದ್ದು, ಸಂಭ್ರಮಾಚರಣೆಗೆ ಕೋರಮಂಗಲ ಹೊಸ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.
ಈ ನಡುವೆ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ವಾಹನಗಳನ್ನು ತೆರವುಗೊಳಿಸುತ್ತಿದ್ದ ಟೋಯಿಂಗ್ ವಾಹನವೊಂದು ಪಾದಚಾರಿ ಮಹಿಳೆಗೆ ತಗುಲಿದೆ. ಇದನ್ನು ಮಹಿಳೆ ಪ್ರಶ್ನಿಸಿದಾಗ ಟೋಯಿಂಗ್ ವಾಹನ ಚಾಲಕ ಆಕೆಯೊಂದಿಗೆ ದುರ್ವರ್ತನೆ ತೋರಿ ಕಿರಿಕ್ ಮಾಡಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಇಬ್ಬರನ್ನೂ ಕಳುಹಿಸಿಕೊಟ್ಟಿದ್ದಾರೆ.