Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೈದರಾಬಾದ್: ಟಾಲಿವುಡ್‌ನಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ʼಪೆದ್ದಿʼ ಚಿತ್ರತಂಡದಿಂದ ಹೊಸ ಪೋಸ್ಟರ್ ರಿಲೀಸ್ ಆಗಿದೆ.
ರಾಮ್‌ಚರಣ್ ಅಭಿನಯದ ʼಪೆದ್ದಿʼ ಮೇಲೆ ನಿರೀಕ್ಷೆ ಹೆಚ್ಚಿದೆ. ಸಿನಿಮಾ ಅನೌನ್ಸ್ ಆದಾಗಿನಿಂದ ಮೊನ್ನೆ ಮೊನ್ನೆ ಬಂದ ‘ಚಿಕ್ರಿ’ ಹಾಡಿನವರೆಗೂ ಸಿನಿಮಾ ಸದ್ದು ಮಾಡಿದೆ.
ಇತ್ತೀಚೆಗೆ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಈಗ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಕ್ಯಾರೆಕ್ಟರ್‌ನ ಫಸ್ಟ್ ಲುಕ್ ರಿವೀಲ್ ಮಾಡಿದೆ.
ಬಹುಭಾಷೆಯಲ್ಲಿ ನೆಗೆಟಿವ್ ರೋಲ್ ಮಾಡುತ್ತಲೇ ಅಬ್ಬರಿಸಿರುವ ಜಗಪತಿ ಬಾಬು ಅವರು ʼಪೆದ್ದಿʼ ಚಿತ್ರದಲ್ಲಿ ʼಅಪ್ಪಲ ಸೂರಿʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಗಪತಿ ಬಾಬು ಹಿರಿಯನಾಗಿ ಕಾಣಿಸಿಕೊಂಡಿದ್ದಾರೆ. ಸಡಿಲವಾದ ಶರ್ಟ್ ಧರಿಸಿ, ಭುಜದ ಮೇಲೆ ಟವಲ್ ಇಟ್ಟುಕೊಂಡು, ಕನ್ನಡಕ ಧರಿಸಿಕೊಂಡಿರುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಜಗಪತಿ ಬಾಬು ಬಹುಭಾಷೆಯಲ್ಲಿ ಇದುವರೆಗೆ ನೆಗೆಟಿವ್ ಪಾತ್ರದಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ʼಪೆದ್ದಿʼಯಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕುತೂಹಲ ಹೆಚ್ಚಾಗಿದೆ.
ʼಪೆದ್ದಿʼ ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಕ್ರಿಕೆಟ್ ಝಲಕ್‌ನ ಒಂದು ಟೀಸರ್‌ನಿಂದ ಸಖತ್ ಸದ್ದು ಮಾಡಿರುವ ʼಪೆದ್ದಿʼ ಆದಾದ ಬಳಿಕ ʼಚಿಕಿರಿ ಚಿಕಿರಿʼ ಹಾಡಿನಿಂದ ಎಲ್ಲೆಡೆ ಗಮನ ಸೆಳೆದಿದೆ.
ʼಉಪ್ಪೇನಾʼ ಸಿನಿಮಾವನ್ನು ಮಾಡಿ ಸೈ ಎನ್ನಿಸಿಕೊಂಡಿರುವ ಬುಚ್ಚಿಬಾಬು ಸನಾ ನಿರ್ದೇಶನ ಮಾಡಿರುವ ʼಪೆದ್ದಿʼ 2026ರ ಮಾರ್ಚ್ 27ಕ್ಕೆ ರಿಲೀಸ್ ಆಗಲಿದೆ.